ನ್ಯೂಯಾರ್ಕ್: ಕೋವಿಡ್-19 ಕುರಿತ ವಾಟ್ಸಾಪ್ ನಲ್ಲಿ ಕಳಿಸಲಾಗುವ ಪ್ರತಿ ಸಂದೇಶಗಳ ಮೇಲೆ ಸರ್ಕಾರ ಬೇಹುಗಾರಿಕೆ ನಡೆಸುತ್ತಿದೆ ಎಂಬ ಸುದ್ದಿಯನ್ನು ಪಿಐಬಿ(Press Information Bureau) ಸತ್ಯಪರಿಶೀಲನಾ ತಂಡ ಅಲ್ಲಗಳೆದಿದ್ದು ವದಂತಿಗಳ ಕುರಿತು ಎಚ್ಚರಿಕೆದಿಂದಿರುವಂತೆ ಬಳಕೆದಾರರಿಗೆ ಸೂಚಿಸಿದೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿದ PIB, ವದಂತಿಗಳನ್ನು ನಿರಂತರವಾಗಿ ಹಬ್ಬಿಸಲಾಗುತ್ತಿದೆ. ವಾಟ್ಸಾಪ್ ನಲ್ಲಿ ಕೇವಲ 2 ಟಿಕ್ ಮಾರ್ಕ್ ಗಳು ಮಾತ್ರ ಗೋಚರಿಸುತ್ತದೆ. ಒಮ್ಮೆ ಮೆಸೇಜ್ ಸೆಂಟ್ ಆದಾಗ ಟಿಕ್ ತೋರಿದರೆ, ಮಗದೊಮ್ಮೆ ರಿಸೀವ್ ಆದಾಗ 2ನೇ ಮಾರ್ಕ್ ಗೋಚರಿಸುತ್ತದೆ. ಮೆಸೇಜ್ ಓದಿದಾಗ ಮಾತ್ರ ಈ ಎರಡು ಮಾರ್ಕ್ ಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ ಎಂದು ಸ್ಪಷ್ಟಪಡಿಸಿವೆ.
ವದಂತಿಗಳು:
2 ಬ್ಲೂ+1 ರೆಡ್ ಟಿಕ್ ( ಸರ್ಕಾರ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತವೆ)
1 ಬ್ಲೂ+2 ರೆಡ್ ಟಿಕ್ಸ್ ( ಸರ್ಕಾರ ನಿಮ್ಮ ಡಾಟಾ ವನ್ನು ಪರಿಶೀಲಿಸುತ್ತಿದೆ.)
3 ರೆಡ್ ಟಿಕ್ಸ್( ಸರ್ಕಾರ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ ಸಂದೇಶ ಕಳುಹಿಸಿದವರಿಗೆ ಕೋರ್ಟ್ ನಿಂದ ಸಮನ್ಸ್ ಬರುವುದು )
ಈ ಮೇಲಿನ ಮೂರು ಸುದ್ದಿಗಳು ಸತ್ಯಕ್ಕೆ ದೂರವಾದುದು ಎಂದು ಪಿಐಬಿ ಸ್ಪಷ್ಟಪಡಿಸಿದೆ.
ಏತನ್ಮಧ್ಯೆ, ಕೋವಿಡ್ 19 ಕುರಿತ ತಪ್ಪು ಮಾಹಿತಿ ಹರಡುವುದನ್ನು ತಡೆಗಟ್ಟಲು ಬಳಕೆದಾರರು ಆಗಾಗ್ಗೆ ಫಾರ್ವರ್ಡ್ ಮಾಡುವ ಸಂದೇಶಗಳನ್ನು ಒಂದು ಚಾಟ್ ಗೆ ಸೀಮಿತಗೊಳಿಸಲು ವಾಟ್ಸಾಪ್ ನಿರ್ಧರಿಸಿದೆ. ಅಂದರೆ ಸಂದೇಶವೊಂದನ್ನು 5 ಬಾರಿ ಫಾರ್ವರ್ಡ್ ಮಾಡಿದ ನಂತರ ಈ ಮಿತಿ ಜಾರಿಯಲ್ಲಿರುತ್ತದೆ. ಈ ಕ್ರಮ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಜಾರಿಗೆ ಬಂದಿದೆ ಎಂದು ವಾಟ್ಸಾಪ್ ಸಂಸ್ಥೆ ತಿಳಿಸಿದೆ.
ಈಗ ಸಂದೇಶಗಳನ್ನು ಒಂದು ಸಮಯದಲ್ಲಿ ಒಬ್ಬರಿಗೆ ಮಾತ್ರ ಫಾರ್ವರ್ಡ್ ಮಾಡಬಹುದು. ಬಳಕೆದಾರರು ಈ ಸಮಯದಲ್ಲಿ ಸಂದೇಶಗಳನ್ನು ಫಾರ್ವರ್ಡ್ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವನ್ನು ನಾವು ನೋಡಿದ್ದೇವೆ. ಇದು ತಪ್ಪು ಮಾಹಿತಿ ಹರಡಲು ಕಾರಣವಾಗಬಹುದು. ಅದಕ್ಕಾಗಿ ಈ ಮಿತಿಯನ್ನು ಹೇರಲಾಗಿದೆ ಎಂದು ವಾಟ್ಸಾಪ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ.