Advertisement

ಲೈಬ್ರರಿ ಭಸ್ಮ: ಪುಸ್ತಕ ಪ್ರೇಮಿಗೆ 15 ಲಕ್ಷ ರೂ.ದೇಣಿಗೆ

12:39 PM Apr 12, 2021 | Team Udayavani |

ಮೈಸೂರು: ಪುಸ್ತಕ ಪ್ರೇಮಿ ಸೈಯದ್‌ ಇಸಾಕ್‌ ಅವರ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಬೆನ್ನಲ್ಲೆ ಸಾಕಷ್ಟು ಜನ ಅವರ ನೆರವಿಗೆ ಧಾವಿಸಿದ್ದು, ಆನ್‌ಲೈನ್‌ಮೂಲಕ 15 ಲಕ್ಷ ರೂ. ಸಂಗ್ರಹವಾಗಿದೆ.

Advertisement

ಸೈಯದ್‌ ಅವರು ನಡೆಸುತ್ತಿದ್ದ ಸಣ್ಣ ಗ್ರಂಥಾಲಯವನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿಭಸ್ಮ ಮಾಡಿದ್ದರು. ಈ ಸುದ್ದಿ ಎಲ್ಲೆಡೆ ಹರಡಿ, ಸದ್ದು ಮಾಡಿತು. ಕೆಟ್ಟೋ ಎಂಬ ವೆಬ್‌ಸೈಟ್‌ ಸೈಯದ್‌ಅವರಿಗೆ ನೂತನ ಗ್ರಂಥಾಲಯ ನಿರ್ಮಿಸಿಕೊಡಲುಆನ್‌ಲೈನ್‌ ಫ‌ಂಡಿಂಗ್‌ ಅಭಿಯಾನ ಶುರುಮಾಡಿತ್ತು. ಇದೀಗ ಆನ್‌ಲೈನ್‌ ಮೂಲಕ 15 ಲಕ್ಷಸಂಗ್ರಹವಾಗಿದೆ. ಈ ನಡುವೆ ಬಿಜೆಪಿ ಮುಖಂಡ ರಾಜೇಂದ್ರ ಸೈಯದ್‌ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಮುಡಾ ಅಧಿಕಾರಿಗಳು ಸೈಯದ್‌ ಅವರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.ಪ್ರಕಾಶಕರು ನೆರವಿಗೆ: ರಾಜೀವ್‌ನಗರದ 2ನೇಹಂತದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪುಸ್ತಕ ಪ್ರೇಮಿಸೈಯದ್‌ ಇಸಾಕ್‌ ಅವರು ನಿರ್ಮಿಸಿದ್ದ ಗ್ರಂಥಾ ಲಯಬೆಂಕಿಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಗ್ರಂಥಾಲಯ ಪುನರ್‌ ಸ್ಥಾಪನೆಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪ್ರಕಾಶಕರು ಪುಸ್ತಕಹಾಗೂ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ. ಮಂಜುನಾಥ್‌ ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಸೂರು ನಗರ ಗ್ರಂಥಾಲಯಪ್ರಾಧಿಕಾರಿದ ಪದಾಧಿಕಾರಿಗಳು, ಮಹಾನಗರಪಾಲಿಕೆ ಆಯುಕ್ತರಾದ ಶಿಲ್ಪನಾಗ್‌ ಮತ್ತಿತರಗಣ್ಯರೊಂದಿಗೆ ಏ.12 ರಂದು ಸೋಮವಾರ ಸಂಜೆ 4 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸೈಯದ್‌ ಇಸಾಕ್‌ ಅವರು ನಡೆಸುತಿದ್ದ ಗ್ರಂಥಾಲಯ ಬೆಂಕಿಗೆ ಆಹುತಿಯಾಗಿರುವ ಜಾಗಯಾರ ಒಡೆತನದಲ್ಲಿದೆ ಎಂದು ಪರಿಶೀಲಿಸಲಾಗುತ್ತದೆ. ಪಾರ್ಕ್‌ ಜಾಗವಾಗಿದ್ದರೂ ಸಹ ಗ್ರಂಥಾಲಯ ನಿರ್ಮಿಸಲು ಕಾನೂನಿನಲ್ಲಿ ಅವಕಾಶವಿದೆ. ಉದ್ಯಾನವನವಲ್ಲದ ಪಾಲಿಕೆ ಜಾಗವಾಗಿದ್ದರೂ ಸಹ ಗ್ರಂಥಾಲಯ ನಿರ್ಮಿಸಬಹುದು. ಕೇಂದ್ರ ಸರ್ಕಾರದ ರಾಜಾರಾಮ್‌ ಮೋಹನ್‌ ರಾಯ್‌ ಗ್ರಂಥಾಲಯಪ್ರತಿಷ್ಠಾನದವರೂ ಸಹ ಈ ಗ್ರಂಥಾಲಯದ ಬಗ್ಗೆಮಾಹಿತಿ ಪಡೆದಿದ್ದಾರೆ. ಅಗತ್ಯಬಿದ್ದರೆ ಅವರೂ ಸಹ ನೆರವು ನೀಡುವರು ಎಂದು ಅವರು ತಿಳಿಸಿದ್ದಾರೆ.

