Advertisement

ರೇವಣ್ಣಂಗೆ ಮೀಟರ್‌ ಇದೆಯಾ?: ಜಮೀರ್‌

10:40 AM Oct 09, 2017 | Team Udayavani |

ತುಮಕೂರು: “ತಾಕತ್ತಿದ್ದರೆ ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಲಿ’ ಎಂದು ಜೆಡಿಎಸ್‌ ಬಂಡಾಯ ಶಾಸಕ ಜಮೀರ್‌ ಅಹಮದ್‌ ಖಾನ್‌ ಸವಾಲು ಹಾಕಿದ್ದಾರೆ. ಅಲ್ಲದೆ, “ನನ್ನ ವಿರುದ್ಧ ಸ್ಪರ್ಧಿಸಲು ರೇವಣ್ಣಗೆ ಮೀಟರ್‌ ಇದೆಯಾ?” ಎಂದು ಪ್ರಶ್ನಿಸಿದ್ದಾರೆ.

Advertisement

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನಾನು ಎಚ್‌.ಡಿ ರೇವಣ್ಣಗೆ ಬಹಿರಂಗವಾಗಿ ಸವಾಲು ಹಾಕುತ್ತೇನೆ. ರೇವಣ್ಣಗೆ ಮೀಟರ್‌ ಎನ್ನುವುದು ಇದ್ದರೆ, ನನ್ನ ವಿರುದ್ಧ ಸ್ಪರ್ಧಿಸಲಿ’ ಎಂದು ಎದೆ ತಟ್ಟಿಕೊಂಡು ಸವಾಲು ಹಾಕಿದರು. “ಆರ್‌.ವಿ.ದೇವರಾಜುಗೆ ಟೋಪಿ ಹಾಕಿದವನೆಂದು ನನ್ನ ವಿರುದ್ಧ ಆರೋಪ ಮಾಡಿದ್ದೀರಿ. ಆದರೆ, ನಾನು ಹಾಗೂ ದೇವರಾಜು ಆತ್ಮೀಯ ಸ್ನೇಹಿತರು. ನಾನು ಈವರೆಗೆ ಯಾರಿಗೂ ಟೋಪಿ ಹಾಕಿಲ್ಲ. ಆದರೆ, ರೇವಣ್ಣ ಅವರು ಸ್ವಂತ ತಮ್ಮ ಕುಮಾರಸ್ವಾಮಿಗೆ 2006ರಲ್ಲಿ ಟೋಪಿ ಹಾಕಿದ್ದಾರೆ.

ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರ ರಚಿಸಲು ಅಡ್ಡಗಾಲು ಹಾಕಿದ್ದ ರೇವಣ್ಣ, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ನೀನು ಮುಖ್ಯಮಂತ್ರಿಯಾದರೆ ದೇವೇಗೌಡರು ವಿಷ ಕುಡಿದುಸಾಯುತ್ತಾರೆ ಎಂದು ಬ್ಲಾಕ್‌ ಮೇಲ್‌ ಮಾಡಿ ಸರ್ಕಾರ ರಚನೆಗೆ ಅಡ್ಡಗಾಲು ಹಾಕಿದ್ದರು. ಬಳಿಕ, ದೇವೇಗೌಡರಿಗೇ ಟೋಪಿ ಹಾಕಿ ಮಂತ್ರಿಯಾದರು. ಸಿಬಿಐ ತನಿಖೆ ನಡೆಸಿದರೆ ನಿಮ್ಮ ಬಣ್ಣ ಬಯಲಾಗುತ್ತೆ’ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next