ಸಾಧ್ಯವೇ ಇಲ್ಲ. ಮುಖ್ಯವಾಗಿ ಪೂಜಾಸ್ಥಳವು ಶುದ್ಧಿಯಿಂದ ಇರುವುದು ತುಂಬಾ ಮುಖ್ಯ. ಹಲವರ ಮನೆಗಳಲ್ಲಿ ಗಮನಿಸಬಹುದು. ಅರ್ಧ ಉರಿದಾದ ಎಣ್ಣೆಬತ್ತಿಗಳು, ಅರ್ಧ ಉರಿದು ಬೂದಿಯಾದ ಎಂದೋ ಹಚ್ಚಿದ್ದ ಊದಿನ ಕಡ್ಡಿಗಳ ತುಂಡುಗಳು, ದೇವರ ಪೀಠದ ಎದುರು ಹಾಗೂ ಸುತ್ತಮುತ್ತಲ ಆವರಣಗಳು ಎಲ್ಲೆಲ್ಲೋ ಹರಡಿಕೊಂಡ ಅರಿಶಿಣ
ಕುಂಕುಮಗಳು, ಹರಿದುಬಿಸಾಕಿದ ಅಗರಬತ್ತಿಯ ಪ್ಯಾಕೆಟ್‌ನ ತುಂಡಾದ ಕಾಗದದ ಚೂರು ಸುತ್ತಿದ ಜರಿ ಪ್ರಿಂಟೆಡ್ ಕೊಳವೆಗಳು ಇತ್ಯಾದಿ ಇತ್ಯಾದಿ ಬಿದ್ದೇ ಇರುತ್ತವೆ. ಎಂದೋ ಏರಿಸಿದ ಹೂವಿನ ದಂಡೆ ಒಣಗಿ ಉರುಳಿದ್ದು, ತುಂಡಾದ ಬಿಡಿ ಹೂಗಳ ಒಣಕಲು ತುಂಡುಗಳು, ಓದಲು ಇರಿಸಿದ ಮಂತ್ರ ಪುಸ್ತಕಗಳು, ಎಷ್ಟು ಸಾಧ್ಯವೋ ಅಷ್ಟು ಕೊಳೆಯಾಗಿ ಬಿದ್ದಿರುತ್ತದೆ. ಇದಕ್ಕೆ ಅವಕಾಶ ನೀಡಬಾರದು. ಸ್ವತ್ಛತೆ ಕಾಪಾಡಬೇಕು.
Advertisement
ಗುಡಿಯ ದೇವಸ್ಥಾನ ಹಾಗೂ ದೇವಮಂದಿರಗಳ ದೇವರುಗಳು ಸ್ಥಾಪಿಸಲ್ಪಟ್ಟವು. ಅಲ್ಲಿ ಆಷೇìಯವಾದ ವಿಧಿಯೊಡನೆ, ಆಗಮಶಾಸ್ತ್ರ ನಿರೂಪಿಸಿದ ಕಟ್ಟುಪಾಡಿನಲ್ಲಿ ಕಲಾವೃದ್ಧಿಯಾಗಿ ಅಷ್ಟಬಂಧ ಪೂಜೆಗಳೊಂದಿಗೆ ಗ್ರಹಗಳು ಸ್ಥಾಪಿಸಿರುತ್ತಾರೆ. ಮನೆಯಲ್ಲಿ ಹಾಗಲ್ಲ. ನಮ್ಮ ನಮ್ಮ ಮನೆಗಳಲ್ಲಿ ಸ್ಥಿತಗೊಂಡ ದೇವರ ಮೂರ್ತಿ ಫೋಟೋ, ಲಿಂಗಸಾಲಿಗ್ರಾಮ ಅಥವಾ ಯಂತ್ರ ಚಕ್ರಗಳು ನಮ್ಮ ವೈಯುಕ್ತಿಕ ನೆಲೆಯಲ್ಲಿ ಅನುಷ್ಠಾನ ಹಾಗೂ ನೈವೇದ್ಯಗಳೊಡನೆ ನಮ್ಮ ನಂಬಿಕೆ ಹಾಗೂ ಭಕ್ತಿಯ ನಿಜ ನಿರೂಪಣೆಯೊಂದಿಗೆ ಕೂಡ್ರಿಸಲ್ಪಟ್ಟಿವೆ. ಮನೆ ಪ್ರಾರಂಭೋತ್ಸವದಲ್ಲಿ ಪೂರೈಸಿದ ವಾಸ್ತು ಪೂಜೆಯೊಂದಿಗೆ ಅವೆಲ್ಲ ಮನೆಯೊಳಗಿನ ಶಕ್ತಿಯಾಗಿ ಘನೀರ್ಭವಿಸುತ್ತದೆ.
ಮೂರ್ತಿಗಳಲ್ಲಿ ಮನಸ್ಸನ್ನು ಕೇಂದ್ರಿಕರಿಸುವಲ್ಲಿ, ಸಾಫಲ್ಯತೆ ಉಂಟಾಗಿ ಪ್ರಾರ್ಥನೆಯನ್ನು ಪೂರೈಸುವಲ್ಲಿ, ಆಗ ನೆಲೆಸುವ ಶಾಂತಿ ವಾತಾವರಣಕ್ಕೆ ಒಂದು ದಿವ್ಯತೆ ಒದಗಿ ಓಂಕಾರವೊಂದು ಕೇಳಿಸಿಕೊಳ್ಳುತ್ತದೆ. ಈ ಓಂಕಾರವೇ ಸರ್ವಶಕ್ತನಾದ ಭಗವಂತನ ಅಥವಾ ಭಗವತಿಯ ಸಾûಾತ್ಕಾರದ ತಳಹದಿಯಾಗಿದೆ. ಹೀಗಾಗಿ ಇಂಥದೊಂದು ದಿವ್ಯದ ಮುಖ್ಯ ತಳಹದಿಯಿಂದ ಮೊದಲಾಗಿ ಪಡೆಯಬೇಕಾದ ಪ್ರತಿಯೋರ್ವನ ಯಶಸ್ಸು ಮನೆಯ ಪೂಜಾಸ್ಥಳದಿಂದಲೇ ಎಂಬುದನ್ನು ನಾವೆಲ್ಲಾ ಅರಿಯಬೇಕು.
Related Articles
Advertisement