Advertisement

ಬಸ್‌ ನಿಲ್ದಾಣ ದಿಢೀರ್‌ ಸ್ಥಳಾಂತರ ಸರಿನಾ?

07:05 PM Jan 10, 2021 | Team Udayavani |

ನಂಜನಗೂಡು: ನಗರದ ಕೇಂದ್ರ ಭಾಗದಲ್ಲಿದ್ದ ಸಾರಿಗೆ ಬಸ್‌ ನಿಲ್ದಾಣವನ್ನು ದಿಢೀರನೆ ಚಾಮರಾಜನಗರ ರಸ್ತೆಯಲ್ಲಿರುವ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದ ತಾಂತ್ರಿಕ ತಜ್ಞರು ಶಿಫಾರಸು ಮಾಡಿದ್ದು, ಸೋಮವಾರದಿಂದ (ಜ.11) ಬಸ್‌ಗಳನ್ನು ಹೊರವಲಯದ ಬಸ್‌ ನಿಲ್ದಾಣದಿಂದಲೇ ಓಡಿಸಲಾಗುವುದು ಎಂದು ಶನಿವಾರ ಮಧ್ಯಾಹ್ನ ಫ‌ಲಕಹಾಕಲಾಗಿದೆ.

Advertisement

ಈ ದಿಢೀರ್‌ ಬಸ್‌ ನಿಲ್ದಾಣ ಸ್ಥಳಾಂತರದಿಂದ ನಿಗಮಕ್ಕೂ ನಷ್ಟವಾಗಲಿದೆ. ಜೊತೆಗೆ ಪ್ರಯಾಣಿಕರಿಗೂ ಹೊರೆ ಆಗಲಿದೆ. 1977ರಲ್ಲಿ ಮಾಜಿ ಸಚಿವ ದಿ.ಕೆ.ಬಿ.ಶಿವಯ್ಯ ಕಾಲದಲ್ಲಿ ಲೋಕಾರ್ಪಣೆಗೊಂಡಿದ್ದ ನಗರದ ಮಧ್ಯದಲ್ಲಿರುವ ಬಸ್‌ ನಿಲ್ದಾಣ ಶಿಥಿಲವಾಗಿದ್ದು, ಅದನ್ನು ದುರಸ್ತಿ ಮಾಡುವ ಬದಲು ಸ್ಥಳಾಂತರಕ್ಕೆ ಇಲಾಖೆ ಮುಂದಾಗಿರುವುದು ಅನೇಕ ಸಂಶಯಗಳಿಗೆ ಎಡೆ ಮಾಡಿದೆ.

ಏಕೆಂದರೆ ಈ ಬಸ್‌ ನಿಲ್ದಾಣವನ್ನು ಸ್ಥಳಾಂತರಿಸಿದ ನಂತರ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಲಿಕತ್ವದ ಈ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಸಾಧ್ಯತೆ ಇದೆ ಎಂಬ ಕೂಗು ಈ ಹಿಂದೆಯೇ ಕೇಳಿ ಬಂದಿತ್ತು. 2018ರಲ್ಲಿ ಈ ಬಸ್‌ ನಿಲ್ದಾಣವನ್ನು ಹೊರವಲಯದ ಹೊಸ ಬಸ್‌ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು. ಈ ನಿರ್ಧಾರವು ಖಾಸಗಿ ವಾಹನಗಳ ಪಾಲಿಗೆ ವರವಾಗಿ ಮಾರ್ಪ ಟ್ಟಿತ್ತು. ನಿಗಮಕ್ಕೆ ಸಾಕಷ್ಟು ನಷ್ಟವಾಗಿತ್ತು.

ಕೆಲ ತಿಂಗಳುಗಳ ಕಾಲ ನಷ್ಟ ಅನುಭವಿಸಿದ ನಂತರ ಸಾರಿಗೆ ನಿಗಮ ತನ್ನ ಆಚಾತುರ್ಯದ ತೀರ್ಮಾನವನ್ನು ಬದಲಾಯಿಸಿ ಆ ಬಸ್‌ ನಿಲ್ದಾಣವನ್ನು ಅಂತರ ರಾಜ್ಯ ಬಸ್‌ಗಳಿಗೆ ಸೀಮಿತಗೊಳಿಸಿ, ಉಳಿದ ಬಸ್‌ಗಳನ್ನು ಹಳೆಯ ಬಸ್‌ ನಿಲ್ದಾಣದಿಂದಲೇ ಸಂಚರಿಸಲು ಅವಕಾಶ ನೀಡಿತ್ತು. ಈಗ ಬಸ್‌ ನಿಲ್ದಾಣದ ಹಲವಡೆ ಆರ್‌ಸಿಸಿಯ ಕೆಳಭಾಗದ ಪ್ಲಾಸ್ಟರ್‌ ಉದುರಿ ಬೀಳಲಾರಂಭಿಸಿದೆ. ಇದಕ್ಕೆ ಸಾರಿಗೆ ನಿಗಮದ ಕಳಪೆ ನಿರ್ವಹಣೆಯೇ ಕಾರಣ ಎನ್ನಲಾಗಿದೆ. ಈ ನಿಲ್ದಾಣವನ್ನೇ ದುರಸ್ತಿ ಪಡಿ ಸಿದರೆ ಇನ್ನು 8-10 ವರ್ಷ ಉತ್ತಮ ವಾಗಿಯೇ ಕಾರ್ಯ ನಿರ್ವಹಿಸಬಹುದು ಎನ್ನಲಾಗಿದೆ.

