Advertisement

ಪಾಕ್‌ ಮಸೀದಿ ದಾಳಿ: ಹೊಣೆ ಹೊತ್ತ ಐಸಿಸ್; ಸಾವಿನ ಸಂಖ್ಯೆ 62ಕ್ಕೇರಿಕೆ

08:08 PM Mar 05, 2022 | Team Udayavani |

ಪೇಶಾವರ: ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ಶುಕ್ರವಾರ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಅಸುನೀಗಿದವರ ಸಂಖ್ಯೆ ಶನಿವಾರ 62ಕ್ಕೇರಿದೆ.

Advertisement

ಗಾಯಾಳುಗಳ ಸಂಖ್ಯೆಯೂ 200 ದಾಟಿದೆ. ಇದೇ ವೇಳೆ, ಆತ್ಮಾಹುತಿ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಶಿಯಾ ಸಮುದಾಯಕ್ಕೆ ಸೇರಿದ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಒಳನುಗ್ಗಿದ್ದ ಆತ್ಮಾಹುತಿ ಬಾಂಬರ್‌ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಈ ದಾಳಿಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ.

ಆತ್ಮಾಹುತಿ ದಾಳಿಕೋರನು ಆಫ‌^ನ್‌ ನಾಗರಿಕನಾಗಿದ್ದು, ಈ ದಾಳಿ ನಡೆಸಿದ್ದು ನಾವೇ ಎಂದು ಐಸಿಸ್‌ ಹೇಳಿದೆ. ಜತೆಗೆ, “ತಾಲಿಬಾನಿಗರು ಮತ್ತು ಪಾಕಿಸ್ತಾನಿ ಪೊಲೀಸರು ಶಿಯಾ ಮಸೀದಿಗಳಿಗೆ ಎಷ್ಟೇ ಭದ್ರತೆ ನೀಡಿದರೂ ಐಸಿಸ್‌ ಮಾತ್ರ ನಿರಂತರವಾಗಿ ದಾಳಿ ನಡೆಸುತ್ತಲೇ ಇರುತ್ತದೆ’ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next