Advertisement

ಸಿಎಂ ದಿಲ್ಲಿಗೆ ಹೊರಟರೂ ಆಕಾಂಕ್ಷಿಗಳಿಗಿಲ್ಲ‌ ಉತ್ಸಾಹ!: ಇದರ ಗುಟ್ಟೇನು?

10:42 AM May 10, 2022 | Team Udayavani |

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಇಂದು ದಿಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದರೂ, ಸಂಪುಟ ಸೇರ್ಪಡೆಯ ಆಕಾಂಕ್ಷಿಗಳಿಗೆ ಮಾತ್ರ ಈ ಬಾರಿ ಉತ್ಸಾಹವೇ ಇಲ್ಲ ಎಂಬಂತಾಗಿದೆ.

Advertisement

ಸಂಪುಟ ಪುನಾರ್‌ರಚನೆ ಹಾಗೂ ವಿಸ್ತರಣೆ ಎಂಬುದು ಬಿಜೆಪಿ ಶಾಸಕರ ಪಾಲಿಗೆ ” ನಾಳೆ ಬಾ” ಕತೆಯಂತೆ ಆಗಿದೆ. ಪ್ರತಿ ಬಾರಿ ಸಿಎಂ ದಿಲ್ಲಿಗೆ ತೆರಳುವಾಗಲೂ ಅವರ ಮನೆಗೆ ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದ ಆಕಾಂಕ್ಷಿಗಳು ಈ ಬಾರಿ ಸುಳಿದಿಲ್ಲ. ಬೇರೆ ನಾಯಕರ ಮನೆಗೂ ಎಡತಾಕುತ್ತಿಲ್ಲ. ‌ಬಹುತೇಕ ಆಕಾಂಕ್ಷಿಗಳು ಮೌನಕ್ಕೆ ಶರಣಾಗಿದ್ದು, ಕೊಟ್ಟರೆ ನೋಡೋಣ ಎಂಬ ಸ್ಥಿತಿಗೆ ತಲುಪಿದ್ದಾರೆ.

ಇದರ ಜತೆಗೆ ಬಿಜೆಪಿ ಸಂಘಟನಾ ಮನಸ್ಥಿತಿಗೆ ಬಂದು ತಲುಪಿದೆ. ಹಳೆ ಮೈಸೂರು ಭಾಗದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಅನ್ಯ ಪಕ್ಷದ ನಾಯಕರನ್ನು‌ ಪಕ್ಷಕ್ಕೆ ಕರೆತರಲಾಗುತ್ತಿದೆ. ಇದೆಲ್ಲವೂ ಪಕ್ಷ ಚುನಾವಣಾ ಸಿದ್ಧತೆಗೆ ಇಳಿಯುತ್ತಿರಯವುದರ ಸೂಚನೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕುಣಿಗಲ್ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು: 6 ಮಂದಿ ಗಂಭೀರ

ಹೀಗಾಗಿ ಈ ಹಂತದಲ್ಲಿ ಸಚಿವ ಸ್ಥಾನ ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಇನ್ನು ಮೂರ್ನಾಲ್ಕು ತಿಂಗಳು‌ ಕಳೆದ ನಂತರ ಪ್ರತಿಯೊಬ್ಬ ಶಾಸಕರೂ ತಮ್ಮ ಕ್ಷೇತ್ರಕ್ಕೆ ಮರಳುವುದು ಅನಿವಾರ್ಯವಾಗಲಿದೆ. ಇಲ್ಲವಾದರೆ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟವಾಗುತ್ತದೆ. ಈ ಹಂತದಲ್ಲಿ ಸಚಿವ ಸ್ಥಾನ ಪಡೆಯುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಆಕಾಂಕ್ಷಿಗಳ ಅಭಿಪ್ರಾಯ. ಹೀಗಾಗಿ ಈ ಬಾರಿ ಸಿಎಂ ದಿಲ್ಲಿ ಭೇಟಿಗೆ ಹಿಂದಿನ ಮಹತ್ವ ಶಾಸಕರ ವಲಯದಿಂದ ಲಭ್ಯವಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next