Advertisement

ಪಕ್ಷೇತರರ ಕೈಲಿದೆ ಪಾಲಿಕೆ ಲಗಾಮು?

12:10 PM Aug 31, 2018 | Team Udayavani |

ಬೆಂಗಳೂರು: ಬಿಬಿಎಂಪಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಈ ಬಾರಿಯೂ ಪಕ್ಷೇತರ ಸದಸ್ಯರ ಬೆಂಬಲ ಅನಿವಾರ್ಯವಾಗಿದೆ. ಈ ಹಿಂದೆ ಮೂರು ಬಾರಿಯೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಧಿಕಾರದ ಗದ್ದುಗೆ ಹಿಡಿದಿದೆ. ಇದೀಗ ಸತತ ನಾಲ್ಕನೇ ಬಾರಿಗೆ ಅಧಿಕಾರ ಪಡೆಯಲು ಸಿದ್ಧತೆ ನಡೆಸಿದ್ದು, ಮೇಯರ್‌ ಹಾಗೂ ಉಪಮೇಯರ್‌ ಸ್ಥಾನ ಗೆಲ್ಲಲು ಬೇಕಾದ ಸರಳ ಬಹುಮತದ ಮ್ಯಾಜಿಕ್‌ ನಂಬರ್‌ 130ರತ್ತ ದೃಷ್ಟಿ ನೆಟ್ಟಿದೆ. ಆದರೆ ಈ ಸಂಖ್ಯಾಬಲ ಸಾಧಿಸಲು ಪಕ್ಷೇತರ ಸದಸ್ಯರ ಬೆಂಬಲ ಬೇಕೇಬೇಕು.

Advertisement

ಮೇಯರ್‌, ಉಪಮೇಯರ್‌ ಚುನಾವಣೆಯ ಮತದಾರರ ಪಟ್ಟಿ ಸಿದ್ಧವಾಗಿದ್ದು, ಪಾಲಿಕೆ ಸದಸ್ಯರು, ನಗರ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ವಿಧಾನಪರಿಷತ್ತು ಸದಸ್ಯರು ಸೇರಿದಂತೆ ಒಟ್ಟು 259 ಮಂದಿ ಮತದಾರರಿದ್ದಾರೆ. ಲೆಕ್ಕಾಚಾರದ ಪ್ರಕಾರ ಸರಳ ಬಹುಮತ ಪಡೆಯಲು 130 ಮ್ಯಾಜಿಕ್‌ ನಂಬರ್‌ ಆಗಿದೆ ಎಂದು ಪಾಲಿಕೆಯ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. 

ಪಾಲಿಕೆಯಿಂದ ಸದ್ಯ ಸಿದ್ಧಪಡಿಸಿರುವ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆ ಮತದಾರರ ಪಟ್ಟಿಯನ್ನು ಆಯುಕ್ತರ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಲಾಗಿದೆ ಎನ್ನಲಾಗಿದ್ದು, ಅದರಂತೆ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯಲು 130 ಸದಸ್ಯರ ಬೆಂಬಲ ಅಗತ್ಯವಿದೆ. ಪಟ್ಟಿಯಂತೆ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಸದಸ್ಯರ ಒಟ್ಟು 127 ಆಗಿದ್ದು, ಬಿಜೆಪಿ 124 ಸದಸ್ಯರನ್ನು ಹೊಂದಿದೆ. ಇನ್ನು ಕೇವಲ 8 ಸದಸ್ಯರಿರುವ ಪಕ್ಷೇತರರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ.

ಪಕ್ಷೇತರ ಪಾಲಿಕೆ ಸದಸ್ಯರು ಕಳೆದ ಮೂರು ಅವಧಿಯಿಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಬೆಂಬಲ ನೀಡಿತ್ತಿದ್ದಾರೆ. ಆ ಪೈಕಿ ಒಬ್ಬರು ಮೂಲ ಕಾಂಗ್ರೆಸ್‌ ಸದಸ್ಯರಾಗಿದ್ದು, ಮತ್ತೂಬ್ಬ ಸದಸ್ಯ ಈ ಹಿಂದೆ ಬಿಜೆಪಿಗೆ ಬೆಂಬಲ ನೀಡಿ ವಾಪಸ್‌ ಪಡೆದಿದ್ದಾರೆ. ಇನ್ನುಳಿದ ಆರು ಮಂದಿ ಪಕ್ಷೇತರ ಸದಸ್ಯರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾದರೆ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನ ವಶಕ್ಕೆ ಪಡೆಯುವ ಅವಕಾಶವಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವಿರುವ ಕಾರಣ ಅಧಿಕಾರಕ್ಕೆ ಪ್ರಬಲ ಪೈಪೋಟಿ ನೀಡದಿರಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.

ಪಟ್ಟಿಯಿಂದ ಇಬ್ರಾಹಿಂ ಹೊರಕ್ಕೆ: ಕಳೆದ ಬಾರಿ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಯಲ್ಲಿ ಮತದಾನ ಮಾಡಿದ್ದ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಅವರ ಹೆಸರು ಈ ಬಾರಿಯ ಮತದಾರರ ಪಟ್ಟಿಯಲ್ಲಿಲ್ಲ. ಶಿವಾಜಿನಗರದಲ್ಲಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಯುವಂತೆ ಇಬ್ರಾಹಿಂ ಅವರು ಮನವಿ ನೀಡಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಇವರಿಗೆಲ್ಲಾ ಇದೆ ಮತದಾನದ ಹಕ್ಕು
ಲೋಕಸಭಾ ಸದಸ್ಯರು: ಡಿ.ಕೆ.ಸುರೇಶ, ಡಿ.ವಿ.ಸದಾನಂದ ಗೌಡ, ಪಿ.ಸಿ.ಮೋಹನ್‌, ಅನಂತಕುಮಾರ್‌, ಎಂ.ವೀರಪ್ಪ ಮೋಯ್ಲಿ.

ರಾಜ್ಯಸಭಾ ಸದಸ್ಯರು: ಬಿ.ಕೆ.ಹರಿಪ್ರಸಾದ್‌, ಎಂ.ವಿ.ರಾಜೀವ್‌ ಗೌಡ, ಡಿ.ಕುಪೇಂದ್ರ ರೆಡ್ಡಿ, ಜೈರಾಮ್‌ ರಮೇಶ್‌, ನಿರ್ಮಲಾ ಸೀತಾರಾಮನ್‌, ಕೆ.ಸಿ.ರಾಮಮೂರ್ತಿ, ರಾಜೀವ್‌ ಚಂದ್ರಶೇಖರ್‌, ಜಿ.ಸಿ.ಚಂದ್ರಶೇಖರ್‌, ಡಾ.ಎಲ್‌.ಹನುಮಂತಯ್ಯ.

ವಿಧಾನಸಭೆ ಸದಸ್ಯರು: ಎಸ್‌.ಆರ್‌.ವಿಶ್ವನಾಥ್‌, ಕೃಷ್ಣಬೈರೇಗೌಡ, ಮಂಜುನಾಥ್‌, ಭೈರತಿ ಸುರೇಶ್‌, ಮುನಿರತ್ನ, ಕೆ.ಜೆ.ಜಾರ್ಜ್‌, ಬಿ.ಎ.ಬಸವರಾಜ್‌, ಅಖಂಡ ಶ್ರೀನಿವಾಸ್‌, ಡಾ.ಸಿ.ಎಸ್‌.ಅಶ್ವತ್ಥನಾರಾಯಣ, ಎಸ್‌.ಟಿ.ಸೋಮಶೇಖರ್‌, ಕೆ.ಗೋಪಾಲಯ್ಯ, ಎಸ್‌.ರಘು, ಆರ್‌.ರೋಷನ್‌ ಬೇಗ್‌, ದಿನೇಶ್‌ ಗುಂಡೂರಾವ್‌, ಎನ್‌.ಎ.ಹ್ಯಾರೀಸ್‌, ಎಸ್‌.ಸುರೇಶ್‌ ಕುಮಾರ್‌, ವಿ.ಸೋಮಣ್ಣ, ಉದಯ್‌ ಗರುಡಾಚಾರ್‌, ಎಂ.ಕೃಷ್ಣಪ್ಪ, ಜಮೀರ್‌ ಅಹಮದ್‌ ಖಾನ್‌, ರಾಮಲಿಂಗಾ ರೆಡ್ಡಿ, ಅರವಿಂದ ಲಿಂಬಾವಳಿ, ರವಿ ಸುಬ್ರಹ್ಮಣ್ಯ, ಆರ್‌.ಅಶೋಕ್‌, ಸೌಮ್ಯಾ ರೆಡ್ಡಿ, ಎಂ.ಸತೀಶ್‌ ರೆಡ್ಡಿ, ಎಂ.ಕೃಷ್ಣಪ್ಪ, ಬಿ.ಶಿವಣ್ಣ.

ವಿಧಾನ ಪರಿಷತ್‌ ಸದಸ್ಯರು: ವಿ.ಎಸ್‌.ಉಗ್ರಪ್ಪ, ಡಾ.ಜಯಮಾಲಾ ರಾಮಚಂದ್ರ, ಎಚ್‌.ಎಂ.ರೇವಣ್ಣ, ಟಿ.ಎ.ಶರವಣ, ಡಿ.ಯು.ಮಲ್ಲಿಕಾರ್ಜುನ, ಪುಟ್ಟಣ್ಣ, ಜಿ.ರಘು ಆಚಾರ್‌, ಸಿ.ಆರ್‌.ಮನೋಹರ್‌, ಎಂ.ನಾರಾಯಣಸ್ವಾಮಿ, ಲೆಹರ್‌ ಸಿಂಗ್‌, ರಿಜ್ವಾನ್‌ ಅರ್ಷದ್‌, ಕೆ.ವಿ.ನಾರಾಯಣ ಸ್ವಾಮಿ, ಪಿ.ಆರ್‌.ರಮೇಶ್‌, ಕೆ.ಗೋವಿಂದರಾಜ್‌, ಡಾ.ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ ವಿಶ್ವಕರ್ಮ, ಎನ್‌.ರವಿಕುಮಾರ್‌, ವೈ.ಎ.ನಾರಾಯಣ ಸ್ವಾಮಿ, ಅ.ದೇವೇಗೌಡ.

ಮತದಾರರ ವಿಂಗಡಣೆ
-ಪಾಲಿಕೆ ಸದಸ್ಯರು    198
-ಶಾಸಕರು    28
-ಸಂಸದರು    5
-ರಾಜ್ಯಸಭಾ ಸದಸ್ಯರು    9
-ವಿಧಾನಪರಿಷತ್‌ ಸದಸ್ಯರು    19
-ಒಟ್ಟು    259
-ಮ್ಯಾಜಿಕ್‌ ಸಂಖ್ಯೆ    130

ಪಕ್ಷವಾರು ಸದಸ್ಯರ ಅಂಕಿ-ಅಂಶ
ಕಾಂಗ್ರೆಸ್‌ 

-ಪಾಲಿಕೆ ಸದಸ್ಯರು    75
-ಶಾಸಕರು    14
-ಸಂಸದರು    02
-ರಾಜ್ಯಸಭಾ ಸದಸ್ಯರು    06
-ವಿಧಾನ ಪರಿಷತ್‌ ಸದಸ್ಯರು    08
-ಒಟ್ಟು    105

ಬಿಜೆಪಿ
-ಪಾಲಿಕೆ ಸದಸ್ಯರು    100
-ಶಾಸಕರು    12
-ಸಂಸದರು    03
-ರಾಜ್ಯಸಭಾ ಸದಸ್ಯರು    02
-ವಿಧಾನ ಪರಿಷತ್‌ ಸದಸ್ಯರು    07 (ಒಬ್ಬ ಬಿಜೆಪಿ ಬೆಂಬಲಿತ ಪಕ್ಷೇತರ)
-ಒಟ್ಟು    124

ಜೆಡಿಎಸ್‌
-ಪಾಲಿಕೆ ಸದಸ್ಯರು    15
-ಶಾಸಕರು    02
-ಸಂಸದರು    00
-ರಾಜ್ಯಸಭಾ ಸದಸ್ಯರು    01
-ವಿಧಾನ ಪರಿಷತ್‌ ಸದಸ್ಯರು    04
-ಒಟ್ಟು    22

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next