ಬೆಂಗಳೂರು: ಈಶಾ ಫೌಂಡೇಶನ್, ಕಾರಾಗೃಹಗಳ ಇಲಾಖೆ ಸಹಯೋಗ ದೊಂದಿಗೆ ಆಯೋಜಿಸಿರುವ “ಯೋಗಕ್ಷೇಮ’ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು. ಯೋಗಕ್ಷೇಮ ಮೂಲಕ ಯೋಗಾ ಭ್ಯಾಸ ನೀಡಿ ಸಿಬ್ಬಂದಿ ಮತ್ತು ಕೈದಿಗಳ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಹೆಚ್ಚಿಸುವುದು ಇದರ ಮೂಲ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪೊಲೀಸ್ ಮಹಾ ನಿರ್ದೇಶಕ ಡಾ. ಅಲೋಕ್ ಮೋಹನ್ , ಜೈಲು ಪರಿಸರ ವ್ಯವಸ್ಥೆಯನ್ನು ಸಂಪೂರ್ಣ ವಾಗಿ ಮಾನವೀಯ ಮತ್ತು ಪರಿವರ್ತಕ ಸ್ಥಳವನ್ನಾಗಿ ಮಾಡುವುದರ ಜತೆಗೆ ಯೋಗ ಮತ್ತು ಧ್ಯಾನದಿಂದ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ಹಾಗೂ ಕೌಶಲ್ಯಾಭಿವೃದ್ಧಿಗಾಗಿ, ಕರ್ನಾಟಕ ದಾದ್ಯಂತ 50 ಜೈಲುಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:-ಬಿಜೆಪಿಗೆ ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ: ದೇಶಪಾಂಡೆ
ಯೋಗಕ್ಷೇಮ ಕಾರ್ಯಕ್ರಮವು ಒಂದು ದೊಡ್ಡ ಯೋಜನೆಯಾಗಿದ್ದು, 14 ಜೈಲುಗಳಲ್ಲಿ ಒಂದೇ ದಿನ ಆರಂಭವಾಗಿದ್ದು, ಜೈಲಿನಲ್ಲಿನ ಸಿಬ್ಬಂದಿ ಮತ್ತು ಕೈದಿಗಳನ್ನು ಒಳಗೊಂಡಂತೆ, ಯೋಗದ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ತರಬೇತಿ ನೀಡಲಾಗುತ್ತದೆ ಎಂದು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ತಿಳಿಸಿದರು. 14 ಜೈಲುಗಳಲ್ಲಿ ಯೋಗಕ್ಷೇಮ ಕಾರ್ಯಕ್ರಮವನ್ನು ಉದ್ಘಾಟಿಸಲಾಗಿದ್ದು, ಒಟ್ಟು 4000 ಜನರು ಭಾಗಿಯಾಗಿದ್ದರು.
ಈ ಕಾರ್ಯಕ್ರಮವು ಪ್ರತಿದಿನ ಒಂದು ಗಂಟೆಯ ಕಾಲ ನಡೆಯಲಿದೆ. ಯೋಗಕ್ಷೇಮವು ಯೋಗ ನಮಸ್ಕಾರ, ದೇಹ ಮತ್ತು ಮನಸ್ಸನ್ನು ಸ್ಥಿರಗೊಳಿಸುವ ಮೂರು ನಿಮಿಷದ ಪ್ರಕ್ರಿಯೆ, ನಾಡಿ ಶುದ್ಧಿ , ರೋಗನಿರೋಧಕ ಶಕ್ತಿಯನ್ನು ಮತ್ತು ಶ್ವಾಸಕೋಶ ಸಾಮಾರ್ಥ್ಯ ವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.