ನವದೆಹಲಿ:ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್ ಡಿಎ ಸರ್ಕಾರದ ತಪ್ಪು ವಿದೇಶಾಂಗ ನೀತಿಗಳಿಂದಾಗಿ ಭಾರತ ಇಂದು ಏಕಾಂಗಿ ರಾಷ್ಟ್ರವಾಗಿದೆ ಎಂದು ಬುಧವಾರ ಲೋಕಸಭೆಯಲ್ಲಿ ಆರೋಪಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜ್ಯವರ್ಧನ್ ರಾಥೋಡ್ ಗುರುವಾರ(ಫೆ.3) ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಇಮ್ರಾನ್ ಖಾನ್ ಚೀನಾ ಭೇಟಿಗೂ ಮುನ್ನ ಪಾಕ್ ನ ಎರಡು ಸೇನಾ ನೆಲೆ ಮೇಲೆ ಉಗ್ರರ ದಾಳಿ
“ರಾಹುಲ್ ಗಾಂಧಿಯ ಸ್ಕ್ರಿಫ್ಟ್ ರೈಟರ್ (ಭಾಷಣ ಬರೆಯುವವರು) ಚೀನಾ ಅಥವಾ ಪಾಕಿಸ್ತಾನದವರಿರಬೇಕು. ವಿರೋಧ ಪಕ್ಷದ ಮುಖಂಡ ರಾಹುಲ್ ಅವರು ಭಾರತೀಯ ಸ್ಕ್ರಿಫ್ಟ್ ರೈಟರ್ ಅನ್ನು ಬಳಸಿಕೊಳ್ಳಬೇಕೆಂದು ಟ್ವೀಟರ್ ನಲ್ಲಿ ಸಲಹೆ” ನೀಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಪಾಕಿಸ್ತಾನ ಕಾಶ್ಮೀರದ ಕುರಿತ ಭಾರತದ ನೀತಿ ತಪ್ಪು ಎಂಬ ಅಭಿಪ್ರಾಯ ಒಂದೇ ರೀತಿಯದ್ದಾಗಿದೆ. ಅಷ್ಟೇ ಅಲ್ಲ ಜಮ್ಮು ಕಾಶ್ಮೀರದ ಕುರಿತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಒಳ್ಳೆಯ ಕೆಲಸ ಮಾಡಿದ್ದಾರೆಂಬುದನ್ನು ರಾಹುಲ್ ಮತ್ತು ಚೀನಾ ಒಪ್ಪುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿಯ ಸ್ಕ್ರಿಫ್ಟ್ ರೈಟರ್ ಚೀನಾ ಅಥವಾ ಪಾಕಿಸ್ತಾನದವರಿರಬೇಕು ಎಂದು ರಾಥೋಡ್ ವ್ಯಂಗ್ಯವಾಡಿದ್ದಾರೆ.
ಭಾರತದ ನೈಜ ವಿದೇಶಾಂಗ ನೀತಿ, ನೆರೆಯ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನವನ್ನು ಜತೆಯಲ್ಲಿಟ್ಟುಕೊಂಡು ಮುಂದೆ ಹೋಗುವ ಆಶಯ ಹೊಂದಿದೆ. ಇದರ ನಿಜವಾದ ಅರ್ಥ ಚೀನಾ ಹಾಗೂ ಪಾಕಿಸ್ತಾನವನ್ನು ಅವುಗಳಿಗೆ ಅರಿವಿಲ್ಲದಂತೆ ದೂರವಿಡುವುದೇ ಆಗಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನೀವು (ಎನ್ ಡಿಎ) ಈ ಆಶಯ ನಿರ್ಲಕ್ಷಿಸಿದಿರಿ. ಇದರ ಫಲವಾಗಿ ಇಂದು ಪಾಕಿಸ್ತಾನ ಮತ್ತು ಚೀನಾ ಹಿಂದೆಂದಿಗಿಂತಲೂ ಗಾಢ ಸ್ನೇಹ ಹೊಂದಲು ಕಾರಣವಾಗಿತ್ತು ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆರೋಪಿಸಿದ್ದರು.