Advertisement

ಮೈದಾನದಲ್ಲಿ ಮಂಗನಾಟ:ಇಶಾಂತ್‌ ವ್ಯಂಗ್ಯಕ್ಕೆ ಸ್ಮಿತ್‌ ಪ್ರತಿ ಭಾವ 

03:45 PM Mar 05, 2017 | |

ಬೆಂಗಳೂರು : ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಟೆಸ್ಟ್‌ ಸರಣಿಯ 2 ನೇ ಪಂದ್ಯದ  ಭಾನುವಾರದ 2 ನೇ ದಿನದಾಟದಲ್ಲಿ ಇಶಾಂತ್‌ ಶರ್ಮಾ ಅವರು ವಿಕೆಟ್‌ ಪಡೆಯಲಾರದೆ ಹತಾಶರಾಗಿ ಆಸೀಸ್‌ ಆಟಗಾರರಿಗೆ ವ್ಯಂಗ್ಯ ಮಾಡಿರುವ ವಿಚಾರ ಇದೀಗ ಕ್ರಿಕೆಟ್‌ ಲೋಕದಲ್ಲಿ ವೈರಲ್‌ ಆಗಿದೆ.

Advertisement

2 ನೇ ದಿನದಲ್ಲಿ ಬೌಲಿಂಗ್‌ ದಾಳಿ ಆರಂಭಿಸಿದ ಇಶಾಂತ್‌ ವಿಕೆಟ್‌ ಬೀಳದೆ ಇದ್ದಾಗ ಆಸೀಸ್‌ ನಾಯಕ ಸ್ಮಿತ್‌ ರತ್ತ ವ್ಯಂಗ್ಯ ಮುಖಭಾವಗಳನ್ನು ತೋರಿ ಟೀಸ್‌ ಮಾಡ ತೋಡಗಿದರು. ಸ್ಮಿತ್‌ ಮಾತ್ರವಲ್ಲದೆ ಇನ್ನೋರ್ವ ರೇನ್‌ಶೊ ರತ್ತವೂ ಅದೇ ಮುಖಭಾವ ತೋರಿದರು. ಈ ವೇಳೆ ನಾಯಕ ಕೊಹ್ಲಿ ನಗುತ್ತಾ ನಿಂತಿರುವುದು ಕಂಡು ಬಂದಿತು. 

ಆಕ್ರಮಣಕಾರಿ ಆಟಗಾರನಾಗಿರುವ ಸ್ಮಿತ್‌ ಅವರೂ ನಾನೇನು ಕಮ್ಮಿ ಇಲ್ಲ ಎಂಬಂತೆ ಮುಖವನ್ನು ವ್ಯಂಗ್ಯಮಾಡಿ ಇಶಾಂತ್‌ಗೆ ತಿರುಗೇಟು ನೀಡಿದರು. 

ಮೊದಲ ದಿನದಾಟದಲ್ಲಿ ವಿಕೆಟ್‌ ನಷ್ಟವಿಲ್ಲದೆ 2 ನೇ ದಿನದಾಟ ಆರಂಭಿಸಿದ ಆಸೀಸ್‌ 5 ವಿಕೆಟ್‌ ನಷ್ಟಕ್ಕೆ 200 ರನ್‌ಗಳಿಸಿ  ಮುನ್ನಡೆ ಕಾಯ್ದುಕೊಂಡಿದೆ. 

ರೇನ್‌ ಶೋ 60 ರನ್‌, ವಾರ್ನರ್‌ 33,ಸ್ಮಿತ್‌ 8 ,ಹ್ಯಾಂಡ್ಸ್‌ಕೊಂಬ್‌ 16 ,ಮಾರ್ಶ್‌ 0 ಗೆ ಔಟಾದರು. 

Advertisement

56 ರನ್‌ಗಳಿಸಿರುವ ಮಾರ್ಶ್‌ ಕ್ರೀಸ್‌ನಲ್ಲಿದ್ದಾರೆ. 

ಭಾರತದ ಪರ ಜಡೇಜಾ 3, ಇಶಾಂತ್‌ 1 ಮತ್ತು ಅಶ್ವಿ‌ನ್‌ 1 ವಿಕೆಟ್‌ ಪಡೆದಿದ್ದಾರೆ. 

ಭಾರತ 189 ರನ್‌ಗಳಿಗೆ ಆಲೌಟಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next