ಹೊಸದಿಲ್ಲಿ: ನ್ಯೂಜಿಲೆಂಡ್‌ನಲ್ಲಿ ಎರಡು ಮಸೀದಿಗಳ ಮೇಲೆ ನಡೆದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಐಸಿಸ್ ಉಗ್ರರು ಹಾಗೂ ಅಲ್‌ಖೈದಾ ಉಗ್ರರು ಜಂಟಿಯಾಗಿ ಯೋಜನೆ ರೂಪಿಸಿದ್ದು, ದಿಲ್ಲಿ, ಮುಂಬಯಿ ಹಾಗೂ ಗೋವಾದಲ್ಲಿ ದಾಳಿ ನಡೆಸುವ ಸಾಧ್ಯತೆ ಯಿದೆ ಎಂದು ಗುಪ್ತಚರ ದಳ ಎಚ್ಚರಿಸಿದೆ. ದಾಳಿಯಲ್ಲಿ ವಾಹನ ಅಥವಾ ಚಾಕುಗಳನ್ನು ಬಳಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂಬಯಿನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಹಾಗೂ ಚಾಬಾದ್ ಹೌಸ್‌ಗೆ ಭದ್ರತೆ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ದಾಳಿ ಸಂಬಂಧ ಎರಡು ಮುನ್ನೆಚ್ಚರಿಕೆ ನೀಡಲಾಗಿದೆ. ಮಾರ್ಚ್ 20ರಂದು ನೀಡಿದ ಮುನ್ನೆಚ್ಚರಿಕೆಯಲ್ಲಿ ಐಸಿಸ್ ದಾಳಿ ಬಗ್ಗೆ ಮುನ್ಸೂಚನೆ ನೀಡಲಾಗಿದೆ.
ಇತ್ತೀಚೆಗೆ ಒಂದು ಧ್ವನಿ ಸಂದೇಶ ಆನ್‌ಲೈನ್ ಗ್ರೂಪ್‌ಗ್ಳು ಹಾಗೂ ಚಾಟ್ ಪ್ಲಾಟ್‌ಫಾರಂಗಳಲ್ಲಿ ಹರಿದಾಡುತ್ತಿದ್ದು, ಮಸೀದಿಗಳ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬು ದಾಗಿ ಐಸಿಸ್‌ನ ವಕ್ತಾರ ಅಬು ಹಸನ್ ಅಲ್ ಮುಹಾಜಿರ್ ಕರೆ ನೀಡಿದ್ದಾನೆ. ಈ ಆಡಿಯೋ ಸಂದೇಶ ಹಾಗೂ ಇತರ ಚಟುವಟಿಕೆಗಳನ್ನು ಗಮನಿಸಿದಾಗ ಉಗ್ರ ಸಂಘಟನೆಗಳು ಈ ಕೃತ್ಯದ ಪ್ರತೀಕಾರಕ್ಕೆ ಹವಣಿಸುತ್ತಿರುವುದು ತಿಳಿದುಬಂದಿದೆ. ಹೀಗಾಗಿ ಇದಕ್ಕೆ ಸೂಕ್ತ ಮುನ್ನೆಚ್ಚರಿಕೆ ವಹಿಸ ಬೇಕು ಎಂದು ಸೂಚನೆ ನೀಡಲಾಗಿದೆ.
ಪೊಲೀಸರ ನಿಯೋಜನೆ ಹೆಚ್ಚಳ: ಈ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಧಾರ್ಮಿಕ ಸ್ಥಳಗಳ ಬಳಿ ಪೊಲೀಸರ ನಿಯೋಜನೆ ಹೆಚ್ಚಿಸಲಾಗಿದೆ. ಎಲ್ಲ ಬೆಳವಣಿಗೆಗಳ ಮೇಲೆ ನಾವು ಅತ್ಯಂತ ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ. ಮಾರ್ಚ್ 23 ರಂದು ಮತ್ತೂಂದು ಮಾಹಿತಿ ಲಭ್ಯವಾ ಗಿದ್ದು, ಯಹೂದಿಗಳ ನಿವಾಸ ಹಾಗೂ ಪ್ರಾರ್ಥನಾ ಸ್ಥಳಗಳ ಮೇಲೆ ಅಲ್ ಖೈದಾ ಉಗ್ರ ಸಂಘಟನೆಗಳು ನಡೆಸಬಹು ದಾದ ದಾಳಿಗಳ ಬಗ್ಗೆ ವಿವರಿಸಲಾಗಿದೆ. ಅದ ರಲ್ಲೂ ಗೋವಾದಲ್ಲಿ ನಿರ್ದಿಷ್ಟ ಸ್ಥಳಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದೂ ವಿವರಿಸಲಾಗಿದೆ. ಅಷ್ಟೇ ಅಲ್ಲ ಅಲ್ ಖೈದಾ ನಡೆಸಿದ ಸಂವಹನ ಕದ್ದಾಲಿಕೆ ಮಾಡಲಾಗಿದ್ದು, ಇದರಲ್ಲಿ ಸಾಂಪ್ರದಾಯಿ ಕವಲ್ಲದ ಶಸ್ತ್ರ ಗಳನ್ನು ಬಳಸುವ ಬಗ್ಗೆ ವಿವರಿಸಲಾಗಿದೆ. ಹೀಗಾಗಿ ಚಾಕು, ಕಾರು ಅಥವಾ ಟ್ರಕ್ ಬಳಸಿ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.