ಹೊಸದಿಲ್ಲಿ: ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರನೊಬ್ಬನನ್ನು ಕೇರಳದಲ್ಲಿ ಸೋಮವಾರ ರಾಷ್ಟ್ರೀಯ ತನಿಖಾ ದಳದ ಬಂಧಿಸಿದೆ.
ಬಂಧಿತ ಪಾಲಕ್ಕಾಡ್ ಮೂಲದ ರಿಯಾಸ್ ಎನ್ನುವವನಾಗಿದ್ದು, ಶ್ರೀಲಂಕಾದಲ್ಲಿ ಭೀಕರ ದಾಳಿ ನಡೆಸಿದ ಮಾಸ್ಟರ್ ಮೈಂಡ್
ಝಹ್ರಮ್ ಹಾಶಿಮ್ ಮತ್ತು ಝಾಕಿರ್ ನಾಯ್ಕ ಭಾಷಣಗಳಿಂದ ಪ್ರೇರೇಪಿತನಾಗಿದ್ದ ಎಂದು ವಿಚಾರಣೆ ವೇಳೆ ಹೇಳಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಿಯಾಸ್ ಐಸಿಸ್ ಉಗ್ರ ಅಬ್‌ದುಲ್ ರಷೀದ್ ಅಬುದುಲ್ಲಾ ಜೊತೆ ನಿಕಟ ಎಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ.
ಸಿರಿಯಾದಲ್ಲಿರುವ ಇನ್ನೋರ್ವ ಐಸಿಸ್ ಪ್ರಮುಖ ಉಗ್ರ ಅಬ್‌ದುಲ್ ಖಯೂಮ್ ನೊಂದಿಗೆ ರಿಯಾಸ್ ಆನ್‌ಲೈನ್ ಚಾಟ್ ಕೂಡ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
2016 ರಲ್ಲಿ ಕಾಸರಗೋಡುವಿನಂದ 15 ಮಂದಿ ನಾಪತ್ತೆಯಾಗಿದ್ದಬಗ್ಗೆ ಪ್ರಕರಣ ದಾಖಲಾಗಿದ್ದು, ಬಳಿಕ 14 ಮಂದಿ ಅಫ್ಘಾನಿಸ್ಥಾನದಲ್ಲಿ, ಓರ್ವ ಸಿರಿಯಾದಲ್ಲಿ ಐಸಿಸ್ ಸೇರಿದ್ದರು ಎಂದು ತಿಳಿದು ಬಂದಿತ್ತು.
ಮಂಗಳವಾರ ರಿಯಾಸ್‌ನನ್ನು ಕೊಚ್ಚಿಯ ಎನ್‌ಐಎ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತಿದೆ.