Advertisement

ಭಾರತದಲ್ಲಿ ಮತದಾನ ಹೆಚ್ಚಳಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ಅಗತ್ಯವಿದೆಯೇ?

04:08 PM Oct 22, 2019 | keerthan |

ಮಣಿಪಾಲ: ಭಾರತದಲ್ಲಿ ಮತದಾನ ಹೆಚ್ಚಳಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ಅಗತ್ಯವಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ಉದಯರಾಜ್ ಮೂಲ್ಕಿ: ಕಡ್ಡಾಯ ಮತದಾನ ಕಾನೂನು ಜಾರಿಗೊಳಿಸಬೇಕು. ಆಧಾರ್ ಜೋಡಣೆ ಮೂಲಕ ನಕಲಿ ಮತದಾನವನ್ನು ನಿವಾರಿಸಬೇಕು. ಇ-ಮತದಾನವನ್ನು ಜಾರಿಗೊಳಿಸಬೇಕು. ತಂತ್ರಜ್ಞಾನದ ನೆರವಿನಿಂದ ನಮ್ಮ ಕಷ್ಟ ಪಟ್ಟು ದುಡಿದ ಹಣವನ್ನು ಒಬ್ಬರಿಂದ ಒಬ್ಬರಿಗೆ ಮೊಬೈಲ್ ಮೂಲಕ ಕಳುಹಿಸಬಹುದಾದರೆ, ಇ- ಮತದಾನವೂ ಅಸಾಧ್ಯವೇನಲ್ಲ. ತನ್ಮೂಲಕ ಬೇರೆ ರಾಜ್ಯಗಳಲ್ಲಿ ಉದ್ಯೋಗದಲ್ಲಿರುವವರಿಗೆ, ಭದ್ರತಾ ಪಡೆಗಳ ಸೈನಿಕರಿಗೆ, ಪ್ರವಾಸದಲ್ಲಿರುವವರಿಗೆ, ವಿದೇಶಗಳಲ್ಲಿ ಇರುವವರಿಗೆ ಹೀಗೆ ತುಂಬಾ ಜನರಿಗೆ ಅನುಕೂಲ ಆಗುತ್ತದೆ.

ರಮೇಶ್ ಬಿವಿ: ಯಾವುದೇ ಮಾರ್ಗದ ಅಗತ್ಯ ಇಲ್ಲ. ಜನ ಜಾಗೃತಿ ಒಂದೇ ದಾರಿ. ಹಕ್ಕುಗಳಿಗಿಂತ ಜವಾಬ್ದಾರಿ ಕರ್ತವ್ಯ ಹೆಚ್ಚಿನದ್ದು ಅಂತ ತಿಳುವಳಿಕೆ ಆದರೆ ಸಾಕು.

ಫ್ರಾನ್ಸಿಸ್ ಡಿಸೋಜಾ : ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿದ್ದಾರೆ ಅದಕ್ಕೇ ಯಾವ ಸರ್ಕಾರ ಬಂದ್ರೂ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ, ಅದೂ ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಇವಿಎಮ್‌ನಿಂದ ಜನ ಮೋಸ ಹೋಗ್ತಾ ಇದ್ದಾರೆ ಅದಕ್ಕೆ ಜನ ಅಂದ್ಕೊಂಡಿದ್ದಾರೆ ನಾವು ಓಟು ಹಾಕೊದು ಸುಮ್ನೆ ಕಾಟಾಚಾರಕ್ಕೆ ಅಂತ. ಅದಕ್ಕೆ ಪುನಹ ಬ್ಯಾಲೆಟ್‌ ಪೇಪರ್ನಿಂದ ಮತದಾನವನ್ನು ಜಾರಿಗೆ ತನ್ನಿ.

ಶ್ರೀಪಾದ್ ಭಟ್: ಭಾರತದಲ್ಲಿ ಜನರಿಗೆ ಚುನಾವಣೆಯ ಮಹತ್ವವನ್ನು ಮತ್ತಷ್ಟು ಮನ ಮುಟ್ಟುವಂತೆ ಸಾರಿ ಹೇಳುವ ಅವಶ್ಯಕತೆಯಿದೆ,ಮತ್ತು ಕರ್ತವ್ಯದ ಅರಿವು ಜನರಿಗೆ ಇರಬೇಕು.ಇಂದು ಎಷ್ಟೋ ಜನಕ್ಕೆ ಅದರ ಮಹತ್ವ ಗೊತ್ತಿದ್ದರೂ ಕಾರಣಾಂತರದಿಂದ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಮತದಾನವನ್ನು ಕಡ್ಡಾಯಗೊಳಿಸುವುದು ಉತ್ತಮವಾದ ಒಂದು ಪರ್ಯಾಯ ಮಾರ್ಗವಾಗಿದೆ.

