Advertisement

ಐಸಿಸ್‌ನಿಂದ ಇಸ್ರೇಲ್‌ ಮೇಲೆ ಭೀಕರ ದಾಳಿ?

09:57 AM Jan 29, 2020 | Hari Prasad |

ಬೈರತ್‌: ಉಗ್ರಗಾಮಿ ಸಂಘಟನೆ ಐಸಿಸ್‌, ಇಸ್ರೇಲ್‌ ಮೇಲೆ ಭೀಕರ ದಾಳಿಯೆಸಗಲು ಸಜ್ಜಾಗಿದೆಯಾ? ಇತ್ತೀಚೆಗೆ ಐಸಿಸ್‌ ವಕ್ತಾರ ಅಬು ಹಮ್ಜಾ ಅಲ್‌ ಖುರೇಷಿ ಸಾಮಾಜಿಕ ಜಾಲತಾಣ ದಲ್ಲಿ ಬಿಡುಗಡೆ ಮಾಡಿರುವ ವೀಡಿಯೋವೊಂದು ಈ ಸುಳಿವು ನೀಡಿದೆ.

Advertisement

‘ಐಸಿಸ್‌ ನಾಯಕ ಅಬು ಇಬ್ರಾಹಿಂ ಅಲ್‌ ಹಾಶಿಮಿ ಅಲ್‌ ಖುರೇಷಿ ತನ್ನ ಗುಂಪನ್ನು ಹೊಸ ಯುದ್ಧಕ್ಕೆ ಸಜ್ಜಾಗಿಸಿದ್ದಾರೆ. ಎಲ್ಲ ಉಗ್ರಗಾಮಿಗಳ ಕಣ್ಣು, ಅವರು ಎಲ್ಲೇ ಇದ್ದರೂ ಜೆರುಸಲೇಮ್‌ ಮೇಲೆಯೇ ಇರಲಿದೆ. ನೀವು ಹಿಂದೆಂದೂ ಕಾಣದ ಘೋರ ಘಟನೆಗಳನ್ನು ನೋಡಲಿದ್ದೀರಿ’ ಎಂದು ಹಮ್ಜಾ 37 ನಿಮಿಷಗಳ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇದರ ಅಧಿಕೃತತೆ ಬಗ್ಗೆ ಇನ್ನೂ ಖಾತರಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next