Advertisement
ಮೊಹಮ್ಮದ್ ಮೊಸಿಯುದ್ದೀನ್ ಅಲಿಯಾಸ್ ಮೂಸಾ ಎಂಬ ಈ ಉಗ್ರನನ್ನು 2016ರಲ್ಲಿ ಪಶ್ಚಿಮ ಬಂಗಾಲದಲ್ಲಿ ಬಂಧಿಸಿ, ಜೈಲಿಗಟ್ಟಲಾಗಿತ್ತು. ಈತನ ಮೇಲೆ ನಿಗಾ ಇಡಲು ನೇಮಿಸಿದ್ದ ಗೋವಿಂದೋ ಚಂದ್ರ ಡೇ ರವಿವಾರ ಸಂಜೆ ನಿತ್ಯದ ತಪಾಸಣೆಗಾಗಿ ಕೋಣೆಯ ಬಾಗಿಲು ತೆರೆದಿದ್ದರು. ಬಾಗಿಲು ತೆರೆಯುತ್ತಿದ್ದಂತೆಯೇ ಗೋವಿಂದೋ ತಲೆಗೆ ಕಲ್ಲಿನಿಂದ ಹೊಡೆದ ಉಗ್ರ, ಚಾಕು ತೆಗೆದುಕೊಂಡು ಕತ್ತು ಸೀಳಲು ಯತ್ನಿಸಿದ್ದಾನೆ. ಪಕ್ಕದ ಸೆಲ್‌ನಲ್ಲಿದ್ದ ಇತರ ಕೈದಿಗಳು ಬಂದು ವಾರ್ಡನ್‌ನನ್ನು ರಕ್ಷಿಸಿದ್ದಾರೆ. ಲೋಹದ ತುಂಡನ್ನು ಬಳಸಿ ಮೂಸಾ ಕೋಣೆಯಲ್ಲೇ ಚಾಕು ತಯಾರಿಸಿಕೊಂಡಿದ್ದ. ಗಾಯದ ಮೇಲೆ ಸವರಲು ತನ್ನ ಕಿಸೆಯಲ್ಲಿ ರಸಗೊಬ್ಬರಗಳನ್ನೂ ಇಟ್ಟುಕೊಂಡಿದ್ದ ಎಂದು ಸಹಕೈದಿಗಳು ಹೇಳಿದ್ದಾರೆ.
Related Articles
ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್, ಜಮಾತ್- ಉದ್-ದಾವಾ ಸಂಘಟನೆಯ ಉಗ್ರ ಹಫೀಜ್ ಸಯೀದ್ ತನ್ನ ರಾಜಕೀಯ ಮಹತ್ವಾಕಾಂಕ್ಷೆಯನ್ನು ರವಿವಾರ ಬಹಿರಂಗಗೊಳಿಸಿದ್ದಾನೆ. 2018ರಲ್ಲಿ ನಡೆಯುವ ಪಾಕಿಸ್ಥಾನದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಯುಡಿ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾನೆ. ಮಿಲ್ಲಿ ಮುಸ್ಲಿಂ ಲೀಗ್ ಹೆಸರಿ ನಡಿ ಪಕ್ಷ ಸ್ಪರ್ಧಿಸಲಿದ್ದು, 2018 ಅನ್ನು ಕಾಶ್ಮೀರದ ಜನರಿಗೆ ಅರ್ಪಿಸುವುದಾಗಿ ಹೇಳಿದ್ದಾನೆ.
Advertisement
ಪಾಕ್ ಬಗ್ಗೆ ಅಮೆರಿಕ ಕಿಡಿ: ಇದೇ ವೇಳೆ, ಪಾಕಿಸ್ತಾ ನದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಅಮೆರಿಕ, “ಉಗ್ರರ ವಿರುದ್ಧ ಹೇಳಿಕೊಳ್ಳುವಂಥ ಯಾವ ಕ್ರಮವನ್ನೂ ಪಾಕಿಸ್ಥಾನ ಕೈಗೊಂಡಿಲ್ಲ’ ಎಂದು ಹೇಳಿದೆ. ತಾಲಿಬಾನ್, ಹಖನಿ ನೆಟ್‌ವರ್ಕ್ ಹಾಗೂ ಇತರೆ ಉಗ್ರ ಸಂಘಟನೆಗಳನ್ನು ನಾಶ ಮಾಡುವುದಾಗಿ ಪಾಕ್ ಭರವಸೆ ನೀಡಿತ್ತಾದರೂ, ಅದನ್ನು ಈಡೇರಿಸುತ್ತಿಲ್ಲ. ಹಫೀಜ್ ಸಯೀದ್‌ನ ಬಿಡುಗಡೆಯೂ ಅದಕ್ಕೆ ಸಾಕ್ಷಿ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.