Advertisement

ಅಂದು ಲಾಡೆನ್ ಶವಕ್ಕಾದ ಗತಿಯೇ ಇಂದು ಬಗ್ದಾದಿಯ ಶವಕ್ಕೂ ಆಯಿತೇ?

10:21 AM Oct 30, 2019 | Team Udayavani |

ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಉಗ್ರಸಂಘಟನೆಯ ಪ್ರಮುಖ ಅಬು ಬಕರ್ ಅಲ್-ಬಗ್ದಾದಿ ಅಮೆರಿಕಾ ಸೇನೆ ನಡೆಸಿದ ರೋಚಕ ಕಾರ್ಯಾಚರಣೆಯೊಂದರ ಸಂದರ್ಭದಲ್ಲಿ ತನ್ನನ್ನು ತಾನು ಸ್ಪೋಟಿಸಿಗೊಂಡು ಸತ್ತ ಬಳಿಕ ಆತನ ಅಳಿದುಳಿದ ದೇಹಭಾಗಗಳನ್ನು ಅಮೆರಿಕಾ ಸೇನೆ ದಫನ್ ಮಾಡುವ ಬದಲು ಸಮುದ್ರಕ್ಕೆ ಎಸೆದಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

Advertisement

ಸಿರಿಯಾದ ವಾಯುವ್ಯ ಭಾಗದಲ್ಲಿರುವ ಹಳ್ಳಿಯೊಂದರ ತನ್ನ ಅಡಗುತಾಣದಲ್ಲಿ ಅವಿತಿದ್ದ ಬಗ್ದಾದಿಯ ಇರವನ್ನು ಖಚಿತಪಡಿಸಿಕೊಂಡು ಆತನ ಆ ಅಡಗುತಾಣದ ಮೇಲೆ ದಾಳಿಯನ್ನು ನಡೆಸಿದ್ದ ಅಮೆರಿಕಾ ಸೇನಾಪಡೆಯ ವಿಶೇಷ ಕಾರ್ಯಾಚರಣೆ ತಂಡವು ಬಗ್ದಾದಿಯನ್ನು ಜೀವಂತ ಸೆರೆಹಿಡಿಯುವಲ್ಲಿ ವಿಫಲವಾಗಿದ್ದರೂ ಸೇನಾದಾಳಿಗೆ ಹೆದರಿದ ಆತ ತನ್ನನ್ನು ತಾನು ಸ್ಪೋಟಿಸಿಕೊಂಡು ಸತ್ತಿದ್ದ.

ಅಮೆರಿಕಾದ ನೌಕಾದಳದ ಹಡಗೊಂದರ ಮೂಲಕ ಬಗ್ದಾದಿಯ ದೇಹಕ್ಕೆ ಅಂತಿಮ ವಿಧಿವಿಧಾನಗಳನ್ನು ನಡೆಸಿ ಬಳಿಕ ಅದನ್ನು ಸಮುದ್ರಕ್ಕೆ ಎಸೆಯಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ ಇದಕ್ಕಾಗಿ ಯಾವ ಯುದ್ಧನೌಕೆಯನ್ನು ಬಳಸಲಾಗಿದೆ ಎಂಬುದನ್ನು ಅಮೆರಿಕಾ ಬಹಿರಂಗಪಡಿಸಿಲ್ಲ. ಅಲ್ ಖೈದಾ ಸಂಸ್ಥಾಪಕ ಒಸಮಾ ಬಿನ್ ಲಾಡೆನ್ ದೇಹವನ್ನು ವಿಲೇವಾರಿ ಮಾಢಲಾದ ರೀತಿಯಲ್ಲೇ ಬಗ್ದಾದಿ ದೇಹವನ್ನೂ ವಿಲೇವಾರಿ ಮಾಡಲಾಗಿದೆ ಎಂದು ಅಮೆರಿಕಾ ಅಧಿಕಾರಿಗಳು ಸುದ್ದಿ ಸಂಸ್ಥೆಗಳಿಗೆ ನೀಡಿದ ಮಾಹಿತಿಯಲ್ಲಿ ಖಚಿತಪಡಿಸಿದ್ದಾರೆ.

2011ರಲ್ಲಿ ಬಿನ್ ಲಾಡೆನ್ ಶವವನ್ನು ಉತ್ತರ ಅರಬ್ಬೀ ಸಮುದ್ರದಲ್ಲಿ ಎಸೆಯಲಾಗಿತ್ತು. ಇಸ್ಲಾಮಿಕ್ ಕಾನೂನಿನಲ್ಲಿ ಸೂಚಿಸಿರುವಂತೆ ಲಾಡೆನ್ ದೇಹಕ್ಕೆ ಸ್ನಾನವನ್ನು ಮಾಡಿಸಿ ಬಳಿಕ ಅದನ್ನು ಸರಿಯಾಗಿ ಮುಚ್ಚಿ ಬಳಿಕ ಲಾಡೆನ್ ದೇಹವನ್ನು ಸಮುದ್ರದಾಳದಲ್ಲಿ ಮುಳುಗಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next