Advertisement

ಅಮೆರಿಕ ಸೇನೆ ರಹಸ್ಯ ದಾಳಿ:ಲಾಡೆನ್ ಹತ್ಯೆ ರೀತಿ ಕಾರ್ಯಾಚರಣೆ-ಐಸಿಸ್ ಮುಖ್ಯಸ್ಥ ಖುರೇಷಿ ಹತ್ಯೆ

09:41 AM Feb 04, 2022 | Team Udayavani |

ಅತ್ಮೇಹ್‌ (ಸಿರಿಯಾ): ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಇಬ್ರಾಹಿಂ ಅಲ್‌-ಹಶಿಮಿ ಅಲ್‌-ಖುರೈಷಿಯನ್ನು ಅಮೆರಿಕದ ವಿಶೇಷ ಪಡೆಗಳು ಸಿರಿಯಾದಲ್ಲಿ ಹೊಡೆದುರುಳಿಸಿದೆ.

Advertisement

ಸಿರಿಯಾದ ವಾಯವ್ಯ ಭಾಗದ ಇದ್ಲಿಬ್‌ ಪ್ರಾಂತ್ಯದಲ್ಲಿ ನಡೆದ ವಿಶೇಷ ಕಾರ್ಯಾ ಚರಣೆಯಲ್ಲಿ ಆತನನ್ನು ಹತ್ಯೆಗೈಯ್ಯಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಗುರುವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅಮೆರಿಕದ ವಿಶೇಷ ಪಡೆಗಳು ಇದ್ಲಿಬ್‌ ಪ್ರಾಂತ್ಯದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದು, 2 ತಾಸು  ಗುಂಡಿನ ಚಕಮಕಿ ನಡೆದಿದೆ. ಅಷ್ಟರಲ್ಲಿ  ಅಲ್‌ಖುರೈಷಿ ತನ್ನನ್ನು ತಾನು ಬಾಂಬ್‌ ಮೂಲಕ ಸ್ಫೋಟಿಸಿಕೊಂಡಿದ್ದು, ಕುಟುಂಬ ಸಹಿತ ನಾಶವಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next