Advertisement
ಮಂಜು ಶಾಂತಲಾ: ಖಂಡಿತ ! ಕೇಂದ್ರ ಸರ್ಕಾರ ನಮ್ಮ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆ.
Related Articles
Advertisement
ಫೈಯಾಜ್: ಚುನಾವಣೆ ಹತ್ತಿರದಲ್ಲಿರುವ ಮಹಾರಾಷ್ಟ್ರಕ್ಕೆ 2,474 ಕೋಟಿ ನೆರೆ ಪರಿಹಾರ ಬಿಡುಗಡೆಯಾಗಿದೆ. ಇತರ ರಾಜ್ಯಕ್ಕೂ ಕೇಂದ್ರ ನೆರೆ ಪರಿಹಾರ ಕೊಟ್ಟಿದೆ ಅಥವಾ ಆ ರಾಜ್ಯದ ಸಂಸದರು ಅದನ್ನು ಕೇಳಿ ಪಡೆದಿದ್ದಾರೆ. ಆದರೆ ನೆರೆ ಪರಿಹಾರಕ್ಕೆ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿದರು, ಕೇಂದ್ರ ಸರಕಾರದ ಸಚಿವರು ಮತ್ತು ಸಂಸದರು ರಾಜ್ಯ ಸರಕಾರ ನೆರೆ ಸಂತ್ರಸ್ತರಿಗೆ ಸ್ಪಂದಿಸುತ್ತಿದೆ ಅನ್ನುತ್ತಿದ್ದಾರೆ. ಆದರೆ ನೆರೆ ಸಂತ್ರಸ್ತರು ಇನ್ನೂ ಅತಂತ್ರದಲ್ಲಿದ್ದಾರೆ. ವಾಸಿಸಲು ಮನೆಯಿಲ್ಲದೆ, ಕಲಿಯಲು ಶಾಲೆಗಳಿಲ್ಲದೆ. ಒಟ್ಟಿನಲ್ಲಿ ಎಲ್ಲವನ್ನು ಕಳೆದು ಕೊಂಡು ಬೀದಿಪಾಲಾಗಿದ್ದಾರೆ. ಇವೆಲ್ಲಾ ಗಮನಿಸಿದಾಗ ಕೇಂದ್ರ ಸರ್ಕಾರ ರಾಜ್ಯವನ್ನು ಕಡೆಗಣಿಸುತ್ತಿದೆ ಎನಿಸುತ್ತಿದೆ.
ಅಕ್ಷಯ್ ಜಿ ಭಟ್: ಖಂಡಿತವಾಗಿಯೂ ಕರ್ನಾಟಕವನ್ನು ಮೋದಿ ಸರ್ಕಾರ ಕಡೆಗಣಿಸಿದಂತಿದೆ. ಈ ವಿಚಾರಕ್ಕೆ ಪುಷ್ಠಿ ನೀಡುವಂತೆ ಯಡಿಯೂರಪ್ಪನವರು ಮೋದಿಯವರ ಭೇಟಿಗೆ ತೆರಳಿದ್ದಾಗ ಅಲ್ಲಿ ಅವರಿಗೆ ಭೇಟಿ ನಿರಾಕರಿಸಲಾಯಿತು. ಒಂದು ವರದಿಯ ಪ್ರಕಾರ ಸಣ್ಣ ಸಮಸ್ಯೆಗಳಿಗೆ ಕೇಂದ್ರದ ಬಳಿ ಬರಬೇಡಿ ಎಂದು ಹೇಳಿ ಕಳುಹಿಸಿದ್ದೂ ಇದೆ.ಬಿಹಾರದಲ್ಲಿ ಪ್ರವಾಹ ಬಂದಿರುವುದಕ್ಕೆ ಟ್ವೀಟ್ ಮಾಡಿ ಕಾಳಜಿ ತೋರಿದ ಮೋದಿಗೆ ಕರ್ನಾಟಕ ಪ್ರವಾಹದ ಕುರಿತು ಒಂದಕ್ಷರ ಬರೆಯಬೇಕು ಎಂದು ಎನಿಸಲಿಲ್ಲ. ಕಾಟಾಚಾರಕ್ಕೆ ಎಂಬಂತೆ ಅಮಿತ್ ಷಾ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಸಮೀಕ್ಷೆಗೆ ಕಳುಹಿಸಿದಂತೆ ಕಂಡುಬಂದಿದೆ.
