ಆಡಳಿತ ದೃಷ್ಟಿಯಿಂದ ಮೈತ್ರಿ ಸರಕಾರಕ್ಕಿಂತ ಸ್ಪಷ್ಟ ಬಹುಮತದ ಸರ್ಕಾರ ರಚನೆಗೆ ಹೆಚ್ಚಿನ ಒತ್ತು ಕೊಡುವ ಅಗತ್ಯವಿದೆಯೇ ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ.
ನಾರಾಯಣ್ ದೇವಾಡಿಗ : ಸ್ಪಷ್ಟ ಬಹುಮತ ಬರಲು ಪ್ರತಿಯೊಬ್ಬ ಮತದಾರ ಚಾಚೂತಪ್ಪದೆ ಮತ ಒತ್ತಲು ಬರಬೇಕು. ಆಗ ಮಾತ್ರ ಸ್ಪಷ್ಟ ಬಹುಮತದ ಸರಕಾರ ಬರಲು ಸುಗಮ ಅವಕಾಶ ಸಿಗಬಹುದು. ಈಗಂತೂ ಜಾತಿ ರಾಜಕಾರಣದಲ್ಲಿ ರಾಜಕೀಯ ವ್ಯವಸ್ಥೆ ಹೊಲಸಾಗಿ ಹೋಗಿದೆ. ಎಲ್ಲಿಯವರೆಗೆ ಅಂದರೆ ಸಮಾಜದ ಜನರಿಗೆ ಶಾಂತಿ ಭೋದನೆ ಮಾಡುವ ಸ್ವಾಮಿಜಿಗಳು ಸಹ ಇಂದು ಜಾತಿಯನ್ನು ಎತ್ತಿಕಟ್ಟಿ ರಾಜಕೀಯ ವ್ಯವಸ್ಥೆಯನ್ನು ಕುಲಗೆಟ್ಟಿಸಿ ಬಿಟ್ಟಿದ್ದಲ್ಲದೆ ಇಂದಿನ ಸಮಾಜವನ್ನ ಹಾಳುಗೆಡವಿ ಬಿಟ್ಟಿದ್ದಾರೆ. ಈ ಎಲ್ಲಾ ಕೆಲವು ಕಾರಣದಿಂದ ಹೆಚ್ಚಿನ ಜನರಿಗೆ ಈಗಿನ ರಾಜಕೀಯ ವ್ಯವಸ್ಥೆಯ ಮೇಲೆ ಜಿಗುಪ್ಸೆ ಬಂದಿದೆ. ಸರ್ವರಿಗೂ ಸಮಪಾಲು ಅನ್ನುವ ಕಾನೂನು ಜಾರಿಗೆ ತಂದಾಗ ಮಾತ್ರ ಜನ ಪ್ರಜಾತಂತ್ರದ ವ್ಯವಸ್ಥೆಯ ಮೇಲೆ ನಂಬಿಕೆ ಬರಬಹುದು. ಆಗ ಪ್ರತಿಯೊಬ್ಬ ಮತದಾರನು ಸಹ ಮತ ಚಲಾಯಿಸುವ ಹುಮ್ಮಸ್ಸು ಬರಬಹುದು.
ವಾಸಿಂ ಇಮ್ರಾನ್ ಖಾನ್ : ಯಾವುದೇ ಪಕ್ಷವಾಗಲಿ, ಒಂದೇ ಪಕ್ಷವು ರಾಜ್ಯವನ್ನು ಆಳಬೇಕೆಂದು ನಾನು ಬಯಸುತ್ತೇನೆ. ಏಕ ಪಕ್ಷದ ನಿಯಮವು ನಿರುದ್ಯೋಗದಂತಹ ಅನೇಕ ಸಮಸ್ಯೆಗಳನ್ನು ನಿರ್ಮೂಲನೆ ಮಾಡುತ್ತದೆ. ಒಂದೇ ಪಕ್ಷದ ಆಡಳಿತವು ಅವರಾಗಿದ್ದರೆ ಸುಲಭವಾಗಿ ಹೆಚ್ಚಿನ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು.
ಶುಬಿತ್ ಕುಮಾರ್ : ನನ್ನ ಪ್ರಕಾರ ಮೈತ್ರಿ ಸರ್ಕಾರವೇ ಉತ್ತಮ. ಏಕೆಂದರೆ ಸ್ವಲ್ಪ ಮಟ್ಟಿಗೆ ಭಯ ಇರುತ್ತೆ ಜನರ ಮೆಚ್ಚುಗೆ ಪಡೆಯಲು ಅಭಿವೃದ್ಧಿನೂ ಆಗುತ್ತೆ..ಭ್ರಷ್ಟಾಚಾರ ಕಡಿಮೆ ಆಗುತ್ತದೆ. ಒಂದು ಪಕ್ಷ ಮಾತ್ರ ಅಡಳಿತ ಮಾಡಿದರೆ ಜನರ ಕೂಗು ಕೇಳಿಸುವುದಿಲ್ಲ.. ಭ್ರಷ್ಟಾಚಾರವು ಜಾಸ್ತಿ ಆಗುತ್ತದೆ.
ಸಣ್ಣಮಾರಪ್ಪ ಚಂಗಾವರ : ಮೈತ್ರಿ ಸರ್ಕಾರ ಎರಡು ಸರ್ಕಾರಗಳು ಅಧಿಕಾರದಲ್ಲಿದ್ದಂತೆ. ಎರಡು ಪಕ್ಷಗಳು ಸೇರಿ ರಚನೆಯಾಗಿರುವುದರಿಂದ ಭಿನ್ನ ಸಿದ್ಧಾಂತ ಹೊಂದಿರುತ್ತವೆ. ಚುನಾವಣಾ ದೃಷ್ಟಿಯಿಂದ ತಮಗೆ ಅನುಕೂಲವಾಗುವ ಕಾರ್ಯಗಳಲ್ಲಿ ಒಂದು ಪಕ್ಷ ಒಪ್ಪಿದರೆ, ಮತ್ತೊಂದು ಪಕ್ಷ ವಿರೋಧಿಸುತ್ತದೆ. ಆಗ ಸರ್ಕಾರದಲ್ಲಿ ಕೆಲಸಕ್ಕಿಂತ ಮುಸುಕಿನ ಗುದ್ದಾಟವೇ ಹೆಚ್ಚುತ್ತವೆ.