ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಅಕ್ಟೋಬರ್‌ನಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲೆ ನಡೆಸಿದ್ದ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ.
ಅದಕ್ಕೆ ಸಂಬಂಧಿಸಿದಂತೆ ಆಘಾತಕಾರಿ ವಿಡಿಯೋವನ್ನು ಸಂಘಟನೆ ಬಿಡುಗಡೆ ಮಾಡಿದೆ.
ಐಎಸ್ ಉಗ್ರನೊಬ್ಬ ಅತ್ಯಾಧುನಿಕ ಗನ್ ಅನ್ನು ಝಳಪಿಸುತ್ತಾ ದಾಳಿ ನಡೆಸಿದ್ದಾನೆ. ಕಾಶ್ಮೀರ ಕಣಿವೆಯಲ್ಲಿ ಹಾಡಹಗಲೇ ಈ ಕೃತ್ಯ ನಡೆದಿತ್ತು.
ಇದನ್ನೂ ಓದಿ:ರಾಜ್ಯದಲ್ಲಿ 413 ಕೋವಿಡ್ ಪಾಸಿಟಿವ್ ಸೋಂಕು ಪತ್ತೆ: ನಾಲ್ವರು ಸಾವು
ಜತೆಗೆ ಅಕ್ಟೋಬರ್‌ನಲ್ಲಿ ಬಿಹಾರ ಮೂಲದ ವೀರೇಂದ್ರ ಪಾಸ್ವಾನ್ ಎಂಬ ಬೀದಿ ಬದಿ ವ್ಯಾಪಾರಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅವರ ಕೊಲೆಯ ಹೊಣೆ ಯನ್ನೂ ಉಗ್ರ ಸಂಘಟನೆ ಐಸಿ ಸ್ ಹೊತ್ತುಕೊಂಡಿದೆ.