Advertisement

ಇನ್ನು ಸಮಾನ ನಾಗರಿಕ ಸಂಹಿತೆ?

11:47 PM Aug 06, 2019 | Lakshmi GovindaRaj |

ತನ್ನ ಮೊದಲ 5 ವರ್ಷದ ಅವಧಿಯಲ್ಲಿ ಜಿಎಸ್ಟಿ ತೆರಿಗೆ ಪದ್ಧತಿ ಜಾರಿ, ರಾತ್ರೋರಾತ್ರಿ 500, 1000 ರೂ. ನೋಟು ಅಮಾನ್ಯ ಮಾಡಿದ್ದ ಮೋದಿ ಸರ್ಕಾರ, 2ನೇ ಅವಧಿ ಆರಂಭದಲ್ಲೇ ತ್ರಿವಳಿ ತಲಾಖ್‌ ನಿಷೇಧಿಸಿ ಕಾಯ್ದೆ ರಚಿಸಿದೆ. ಅದರ ಬೆನ್ನಲ್ಲೇ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದೆ.

Advertisement

ಆರಂಭದಲ್ಲಿ ಇವೆಲ್ಲ ಅಸಾಧ್ಯ ಸಾಹಸಗಳು ಸಾಧ್ಯವೇ ಇಲ್ಲ ಎಂದು ವರ್ಣಿಸಲಾಗಿತ್ತು. ಮೋದಿ ಸರ್ಕಾರ ಒಂದೊಂದನ್ನೇ ಬಹಳ ಸರಳವಾಗಿ ಜಾರಿ ಮಾಡಿರುವುದನ್ನು ಗಮನಿಸಿದಾಗ, ಸಮಾನ ನಾಗರಿಕ ಸಂಹಿತೆಯೂ ಜಾರಿಯಾಗಬಹುದಾ ಎಂಬ ಅನುಮಾನ ಹುಟ್ಟಿಕೊಂಡಿದೆ.

ರಾಜ್ಯಸಭೆಯಲ್ಲಿ ಬಹುಮತವಿಲ್ಲದಿದ್ದರೂ, ತ್ರಿವಳಿ ತಲಾಖನ್ನು ಬಿಜೆಪಿ ತಂತ್ರಗಾರಿಕೆಯಿಂದ ಜಾರಿ ಮಾಡಿತು! ಯಾವುದೇ ಕಸರತ್ತು ಮಾಡದೇ ಬಹಳ ಸುಲಭವಾಗಿ ರಾಷ್ಟ್ರಪತಿ ಅಂಕಿತದ ಮೂಲಕ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಇಲ್ಲವಾಗಿಸಿದೆ. ಈಗ ಅಸಾಧ್ಯವೆಂದು ಹೇಳಲ್ಪಟ್ಟಿರುವ ಸಮಾನ ನಾಗರಿಕ ಸಂಹಿತೆಯನ್ನೂ ಜಾರಿಮಾಡುವುದು ಅಸಂಭವವೇನಲ್ಲ ಎಂಬ ಚರ್ಚೆ ಶುರುವಾಗಿದೆ!

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹಿಂದೆ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಾ ಬರುತ್ತಿದೆ. ರಾಮಮಂದಿರ ನಿರ್ಮಾಣದ ಕುರಿತು ಬಹಳ ವೇಗವಾಗಿ ತೀರ್ಮಾನವಾಗುವ ಸಾಧ್ಯತೆಯೊಂದು ಗೋಚರವಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕುರಿತ ವಿಚಾರಣೆ ಆರಂಭವಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next