Advertisement

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

12:17 AM Sep 17, 2024 | Team Udayavani |

ಹೊಸದಿಲ್ಲಿ: ಜನಗಣತಿ ವೇಳೆ ಜಾತಿ ಕಾಲಂ ಸೇರಿಸುವ ಬಗ್ಗೆ ಕೇಂದ್ರ ಸರಕಾರ‌ವು ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್‌ ಸೇರಿದಂತೆ ಬಹುತೇಕ ಎಲ್ಲ ವಿಪಕ್ಷಗಳು ಜಾತಿಗಣತಿಗೆ ಒತ್ತಾಯಿಸುತ್ತಿವೆ. ಜತೆಗೆ, ಎನ್‌ಡಿಎ ಮಿತ್ರ ಪಕ್ಷಗಳಾದ ಎಲ್‌ಜೆಪಿ (ಪಾಸ್ವಾನ್‌) ಮತ್ತು ಜೆಡಿಯು ಕೂಡ ಜಾತಿಗಣತಿಗೆ ಆಗ್ರಹಿಸುತ್ತಿವೆ. ಜಾತಿ ಗಣತಿಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರವು ಈಗ ಗಣತಿ ವೇಳೆ, ಜಾತಿ ಕಾಲಂ ಸೇರಿಸುವ ಬಗ್ಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಪ್ರತೀ 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿ ಯನ್ನು ಕೋವಿಡ್‌ ಕಾರಣದಿಂದ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮುಂದೂಡಿಕೊಂಡು ಬರಲಾಗಿತ್ತು. ಆದರೆ ಈ ಸೆಪ್ಟಂಬರ್‌ನಲ್ಲಿ ಜನಗಣತಿಯನ್ನು ಕೇಂದ್ರ ಸರಕಾರ‌ ಕೈಗೊಳ್ಳುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next