ದಿನ ಕಳೆದಂತೆ ಕಂಪ್ಯೂಟರ್ ಕೆಲಸ ಮಾಡುವ ವೇಗ ಕಡಿಮೆಯಾಗಿದೆ ಎಂದೆನಿಸುತ್ತದೆ. ಕಂಪ್ಯೂಟರ್‌ಆನ್ ಆಗಲು ಬಹಳಷ್ಟು ಸಮಯ ತೆಗೆದುಕೊಳ್ಳುವುದಲ್ಲದೇ, ಯಾವುದೇ ತಂತ್ರಾಂಶಗಳು, ಫೈಲ್‌ಗಳನ್ನು ಓಪನ್ ಮಾಡಿದಾಗ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಅನಗತ್ಯವಾದ ಫೈಲ್‌ಗಳು ಹಾರ್ಡ್ ಡಿಸ್ಕ್ನಲ್ಲಿ ಜಾಗ ಪಡೆದಿರುವುದು ಕಾರಣವಾಗಿದೆ.
ನಾವು ಈ ಅನಗತ್ಯ ಫೈಲ್‌ಗಳನ್ನು ನಮ್ಮ ಕಂಪ್ಯೂಟರ್‌ನಿಂದ ತೆಗೆದು ಬಿಸಾಡಬೇಕು. ಇದರಿಂದ ಕಂಪ್ಯೂಟರ್ ಕಾರ್ಯದಕ್ಷತೆ ಹೆಚ್ಚಾಗುತ್ತದೆ. ಟೆಂಪ್/ಜಂಕ್ ಫೈಲ್‌ಗಳು ಸಾಮಾನ್ಯವಾಗಿ ಇಂಟರ್‌ನೆಟ್ ಬ್ರೌಸ್ ಮಾಡುವಾಗ ಬರುತ್ತವೆ. ಹೊಸ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಿದ ಬಳಿಕ ಹಾಗೂ ಒಂದು ತಂತ್ರಾಂಶದಲ್ಲಿ ಕೆಲಸ ಮಾಡಿ ಮುಗಿಸಿದ ಬಳಿಕವೂ ಕಂಪ್ಯೂಟರಿನಲ್ಲಿ ಉಳಿದುಕೊಳ್ಳುವ ಅನಗತ್ಯ ಫೈಲ್‌ಗಳಿವು. ಇವುಗಳನ್ನು ನಾವು ಡಿಲಿಟ್ ಮಾಡಬಹುದಾಗಿದೆ. ಕಂಪ್ಯೂಟರಿನಲ್ಲಿರುವ
windows R,
%temp%, ವಿಧಾನ ಬಳಸಬಹುದು. ಇನ್ನು ಸಿಸಿ ಕ್ಲೀನರ್‌ನಂತಹ ಕೆಲವು ಉಚಿತ ಮತ್ತು ಪಾವತಿ ತಂತ್ರಾಂಶಗಳನ್ನು ಬಳಸಿಯೂ ಟೆಂಪ್ ಫೈಲ್ಸ್ ಡಿಲೀಟ್ ಮಾಡಬಹುದು.
ಅನಗತ್ಯವಾದ ಒಂದು ಫೈಲ್ ಅನ್ನು ಡಿಲೀಟ್ ಮಾಡಿದ ಮಾತ್ರಕ್ಕೆ ಅದು ಕಂಪ್ಯೂಟರಿನಿಂದಲೇ ಹೊರಹೋಗುತ್ತದೆ ಎಂದರ್ಥವಲ್ಲ. ಅವುಗಳು ನಿಮ್ಮ ರಿಸೈಕಲ್ ಬಿನ್‌ನಲ್ಲಿ ಉಳಿದುಕೊಂಡಿರುತ್ತವೆೆ. ಈ ರೀತಿ ರಿಸೈಕಲ್ ಬಿನ್‌ನಲ್ಲಿ ಸೇರುವ ಫೈಲ್‌ಗಳು ಹಾರ್ಡ್‌ಡಿಸ್ಕ್ನಲ್ಲಿ ಉಳಿದಿರುತ್ತವೆ. ಇದನ್ನು ತೆಗೆದು ಹಾಕಲು ಡೆಸ್ಕ್ಟಾಪ್‌ನಲ್ಲಿರುವ ರಿಸೈಕಲ್ ಬಿನ್ ಮೇಲೆ ರೈಟ್ ಕ್ಲಿಕ್ ಮಾಡಿ “ಎಮಿr ರಿಸೈಕಲ್ ಬಿನ್’ ಎಂದು ಕೊಡಬೇಕಾಗುತ್ತದೆ. ಉತ್ತಮ ಮಾರ್ಗ ಎಂದರೆ ಅನಗತ್ಯ ಫೈಲ್‌ಗಳನ್ನು
shift + delete ಪ್ರಯೋಗಿಸಿ ಡಿಲೀಟ್ ಮಾಡಬಹುದು. ಇದರಿಂದ ಕಂಪ್ಯೂಟರ್‌ನ ಹಾರ್ಡ್ ಡಿಸ್ಕ್ ನಿಂದಲೇ ಅಳಿಸಿಹೋಗುತ್ತವೆ.
ಇನ್ನು ನಮ್ಮ ಕಂಪ್ಯೂಟರ್‌ಗಳಲ್ಲಿ ಬಳಸದೇ ಇರುವ ಸಾಫ್ಟ್ ವೇರ್‌ಗಳನ್ನು ಡಿಲೀಟ್ ಮಾಡಬೇಕು. ಇದರಿಂದ ಕೆಲವು ಜಿಬಿಗಳ ಜಾಗ ಲಭ್ಯವಾಗುತ್ತದೆ.