Advertisement
“ಹಲವು ರಾಜ್ಯಗಳ ಬುಡಕಟ್ಟು ಜನಾಂಗದ ಪ್ರಮುಖ ಆಹಾರವಾಗಿರುವ ಕೆಂಪಿರುವೆ ಚಟ್ನಿ ಸೇವನೆ ಕೊರೊನಾಕ್ಕೆ ಪರಿಣಾಮಕಾರಿ ಮದ್ದೇ ಎಂದು ಪರಿಶೀಲಿಸಿ’ ಎಂದು ಒಡಿಶಾ ಹೈಕೋರ್ಟ್, ಆಯುಷ್ ಸಚಿವಾಲಯ ಮತ್ತು ಕೌನ್ಸಿಲ್ ಆಫ್ ಮೆಡಿಕಲ್ ಆ್ಯಂಡ್ ರಿಸರ್ಚ್‌ಗೆ ನಿರ್ದೇಶಿಸಿದೆ!ಕೆಂಪಿರುವೆ ಚಟ್ನಿಯಲ್ಲಿನ ವೈರಾಣು ಕೊಲ್ಲುವಿಕೆ ಶಕ್ತಿಯ ಕುರಿತು ಸಮಗ್ರ ಸಂಶೋಧನೆ ನಡೆಸಿ, ವರದಿ ಸಲ್ಲಿಸಲು 3 ತಿಂಗಳ ಗಡುವನ್ನೂ ಕೋರ್ಟ್ ನೀಡಿದೆ.
ಒಡಿಶಾ, ಕರ್ನಾಟಕ, ಪ. ಬಂಗಾಳ, ಜಾರ್ಖಂಡ್, ಬಿಹಾರ, ಛತ್ತೀಸಗಢ, ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಮಣಿಪುರ, ನಾಗಲ್ಯಾಂಡ್, ತ್ರಿಪುರ ಮತ್ತು ಮೇಘಾಲಯದ ಭಾಗಗಳು.
Related Articles
ಕೆಂಪಿರುವೆ ಚಟ್ನಿ ಜ್ವರ, ಕಫ, ಸಾಮಾನ್ಯ ಶೀತ, ಉಸಿರಾಟ ಸಮಸ್ಯೆ, ಬೊಜ್ಜು ಮುಂತಾದ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಬುಡಕಟ್ಟು ಆಹಾರ ಪಂಡಿತರ ಅಭಿಪ್ರಾಯ.
Advertisement
ಕೆಂಪಿರುವೆಯಲ್ಲೇನೇನಿದೆ?ಫಾರ್ಮಿಕ್ ಆ್ಯಸಿಡ್, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ12, ಸತು, ಕಬ್ಬಿಣಾಂಶ ಕೆಂಪಿರುವೆ ಚಟ್ನಿ ಸೇವಿಸಲು ಬಹಳ ಖಾರ ಇರುತ್ತದೆ. ಇದನ್ನು ಸೇವಿಸಿದರೆ, ಕಣ್ಣು- ಕಿವಿಗಳ ದೃಷ್ಟಿದೋಷ ದೂರವಾಗುತ್ತದೆ. ಕಫವನ್ನು ನೀರಾಗಿಸುವ ಕಾರಣ ನಾವು ಶೀತ-ಜ್ವರ ಬಂದಾಗ ಇದನ್ನೇ ಹೆಚ್ಚು ಸೇವಿಸುತ್ತೇವೆ. ಬಾಣಂತಿಗೂ ಇದನ್ನು ಕೊಡುತ್ತೇವೆ.
ಪಾಪಣ್ಣ, ಸೋಲಿಗರ ಮುಖಂಡ, ಬೆಲ್ಲತ, ಬಿಳಿಗಿರಿ ರಂಗನ ಬೆಟ್ಟ