Advertisement

ಸಾರ್ವಜನಿಕ ಗ್ರಂಥಾಲಯ ಇಲಾಖೆಯನಿರ್ದೇಶಕರ ಮೂಲಕ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೂ ವಸ್ತುಸ್ಥಿತಿ ಬಗ್ಗೆ ವರದಿಕಳುಹಿಸಲಾಗಿದ್ದು, ಇಲಾಖೆಯ ಮೂಲಕವೂ ನೆರವು ನೀಡುವ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸೈಯದ್‌ ಇಸಾಕ್‌ ಬೆಂಬಲಕ್ಕೆ  ಬಿ.ವೈ.ವಿಜಯೇಂದ್ರ :

ಮೈಸೂರು ನಗರದ ರಾಜೀವ್‌ ನಗರದಲ್ಲಿ ಜನರಿಗೋಸ್ಕರ ಸಾರ್ವಜನಿಕ ಗ್ರಂಥಾಲಯ ತೆರೆದು ಕನ್ನಡ ಸೇವೆ ಮಾಡುತ್ತಿದ್ದ ಸೈಯದ್‌ ಇಸಾಕ್‌ ಅವರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಂಬಂಧ ಸೈಯದ್‌ ಇಸಾಕ್‌ ಬೆಂಬಲಕ್ಕೆ ಬಿ.ವೈ.ವಿಜಯೇಂದ್ರ ನಿಂತಿದ್ದು, ನೂತನ ಗ್ರಂಥಾಲಯ ನಿರ್ಮಾಣಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಹೇಳಿದರು.

ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಸೈಯದ್‌ ಇಸಾಕ್‌ ಧೈರ್ಯ ತುಂಬಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಪ್ರೇಮಿ ಸೈಯದ್‌ ಇಸಾಕ್‌ ಪರ ಬಿ.ವೈ. ವಿಜಯೇಂದ್ರ ನಿಂತಿದ್ದಾರೆ. ನೂತನ ಗ್ರಂಥಾಲಯ ನಿರ್ಮಾಣಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ದೂರವಾಣಿ ಮೂಲಕ ಸೈಯದ್‌ ಇಸಾಕ್‌ ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸೂಚನೆ ಮೇರೆಗೆ ನಾನು ಘಟನಾ ಸ್ಥಳಕ್ಕೆ ಬಂದಿರುವುದಾಗಿ ತಿಳಿಸಿದರು. ಇಲ್ಲಿನ ಸಂಪೂರ್ಣ ವರದಿಯನ್ನು ವಿಜಯೇಂದ್ರ ಅವರಿಗೆ ನೀಡುತ್ತೇನೆ. ಇದೇ ಸ್ಥಳದಲ್ಲೇ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next