ಕುಮಾರ ಗೌಡ: ಕರ್ನಾಟಕ ಸರ್ಕಾರದ ಮಂತ್ರಿಗಳು ನೆರೆ ಪರಿಹಾರವನ್ನು ಕೇಂದ್ರದ ಸರ್ಕಾರದಿಂದ ತರುವ ಬಗ್ಗೆ ಶೀಘ್ರ ಯೋಚಿಸಬೇಕು.
ಫಜಲ್: ಕೇಂದ್ರ ಸಚಿವರು, BJP ಸಂಸದರು ನೆರೆ ಪರಿಹಾರಕ್ಕೆ ರಾಜ್ಯಕ್ಕೆ ಹಣಕಾಸಿನ ತೊಂದರೆ ಇಲ್ಲ ಅಂತಾರೆ. ರಾಜ್ಯದ ಮಾನ್ಯ ಮುಖ್ಯಮಂತ್ರಿ, ರಾಜ್ಯ ಬಿಜೆಪಿಯ ಶಾಸಕರು ರಾಜ್ಯದಲ್ಲಿ ಹಣ ಇಲ್ಲ, ಕೇಂದ್ರಕ್ಕೆ ಹಣ ಬಿಡುಗಡೆಗೆ ಒತ್ತಡ ಹಾಕುತ್ತಿದ್ದಾರೆ!!!. ಯಾವುದು ಸತ್ಯ? ಒಟ್ಟಿನಲ್ಲಿ ನೆರೆ ಸಂತ್ರಸ್ತರು ಅನಾಥರಾದರು.
ನವೀನ್ ಗೌಡ: ಹೌದು ! ಖಂಡಿತವಾಗಿ ಕೇಂದ್ರ ಸರಕಾರ ನೆರೆ ಸಂತ್ರಸ್ತರ ಬದುಕಿಗೆ ಪರಿಹಾರ ನೀಡದೆ ತಾರತಮ್ಯ ಮಾಡುತ್ತಿದೆ. ಭೀಕರ ಪ್ರವಾಹಕ್ಕೆ ತತ್ತರಿಸಿದ ಉತ್ತರ ಕರ್ನಾಟಕ ಜನತೆಯ ಸಂಕಷ್ಟ ಆಲಿಸಲು ಪ್ರಧಾನಿ ಮೋದಿ ಬರಲೇ ಇಲ್ಲ. ಇನ್ನು ಕೇಂದ್ರದ ಸಂಸದರು ಅಂತೂ ನೆರೆ ಪರಿಹಾರದ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಿಲ್ಲ. ಅಲ್ಲಿನ ಪರಿಸ್ಥಿತಿ ಅರಿತು ಶೀಘ್ರ ಸಂತ್ರಸ್ತರಿಗೆ ಸರಕಾರಗಳು ಪರಿಹಾರ ನೀಡಲಿ, ಜನರ ಸಂಕಷ್ಟ ಅರಿಯಲಿ.
ಸದ್ದಾಂ: ಹೌದು ಸಂಪೂರ್ಣ ನಿರ್ಲಕ್ಷ್ಯ…… ರಾಜ್ಯದ ಸಂಸದರು ಅದರ ಕುರಿತು ಧ್ವನಿಯೇರಿಸಬೇಕಾಗಿದೆ. ಕರ್ನಾಟಕದ ವಿಚಾರದ ಕುರಿತು ಪ್ರಧಾನಿ ಮೋದಿ ಮೌನ ಮುರಿಯಬೇಕು.