Advertisement

ಅರ್ಜುನ್ ದ್ರುವ: ಮತದಾರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಬೇಕು.
* ಪದವೀಧರ ಮತದಾರರು ತಾವು ಉದ್ಯೋಗ ಮಾಡುವ ಸಂಸ್ಥೆಯಲ್ಲಿಯೇ ಮತದಾನ ಮಾಡಲು ಸ್ಮಾರ್ಟ್ ವ್ಯವಸ್ಥೆ ಜಾರಿಗೆ ತರಬೇಕು.
* ಪ್ರತಿ ಮತದಾರಿಗೆ ತಗಲುವ ಚುನಾವಣೆ ವೆಚ್ಚವನ್ನು ಮತದಾನ ಮಾಡದ ಮತದಾರರಿಂದ ಸೂಕ್ತ ಸಮಯದಲ್ಲಿ ವಸೂಲಿ ಮಾಡಬೇಕು.

ಸೂರಜ್ ಬಿರಾದಾರ್ : ದೇಶದ ನಾಗರಿಕರ ಒಳಿತಿಗಾಗಿ, ಬೆಳವಣಿಗೆಗಾಗಿ, ಬದಲಾವಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ರೀತಿಯ ಹೊಚ್ಚ ಹೊಸ ಕಾನೂನುಗಳನ್ನು ಜಾರಿಗೆ ತರುತ್ತವೆ, ಅದೇ ರೀತಿ ಚುನಾವಣೆಗಳಲ್ಲಿ ಮತದಾನದ ಹೆಚ್ಚಳಕ್ಕೆ ಸರಕಾರ, ಸಂಘ ಸಂಸ್ಥೆಗಳು, ಜನರಲ್ಲಿ ಜನಜಾಗೃತಿ ಮೂಡಿಸುವ ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಸರಕಾರ ಕೂಡ ಕಡ್ಡಾಯ ಮತದಾನದ ಹಕ್ಕು ಜಾರಿಗೊಳಿಸುವ ನಿಟ್ಟಿನಲ್ಲಿ ಹೊಸ ಕಾನೂನನ್ನು ಜಾರಿಗೆ ತಂದಾಗ ಮಾತ್ರ ಬದಲಾವಣೆ ಸಾಧ್ಯ.

ಸಣ್ಣಮಾರಪ್ಪ. ಚಂಗಾವರ; “ಆಡಳಿತದಲ್ಲಿ ನಂಬಿಕೆ ಹುಟ್ಟಿಸಬೇಕು”. ಆಡಳಿತ ನೆಡೆಸುವ ಸರ್ಕಾರಗಳು ಜನರ ನಂಬಿಕೆ ಗಳಿಸುವಂತಹ ಆಡಳಿತ ನೀಡಬೇಕು. ಆಗ ಜನರು ಅಯ್ಕೆ ಮಾಡುವ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಮೂಡುತ್ತದೆ. ಅದ್ದರಿಂದ ಸರ್ಕಾರಗಳು ಬದಲಾಗುವುದೇ ಮುಖ್ಯ ಪರ್ಯಾಯವಾಗಿದೆ. ಜನರಲ್ಲಿ ಸರ್ಕಾರದ ಮೇಲೆ ನಂಬಿಕೆ ಹುಟ್ಟುತ್ತದೆ.

ನವೀನ ಪಾಟೀಲ್: ಮತದಾನ ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಕ್ಕು ಎನ್ನುವುದಕ್ಕಿಂತ ಕರ್ತವ್ಯ ಎಂಬುದನ್ನ ಮನವರಿಕೆ ಮಾಡುವುದು, ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಮತದಾರ ಎಲ್ಲಿ ಇಂದೇಟು ಹಾಕುತ್ತಿದ್ದಾನೆ ಎಂಬುದನ್ನ ಹುಡುಕಿ ಅದಕ್ಕೆ ಪರಿಹಾರ ಕಂಡುಕೊಳ್ಳ ಬೇಕಾಗಿದೆ., ಹಾಗೂ ಮತದಾನವನ್ನು ಕಡ್ಡಾಯಗೊಳಿಸಿ ಮತದಾನದ ಹಕ್ಕು ಪಡಿತರ ಚೀಟಿ ಆಧಾರ್ ಜೊಡನೆಯೊಂಡಿಗೆ ಮೂರು ಮತ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರನ್ನು ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ನಿಸ್ಕ್ರಿಯ ಗೊಳಿಸಿ ಅವರನ್ನು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿ ಮಾಡಿದರೆ ತನ್ನಿಂತಾನೇ ಮತದಾನ ಪ್ರಕ್ರಿಯೆಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣಬಹುದು ಎಂಬುದು ನನ್ನ ಅಭಿಪ್ರಾಯ.

ಗಿರೀಶ್ ಗೌಡ : ಹೌದು ಮತದಾನ ಕಡ್ಡಾಯ ಮಾಡಬೇಕು. ಅದರ ‌ಜೊತೆಗೆ ನಕಲಿ ವೋಟರ್ ಐಡಿ ಪತ್ತೆ ಮಾಡಿ ಅದನ್ನು ರದ್ದುಗೊಳಿಸಬೇಕು.
ಮುಖ್ಯವಾಗಿ ಮತ ಚಲಾಯಿಸದ ವ್ಯಕ್ತಿಗೆ ಮುಂದಿನ ಐದು ವರ್ಷಗಳ ಕಾಲ ಸರ್ಕಾರದ ಯಾವುದೇ ಸವಲತ್ತು ನೀಡಬಾರದು.

Advertisement

Udayavani is now on Telegram. Click here to join our channel and stay updated with the latest news.

Next