ಹೊಸದಿಲ್ಲಿ: ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡ ಬೆನ್ನಲ್ಲೇ ಆ ದೇಶದಲ್ಲಿರುವ ಖಲಿಸ್ಥಾನಿ ಶಕ್ತಿಗಳ ಕುರಿತ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.
ಕೆನಡಾದಲ್ಲಿರುವ ಖಲಿಸ್ಥಾನಿಗಳು ವಿಶೇಷವಾಗಿ ಲಿಬರಲ್ ಪಾರ್ಟಿ ಮತ್ತು ನ್ಯೂ ಡೆಮಾಕ್ರಾಟಿಕ್ ಪಾರ್ಟಿಯು ವಾಂಕೂ ವರ್‌ನಲ್ಲಿರುವ ಪಾಕ್ ಐಎಸ್‌ಐ ಏಜೆಂಟ್‌ಗಳಿಂದ ನಿಯ ಮಿತವಾಗಿ ದೇಣಿಗೆಯನ್ನು ಪಡೆಯು ತ್ತಿದೆ. ಅಂದರೆ ಭಾರತ ವಿರೋಧಿ ಕೃತ್ಯಗಳಿಗೆಂದೇ ಖಲಿಸ್ಥಾನಿ ಶಕ್ತಿಗಳಿಗೆ ಸ್ವತಃ ಪಾಕ್ ಐಎಸ್‌ಐ ಹಣಕಾಸಿನ ನೆರವು ನೀಡುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಭಾರತದ ಗುಪ್ತಚರ ಮೂಲಗಳು ಬಹಿರಂಗಪಡಿಸಿವೆ.
ಅಲ್ಲದೆ, “ವಲಸೆ’ಯ ಹೆಸರಲ್ಲಿ ವಿದ್ಯಾರ್ಥಿಗಳಿಂದ ಹಣವನ್ನು ಪಡೆದು, ಖಲಿಸ್ಥಾನಿಯರು ಭಾರತ ವಿರೋಧಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜತೆಗೆ, ವ್ಯಾಸಂಗ ಮುಗಿಸಿಯೂ ಭಾರತಕ್ಕೆ ವಾಪಸ್ ಬರಲು ಇಚ್ಛಿಸದಂಥ ವಿದ್ಯಾರ್ಥಿಗಳನ್ನು ಖಲಿಸ್ಥಾನಿ ಗುಂಪುಗಳು ದುರ್ಬಳಕೆ ಮಾಡಿ, ಭಾರತದ ವಿರುದ್ಧ ಮತ್ತು ಕೆನ ಡಾದಲ್ಲಿರುವ ಭಾರತೀಯ ಹೈಕಮಿಷನ್ ವಿರುದ್ಧ ಪ್ರತಿಭಟನೆಗ ಳನ್ನು ನಡೆಸಲು ಬಳಸಿಕೊಳ್ಳುತ್ತಿವೆ ಎಂದೂ ಮೂಲಗಳು ಹೇಳಿವೆ.
ಈ ನಡುವೆ, ಖಲಿಸ್ಥಾನಿ ಟೈಗರ್ ಫೋರ್ಸ್‌ನ ಮುಖ್ಯಸ್ಥ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತ ಸರಕಾರದ ಏಜೆಂಟ್‌ಗಳ ಕೈವಾಡದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಹೇಳಿಕೆ ಅತ್ಯಂತ ಕಳವಳಕಾರಿ ಎಂದು ಬ್ರಿಟಿಷ್ ಸಿಕ್ಖ್ ಸಂಸದರಾದ ಪ್ರೀತ್ ಕೌರ್ ಗಿಲ್ ಮತ್ತು ತನ್ಮನ್‌ಜಿàತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ, “ನಾವು ಭಾರತ ಮತ್ತು ಕೆನಡಾ ನಡುವಿನ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದಿದೆ.
ಹಿಂದೂಗಳಿಗೆ ಬೆದರಿಕೆ: ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿರುವಾಗ ಭಾರತದ ಪರ ನಿಂತಿರುವಂಥ ಕೆನಡಾದಲ್ಲಿರುವ ಹಿಂದೂಗಳಿಗೆ ನಿಷೇಧಿತ ಸಿಕ್ಖ್ ಫಾರ್ ಜಸ್ಟಿಸ್(ಎಸ್‌ಎಫ್ಜೆ) ಕೆನಡಾ ತೊರೆಯುವಂತೆ ಬೆದರಿಕೆಯೊಡ್ಡಿದೆ. “ಇಂಡೋ-ಹಿಂದೂಗಳೇ, ಕೂಡಲೇ ಕೆನಡಾ ತೊರೆದು, ಭಾರತಕ್ಕೆ ಹೋಗಿ. ಖಲಿಸ್ಥಾನ ಪರ ಇರುವ ಸಿಕ್ಖರು ಯಾವತ್ತೂ ಕೆನಡಾಕ್ಕೆ ವಿಧೇಯರಾಗಿದ್ದಾರೆ ಮತ್ತು ಕೆನಡಾ ಪರವೇ ನಿಂತಿರುತ್ತಾರೆ’ ಎಂದು ಸಂಘಟನೆಯ ಮುಖ್ಯಸ್ಥ, ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಹೇಳಿದ್ದಾನೆ.
ಎನ್‌ಐಎ ತನಿಖೆ: ಇದೇ ವೇಳೆ, ಖಲಿಸ್ಥಾನಿ ಉಗ್ರರ ವಿರುದ್ಧ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಿರುಸು ಗೊಳಿಸಿದೆ. ಪಂಜಾಬ್‌ನಲ್ಲಿ ಕೋಮು ಸಾಮರಸ್ಯ ಹಾಳುಗೆಡವಲು ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಹರ್ವಿಂದರ್ ಸಿಂಗ್ ಸಂಧು ಸೇರಿದಂತೆ ಐವರು ಉಗ್ರರ ವಿರುದ್ಧ ಮಾಹಿತಿ ನೀಡಿದವರಿಗೆ ಹತ್ತು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಜೈಶಂಕರ್-ಮೋದಿ ಮಾತುಕತೆ
ಬುಧವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇನ್ನೊಂದೆಡೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಪರಸ್ಪರ ಮಾತುಕತೆ ನಡೆಸಿದ್ದಾರೆ. ಭಾರತ-ಕೆನಡಾ ಮಡುವೆ ಹೆಚ್ಚುತ್ತಿರುವ ವೈಮನಸ್ಯದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಗಾಯಕ ಶುಭ್ ಶೋ ರದ್ದು
ಪಂಜಾಬಿ-ಕೆನಡಿಯನ್ ಗಾಯಕ ಶುಭನೀತ್ ಸಿಂಗ್ ಅವರ ಕಾರ್ಯಕ್ರಮವನ್ನು ಬುಕ್‌ವೆುçಶೋ ರದ್ದು ಮಾಡಿದೆ. ಶುಭನೀತ್ ಅವರು ಖಲಿಸ್ಥಾನೀಯರ ಪರ ಮೃದು ಧೋರಣೆ ಹೊಂದಿರುವ ಕಾರಣ, ಅವರ ಗಾಯನ ಕಾರ್ಯಕ್ರಮ ಆಯೋಜಿಸಿರುವ ಬುಕ್ ಮೈ ಶೋ ಆ್ಯಪ್ ಅನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿತ್ತು.