ಪ್ರಯಾಣಿಕರಿಗೆ ಹೊರೆ: ನಗರದ ಹೊರವಲಯದ ಬಸ್‌ ನಿಲ್ದಾಣಕ್ಕೆ ಸ್ಥಳಾಂತರ ಮಾಡಿರುವುದು ಪ್ರಯಾಣಿಕರಿಗೆ ಹೊರೆ ಯಾಗ ಲಿದೆ. ಅಲ್ಲಿನ ಬೀದಿಗಳ ದೀಪ ಹೊತ್ತಿಕೊಳ್ಳದೆ ಸದಾ ಕಗ್ಗತ್ತಲು ಆವರಿಸಿರುತ್ತದೆ.  ಅಲ್ಲಿಂದ ನಗರ ದೊಳಗೆ ಬಂದು ಹೋಗುವ ಪ್ರಯಾಣಿಕರಿಗೆ ಆಟೋ ಅನಿವಾರ್ಯವಾಗಿದ್ದು, 30 ರಿಂದ 40 ರೂ. ಆಟೋ ಚಾರ್ಜ್‌ ಕೊಡಬೇಕಾಗಿದ್ದು, ಇದು ಪ್ರಯಾಣಿಕರ ಪಾಲಿಗೆ ಹೊರೆ ಯಾಗಲಿದೆ. ಇನ್ನೂ ನಂಜನಗೂಡಿನಿಂದ ಮೈಸೂರಿಗೆ ತೆರಳುವ ನಾಗರಿಕರು ಅಷ್ಟು ಅಟೋ ಬಾಡಿಗೆ ನೀಡಿ ಅಲ್ಲಿಗೆ ಹೊಗುವ ಬದಲು ಅದೇ ದರದಲ್ಲಿ ಖಾಸಗಿ ವಾಹನಗಳಲ್ಲಿ ಮೈಸೂರಿಗೆ ತೆರಳಬಹುದಾಗಿದೆ. ನಿಲ್ದಾಣ ಸ್ಥಳಾಂತರ ನಿರ್ಧಾರವು ಸಾರಿಗೆ ನಿಗಮಕ್ಕೂ ನಷ್ಟ, ಹಾಗೂ ಪ್ರಯಾಣಿಕರಿಗೂ ಹೊರೆಯಾಗಲಿದೆ.

Advertisement

ಇದನ್ನೂ ಓದಿ:ಸುಳ್ಳು ಆಶ್ವಾಸನೆಗಳಿಂದ ಪ್ರಗತಿ ಅಸಾಧ್ಯ: ತುನ್ನೂರ

ದುರಸ್ತಿಯೋ,ಹೊಸ ಕಟ್ಟಡವೋ?

ಹಳೇ ಬಸ್‌ ನಿಲ್ದಾಣವನ್ನು ಯಾವ ಉದ್ದೇಶಕ್ಕೆ ಹೊರ ವಲಯಕ್ಕೆ ಸ್ಥಳಾಂತರ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಶಿಥಿಲಾವಸ್ಥೆಯಲ್ಲಿರುವ ಹಳೆಯ ಬಸ್‌ ನಿಲ್ದಾಣವನ್ನು ದುರಸ್ತಿ ಮಾಡುತ್ತಾರೋ ಅಥವಾ ನಿಲ್ದಾಣವನ್ನು ಸಂಪೂಣವಾಗಿ ಕೆಡವಿ ಹೊಸದಾಗಿ ಕಟ್ಟಡ ನಿರ್ಮಿಸುತ್ತಾರೋ ಎಂಬುದು ಗೊತ್ತಿಲ್ಲ. ಈ ಕುರಿತು ಅಧಿಕಾರಿಗಳಲ್ಲೂ ಸ್ಪಷ್ಟನೆ ಇಲ್ಲ. ಹೊಸ ಕಟ್ಟಡ ನಿರ್ಮಾಣಕ್ಕೆ ಯಾವುದೇ ರೂಪುರೇಷೆ ಕೂಡ ಸಿದ್ಧವಾಗಿಲ್ಲ. ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಿಲ್ಲ. ಸರ್ಕಾರದ ಅನುಮತಿಯೂ ಇಲ್ಲ. ಹಣ ಕೂಡ ಮಂಜೂರು ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಿಢೀರ್‌ನೆ ಬಸ್‌ ನಿಲ್ದಾಣ ಸ್ಥಳಾಂತರ ಬೇಕಿತ್ತಾ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

ಶ್ರೀಧರ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next