ಭಾರತ-ಚೀನ ಯುದ್ಧದ ಹಿನ್ನೆಲೆಯಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಇಶಾಳಿಗಿರುವುದು ಕೆಲವೇ ದೃಶ್ಯಗಳು. ಆದರೆ, ಈ ಪಾತ್ರಕ್ಕೆ ಬಹಳ ಮಹತ್ವವಿರುವುದರಿಂದ ಮಲಯಾಳಂ ಚಿತ್ರರಂಗದ ನಂಬರ್ ಒನ್ ನಟಿಯಾಗಿದ್ದರೂ ಇಶಾ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಳಂತೆ. ಹಾಗೇ ನೋಡಿದರೆ 16 ವರ್ಷಗಳ ಹಿಂದೆಯೇ ಇಶಾ ಹಮಾರ ದಿಲ್ ಆಪೆR ಪಾಸ್ ಹೈ ಚಿತ್ರದಲ್ಲಿ ಮುಖ ತೋರಿಸಿದ್ದಾಳೆ. ಬಾಲನಟಿಯಾಗಿದ್ದ ಇಶಾ ನಾಯಕಿಯ ತಂಗಿಯಾಗಿ ನಟಿಸಿದ್ದಳು. ಅನಂತರ ಕಾಲೇಜು ಮುಗಿಸಿದ ಬಳಿಕ ಮಾಡೆಲಿಂಗ್ ಮಾಡುತ್ತಿದ್ದ ಇಶಾಳನ್ನು ಕೈಬೀಸಿ ಕರೆದದ್ದು ಮಲಯಾಳ ಚಿತ್ರರಂಗ. ಮಲಯಾಳದಲ್ಲಿ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿದ ಬಳಿಕ ಪಕ್ಕದ ತಮಿಳು ಮತ್ತು ತೆಲುಗಿನಿಂದಲೂ ಅನೇಕ ಆಫರ್‌ಗಳು ಸಿಕ್ಕಿವೆ.
Advertisement
ಮುಂಬಯಿ ಹುಡುಗಿಯಾದ ಕಾರಣ ಬಾಲಿವುಡ್‌ನಲ್ಲಿ ಮಿಂಚಬೇಕೆಂಬ ತುಡಿತ ಇತ್ತು. ಅದಕ್ಕೀಗ ಟ್ಯೂಬ್‌ಲೈಟ್ ಅವಕಾಶ ಮಾಡಿಕೊಟ್ಟಿದೆ. ಟ್ಯೂಬ್‌ಲೈಟ್ ಬೆನ್ನಿಗೆ ಚೆಫ್ ಚಿತ್ರದಲ್ಲಿ ಸೈಫ್ ಅಲಿ ಖಾನ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಚಿತ್ರಗಳು ಗೆದ್ದರೆ ಬಾಲಿವುಡ್‌ನಲ್ಲಿ ನೆಲೆ ಸಿಗಬಹುದು ಎಂಬ ನಿರೀಕ್ಷೆ ಇಶಾಳದ್ದು. ಬಾಲಿವುಡ್‌ನಲ್ಲಿ ಈ ಹಿಂದೆಯೂ ಹಲವು ಮಂದಿ ಇಶಾಗಳಿದ್ದರು. ಇಶಾ ಕೊಪ್ಪಿಕರ್, ಇಶಾ ದೇವಲ್, ಇಶಾ ಗುಪ್ತ ಈ ಪೈಕಿ ಪ್ರಮುಖರು. ಆದರೆ ಯಾಕೋ ಇಶಾ ಹೆಸರಿನವರು ಇಲ್ಲಿ ಹೆಚ್ಚು ಬಾಳಿಕೆ ಬಂದಿಲ್ಲ. ಇಶಾ ಕೊಪ್ಪಿಕರ್ ಮತ್ತು ಇಶಾ ದೇವಲ್ ಮದುವೆಯಾಗಿ ಅರ್ಧಕ್ಕೆ ಕೆರಿಯರ್ ಮುಗಿಸಿದ್ದಾರೆ. ಇಶಾ ಗುಪ್ತ ಇನ್ನೂ ಆರಕ್ಕೇರದ ಮೂರಕಕಿಳಿಯದ ಸ್ಥಿತಿಯಲ್ಲಿದ್ದಾಳೆ. ಅವರಂತಾಗಬಾರದೆಂದು ಇಶಾ ತಲ್ವಾರ್ ಇಚ್ಛೆ.