ನವದೆಹಲಿ: ಶಾಂತಿಯುತವಾದ ಭಾರತ ದೇಶದಲ್ಲಿ ಉದ್ವಿಘ್ನ ವಾತಾವರಣ ಸೃಷ್ಟಿ ಮಾಡಿ ಕೋಮುಗಲಭೆಗಳನ್ನು ಪ್ರಚೋದಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ ಸಂಚು ರೂಪಿಸಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತಾಗಿ ಲಕ್ನೋ ಹಾಗೂ ದೆಹಲಿಯ ಕೆಲವೊಂದು ಜನರಿಗೆ ವಾಯ್ಸ್ ಓವರ್ ಇಂಟರ್ ನೆಟ್ ಪ್ರೋಟೋಕಾಲ್ ಮೂಲಕ ಕೋಮು ಗಲಭೆಗೆ ಪ್ರಚೋದಿಸುವ ಮಾಹಿತಿಗಳು ಬಂದಿದೆ ಎನ್ನಲಾಗಿದ್ದು ಲಖನೌದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಇದಕ್ಕೆ ಸಂಬಂಧಿಸಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ದೆಹಲಿಯಲ್ಲಿಯೂ ಇಂತಹ ಹಲವಾರು ಕರೆಗಳು ಬಂದಿದ್ದು ದೆಹಲಿ ಪೊಲೀಸರು ಲಕ್ನೋ ಹಾಗೂ ದೆಹಲಿಯಲ್ಲಿ ಬಂದ ಧ್ವನಿಗಳನ್ನು ತನಿಖೆ ಮಾಡುತ್ತಿದ್ದು, ಬಂದ ಸಂದೇಶದಲ್ಲಿ ರಾಮ ಮಂದಿರ ನಿರ್ಮಾಣದ ಕಾರ್ಯಕ್ಕೆ ಅಡ್ಡಿ ಪಡಿಸುವ ಹಾಗೂ ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಅಡ್ಡಿಪಡಿಸುವ ಕುರಿತು ಹೇಳಲಾಗಿದೆ.
ದೆಹಲಿ ಹಾಗೂ ಲಕ್ನೋ ಪೊಲೀಸರು ಈ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ.