Advertisement

ಇಶ್ರತ್‌ ಜಹಾನ್‌ ಕೇಸ್‌: ಪಾಂಡೆ ನಿರ್ದೋಷಿ

12:52 PM Feb 22, 2018 | |

ಅಹಮದಾಬಾದ್‌: 2004ರಲ್ಲಿ ನಡೆದ ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಗುಜರಾತ್‌ನ ಮಾಜಿ ಡಿಜಿಪಿ ಪಿ ಪಿ ಪಾಂಡೆಯನ್ನು ಇಲ್ಲಿನ ಸಿಬಿಐ ಕೋರ್ಟ್‌ ಆರೋಪಮುಕ್ತಗೊಳಿಸಿದೆ. ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ ಇವರ ಜೊತೆಗೆ ಇತರ ಮೂವರನ್ನೂ ದೋಷ‌ಮುಕ್ತಗೊಳಿಸಿದೆ. 

Advertisement

ಇಶ್ರತ್‌ ಜಹಾನ್‌ ಹಾಗೂ ಇತರ ಮೂವರನ್ನು ಅಪಹರಿಸಿ ಹತ್ಯೆಗೈದ ಆರೋಪ ಇವರ ಮೇಲಿತ್ತು. ಪ್ರಕರಣದಲ್ಲಿ ಹಾಜರುಪಡಿಸಿದ ಸಾಕ್ಷಿ ಗಳ ಹೇಳಿಕೆಗಳು ವ್ಯತಿರಿಕ್ತವಾಗಿವೆ. ಅಲ್ಲದೆ ಪಾಂಡೆ ವಿರು ದ್ಧ ಆರೋಪಪಟ್ಟಿ ಸಲ್ಲಿಸುವ ಮುನ್ನ ಸರಕಾರದ ಪರವಾ ನಗಿಯನ್ನೂ ಪಡೆದಿಲ್ಲ ಎಂದು ಕೋರ್ಟ್‌ ಹೇಳಿದೆ.

2004ರ ಜೂನ್‌ 15ರಂದು ಸಿಟಿ ಕ್ರೈಮ್‌ ಬ್ರಾಂಚ್‌ ಅಧಿಕಾರಿಗಳು ಅಹಮದಾಬಾದ್‌ನಲ್ಲಿ ಇಶ್ರತ್‌ ಜಹಾನ್‌, ಆಕೆಯ ಸ್ನೇಹಿತ ಜಾವೇದ್‌ ಶೇಖ್‌, ಜೀಶಾನ್‌ ಜೋಹರ್‌ ಹಾಗೂ ಅಮ್ಜದ್‌ ರಾಣಾರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next