Advertisement

ಐಸಿಸ್‌ ಮಾತ್ರೆ ಸಾಗಾಟ: ಸೆರೆ

08:25 AM Sep 25, 2018 | Karthik A |

ಹೊಸದಿಲ್ಲಿ: ಐಸಿಸ್‌ ಔಷಧ ಎಂದೇ ಕರೆಯಲಾಗಿರುವ ನೋವು ನಿವಾರಕ ಟ್ರಮಡೋಲ್‌ ಮಾತ್ರೆಗಳನ್ನು ಭಾರಿ ಪ್ರಮಾಣದಲ್ಲಿ ಸಾಗಿಸುತ್ತಿದ್ದ ಟರ್ಕಿ ಮೂಲದ ವ್ಯಕ್ತಿಯನ್ನು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ. ಟರ್ಕಿಯ ಎರ್ಬಿಲ್‌ ಎಚ್‌ ಬಳಿ 1.3 ಲಕ್ಷ ಮಾತ್ರೆಗಳಿದ್ದವು. 64 ಕಿಲೋ ಮಾತ್ರೆಗಳನ್ನು ಈತ ಇಸ್ತಾಂಬುಲ್‌ಗೆ ತೆಗೆದುಕೊಂಡು ಹೋಗುತ್ತಿದ್ದ. ಟ್ರಮಡೋಲ್‌ ಮಾತ್ರೆಗಳನ್ನು ಉಗ್ರರು ಗಾಯವಾದಾಗ ನೋವು ನಿವಾರಣೆಗೆ ಹಾಗೂ ಶಕ್ತಿ ವರ್ಧನೆಗೆ ಬಳಸುತ್ತಾರೆ. ಉಗ್ರ ಚಟುವಟಿಕೆ ಹೆಚ್ಚಿರುವ ದೇಶಗಳಲ್ಲಿ ಒಂದು ಮಾತ್ರೆಗೆ 300 ರೂ. ವೆಚ್ಚವಾಗುತ್ತದೆ. ಭಾರತ ಸೇರಿ ಬಹುತೇಕ ದೇಶಗಳಲ್ಲಿ ಈ ಮಾತ್ರೆಯ ಮಾರಾಟ ಮತ್ತು ಖರೀದಿಗೆ ನಿಯಂತ್ರಣ ಹೇರಲಾಗಿದೆ. ಬಂಧಿತ ಎರ್ಬಿಲ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಉದ್ದೇಶಕ್ಕೆ ಮತ್ತು ಅಂತಿಮವಾಗಿ ಎಲ್ಲಿಗೆ ಈ ಮಾತ್ರೆಗಳನ್ನು ಸಾಗಿಸುತ್ತಿದ್ದ ಎಂಬುದು ತಿಳಿದುಬರಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next