Advertisement
ಈ ಸುದ್ದಿ ಉದ್ದಕ್ಕೂ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಧರಿಸಬಹುದಾದ ಉಡುಗೆ – ತೊಡುಗೆಗಳ ವಿವರಣೆಯನ್ನು ಸಾಲು ಸಾಲಾಗಿ ನೀಡಲಾಗಿತ್ತು. ಕುಡಿಯುವ ನೀರಿನ ಬಾಟಲಿ ತರುವುದು ನಿಷೇಧದಿಂದ ಹಿಡಿದು ದೊಡ್ಡ ಬಟನ್ ಬಟ್ಟೆಗಳನ್ನು ಧರಿಸಬಾರದು ಎಂಬ ಸೂಕ್ಷ್ಮ ಸಂಗತಿಯವರೆಗೂ ನೀತಿ ನಿಯಮಗಳನ್ನು ಕೊಡಲಾಗಿತ್ತು.
Related Articles
Advertisement
ಒಟ್ಟಾರೆಯಾಗಿ ಕೆಇಎನ ಪರೀಕ್ಷೆಗಳಲ್ಲಿ ಈ ಮಟ್ಟದ ಅಕ್ರಮಗಳು ನಡೆಯಲು ಲೋಪವಿರುವುದು ಅಭ್ಯರ್ಥಿಗಳಲ್ಲೋ ಅಥವಾ ಅಧಿಕಾರಿಗಳಲ್ಲೋ ಎಂಬ ಸಂಶಯ ಎಲ್ಲರಲ್ಲೂ ಮನೆ ಮಾಡಿದೆ. ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಸರಕಾರವು ಸೇರಿದಂತೆ ಕೆಇಎನ ಕಾರ್ಯನಿರ್ವಾಹಕ ನಿರ್ದೇಶಕರು ತನ್ನ ಇಲಾಖೆಯ ಅಧಿಕಾರಿಗಳಿಗೆ ಯಾವ ರೀತಿಯ ನಿಯಮಗಳನ್ನು ಬೋಧಿಸಿದೆ?
ಈ ವರೆಗೆ ಅಕ್ರಮ ಎಸಗಿದ ಎಷ್ಟು ಜನ ಅಧಿಕಾರಿಗಳಿಗೆ ಕ್ರಮ ಜರುಗಿಸಿದೆ. ಆಯ್ಕೆ ಪ್ರಕ್ರಿಯೆಗಳಲ್ಲಿ ಯಾವ ಮಟ್ಟಿನ ಪಾರದರ್ಶಕತೆಯನ್ನು ಪಾಲಿಸುತ್ತಿದೆ? ಅಭ್ಯರ್ಥಿಗಳಿಗೊಂದು ನ್ಯಾಯ ಅಧಿಕಾರಿಗಳಿಗೆ ಒಂದು ನ್ಯಾಯ. ಇದೇ ಕಾರಣಕಲ್ಲವೇ ಅಭ್ಯರ್ಥಿಗಳು ಇಲಾಖೆಯ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳುವುದು. ಇಂತಹ ಹತ್ತಾರು ಪ್ರಶ್ನೆಗಳು ನನ್ನಂಥ ಸಾವಿರಾರು ಅಭ್ಯರ್ಥಿಗಳಿಗೆ ಕಾಡಿದೆ ಎಂಬುದು ನನ್ನ ನಂಬಿಕೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದಕ್ಕೆ ಉತ್ತರವನ್ನು ನೀಡಬೇಕು. ನೂರಾರು ನೀತಿ ನಿಯಮಗಳನ್ನು ಅಭ್ಯರ್ಥಿಗಳ ಮೇಲೇರಿ ಹಿಂಸಿಸುವ ಬದಲು ಅಕ್ರಮ ಎಸಗುವ ಇಲಾಖೆಯ ಅಧಿಕಾರಿಗಳಿಗೆ ಕಠಿನವಾಗಿ ಶಿಕ್ಷೆಯಾಗಬೇಕು. ಅಂತಿಮವಾಗಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆದು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಫಲ ಶ್ರುತಿ ಆಗುವಂತೆ ಮಾಡಬೇಕು.
ಅರವಿಂದ
ಎಸ್.ಡಿ.ಎಂ. ಕಾಲೇಜು, ಉಜಿರೆ