Advertisement

ಇದು ಸರಿ ಅಲ್ವಾ?

07:39 PM Sep 30, 2019 | mahesh |

ಒಬ್ಬ ವ್ಯಕ್ತಿಯ ಮೇಲೆ ಒಂದು ಇಡೀ ಕುಟುಂಬ ಡಿಪೆಂಡ್‌ ಆಗಿರುತ್ತದೆ. ಆತ/ಆಕೆ ಬದುಕಿ ಉಳಿದರೆ ಹತ್ತಿಪ್ಪತ್ತು ಜನರ ನೆಮ್ಮದಿಗೆ ಕಾರಣ ಸಿಗುತ್ತದೆ. ಹಾಗಾಗಿ, ಆಪರೇಷನ್‌ ಥಿಯೇಟರ್‌ಗೆ ಬರುವ ಪ್ರತಿಯೊಬ್ಬರನ್ನೂ ಬದುಕಿಸಬೇಕು ಎಂಬುದೇ ನನ್ನ ಮಹದಾಸೆ. ಆಪರೇಷನ್‌ ಥಿಯೇಟರಿನಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ನನ್ನನ್ನು ಡಿಸ್ಟರ್ಬ್ ಮಾಡಬೇಡಿ ಎಂದು ಮೇಧಾವಿ ಶಸ್ತ್ರ ಚಿಕಿತ್ಸಕ ಡಾ. ಹಾರ್ವೆ ಕೃಷಿಂಗ್‌ ತಮ್ಮ ಸಿಬ್ಬಂದಿಗೆ ಮೊದಲೇ ಎಚ್ಚರಿಕೆ ನೀಡಿದ್ದರು.

Advertisement

ಅವತ್ತೂಂದು ದಿನ ಆಪರೇಷನ್‌ ನಡೆಯುತ್ತಿತ್ತು. ಆಗಲೇ ಗಡಿಬಿಡಿಯಿಂದ ಧಾವಿಸಿ ಬಂದ ಯುವ ವೈದ್ಯನೊಬ್ಬ ಅಲ್ಲಿದ್ದ ಇನ್ನಿಬ್ಬರು ಕಿರಿಯ ಡಾಕ್ಟರ್‌ಗಳೊಂದಿಗೆ ಏನನ್ನೋ ಪಿಸುಗುಟ್ಟಿದರು. ಅವರಿಬ್ಬರೂ ನಿಂತಲ್ಲೇ ಕಂಗಾಲಾಗಿ “ಈಗಲೇ ಕೃಷಿಂಗ್‌ ಅವರಿಗೆ ಸುದ್ದಿ ತಿಳಿಸಿಬಿಡು. ಹಾಗೆ ಮಾಡದಿದ್ದರೆ ಖಂಡಿತ ತಪ್ಪಾಗುತ್ತದೆ’ ಎಂದರು ಆ ಕಿರಿಯ ವೈದ್ಯ, ಅಂಜಿಕೆಯಿಂದಲೇ “ಡಾಕ್ಟರ್‌ ದಯವಿಟ್ಟು ಕ್ಷಮಿಸಿ. ನಿಮಗೆ ಒಂದು ಕೆಟ್ಟ ಸುದ್ದಿ ಹೇಳಬೇಕಾಗಿದೆ. ಅರ್ಥಗಂಟೆ ಹಿಂದೆ ನಡೆದ ಅಪಘಾತದಲ್ಲಿ ನಿಮ್ಮ ಮೊದಲ ಮಗ ತೀರಿಹೋದನಂತೆ. ನಿಮ್ಮನ್ನು ತಕ್ಷಣವೇ ಮನೆಗೆ ಕರೆದೊಯ್ಯಲು ಹೊರಗೆ ವಾಹನ ನಿಲ್ಲಿಸಿಕೊಂಡಿದ್ದೇವೆ. ದಯವಿಟ್ಟು ಬನ್ನಿ ಸಾರ್‌’ ಅಂದರು.

ಈ ಮಾತು ಕೇಳುತ್ತಿದ್ದಂತೆಯೇ ಹಾರ್ವೆ ಕೃಷಿಂಗ್‌ ಒಂದರೆಕ್ಷಣ ಕಲ್ಲಿನಂತೆ ನಿಂತರು. ಮರುಕ್ಷಣವೇ ಚೇತರಿಸಿಕೊಂಡು ತಮ್ಮನ್ನು ಯಾರು ಡಿಸ್ಟರ್ಬ್ ಮಾಡಬಾರದೆಂದು ಕಣ್ಸ್ ನ್ನೆಯಲ್ಲೇ ಸೂಚನೆ ನೀಡಿದರು. ನಂತರದ 20 ನಿಮಿಷದಲ್ಲಿ ಆಪರೇಷನ್‌ “ಸಕ್ಸಸ್‌’ ಎಂದರು. ನಂತರ ಹೊರಗೆ ಬಂದ ಕೃಷಿಂಗ್‌ ಏನೊಂದೂ ಮಾತಾಡದೆ ಕಾರ್‌ ಹತ್ತಿದರು. “ಮನೆಯಲ್ಲಿ ಎಲ್ಲರೂ ಕಾಯುತ್ತಾ ಕುಳಿತಿದ್ದಾರೆ. ಮಗ ತೀರಿಕೊಂಡ ಸುದ್ದಿ ಕೇಳಿದ ನಂತರವೂ ನೀವು ಆಪರೇಷನ್‌ ಥಿಯೇಟರಿನಲ್ಲೇ ಉಳಿಯುವ ಅಗತ್ಯವಿತ್ತಾ? ಈ ಕೆಲಸವನ್ನು ಇತರೆ ವೈದ್ಯರಿಗೆ ಬಿಟ್ಟುಕೊಡಬಹುದಿತ್ತು…’ ಅಂದರು ಜೊತೆಗಿದ್ದವರು.

ಅವರನ್ನು ಒಮ್ಮೆ ಸಾವಧಾನದಿಂದ ನೋಡಿದ ಕೃಷಿಂಗ್‌, ” ಗೆಳೆಯರೇ, ನನ್ನ ಮಗ ತೀರಿಕೊಡಿದ್ದಾನೆ ಅಲ್ಲವೆ? ವಾಸ್ತವ ಹೀಗಿರುವಾಗ ಅದೆಷ್ಟೋ ಬೇಗನೆ ಮನೆಗೆ ಹೋದರೂ ಅವನನ್ನು ಬದುಕಿಸಲು ನನ್ನಿಂದ ಸಾಧ್ಯವಿಲ್ಲ. ಆದರೆ, ಆಪರೇಷನ್‌ ಥಿಯೇಟರ್‌ನಲ್ಲಿದ್ದ ವ್ಯಕ್ತಿಯ ಜೀವ ಉಳಿಸುವುದು ನನ್ನಿಂದ ಸಾಧ್ಯವಿತ್ತು. ನಾನೀಗ ಆ ಕರ್ತವ್ಯ ಪಾಲಿಸಿದ್ದೇನೆ. ಒಂದು ಜೀವ ಉಳಿಸುವ ಮೂಲಕ ಒಂದಿಡೀ ಕುಟುಂಬಕ್ಕೆ ಸಂತೋಷ ಹಂಚಿದ ಹೆಮ್ಮೆ ನನ್ನದಾಗಿದೆ ‘ ಅಂದರು.

ಈಗ ನೀವೇ ಹೇಳಿ: ಅವರು ಮಾಡಿದ್ದು ಸರಿಯಲ್ಲವೆ?

Advertisement
Advertisement

Udayavani is now on Telegram. Click here to join our channel and stay updated with the latest news.

Next