Advertisement
– ರಾಜಕೀಯ, ಕಾನೂನು ತಜ್ಞರಿಗೆ ಸವಾಲಾದ ತೀರ್ಪು
Related Articles
Advertisement
ಪಾಕಿಸ್ಥಾನದ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ತಾರೀಖ್ ಮೆಹಮೂದ್ ‘ಡಾನ್’ ಪತ್ರಿಕೆ ಜತೆ ಮಾತನಾಡಿ ಹಿಂದಿನ ಸಂದರ್ಭಗಳಲ್ಲಿಯೂ ಸುಪ್ರೀಂಕೋರ್ಟ್ ಇಂಥ ಹಲವು ತೀರ್ಮಾನಗಳನ್ನು ನೀಡಿತ್ತು. ಅದರಲ್ಲಿ ಅನರ್ಹತೆಗೊಳಿಸಿದ್ದು ಶಾಶ್ವತವಾಗಿ ಎಂದು ಅವರು ಹೇಳಿದ್ದಾರೆ. ಆದರೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅನ್ವರ್ ಝಹೀರ್ ಜಮಾಲಿ ಸಂವಿಧಾನದ 62 ಮತ್ತು 63ರ ಅನ್ವಯ ಜೀವನ ಪರ್ಯಂತ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಸಾಧ್ಯವೇ ಇಲ್ಲ ಎಂದು ನಿಷೇಧ ಹೇರುವುದಾದರೂ ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಮಯ ಕಳೆದಂತೆ ವ್ಯಕ್ತಿಗಳು ಬದಲಾಗಿಯೇ ಆಗುತ್ತಾರೆ ಎಂದು ಅವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗೀಲಾನಿಗೆ 5 ವರ್ಷ: ಮಾಜಿ ಪ್ರಧಾನಿ ಯೂಸುಪ್ ಗೀಲಾನಿ ವಿರುದ್ಧ ಸುಪ್ರೀಂ ತೀರ್ಪು ನೀಡಿದ್ದ ವೇಳೆ 5 ವರ್ಷಗಳವರೆಗೆ ಮಾತ್ರ ನಿಷೇಧ ಹೇರಿತ್ತು ಎಂದು ಹಿರಿಯ ನ್ಯಾಯವಾದಿ ರಹೀಲ್ ಕಮ್ರಾನ್ ಶೇಕ್ ಹೇಳಿದ್ದಾರೆ. ಕುತೂಹಲಕಾರಿ ಅಂಶವೆಂದರೆ ನೆರೆಯ ರಾಷ್ಟ್ರದ ಸಂವಿಧಾನದ 62(1)(ಎಫ್)ನಲ್ಲಿ ಅನರ್ಹತೆಗೊಳಿಸುವ ಅಂಶ ಇದೆಯಾದರೂ ಎಷ್ಟು ವರ್ಷಕ್ಕೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲ. ಷರೀಫ್ರನ್ನು ಅನರ್ಹಗೊಳಿಸಿ ತೀರ್ಪು ನೀಡುವ ಸಂದರ್ಭದಲ್ಲಿ ಕಾಲಮಿತಿ ನಿಗದಿ ಮಾಡದೇ ಇದ್ದರೂ, ಮುಂದಿನ ದಿನಗಳಲ್ಲಿ ಅನರ್ಹಗೊಳ್ಳುವ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ಅಂಶವನ್ನು ಪರೋಕ್ಷವಾಗಿ ಎತ್ತಿಹಿಡಿದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ ಸುಪ್ರೀಂ ಕೋರ್ಟ್ ಹೆಚ್ಚಿನ ಅಧಿಕಾರ ಹೊಂದಲಿದೆ ಎಂಬಂತೆ ಭಾಸವಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಹಂಗಾಮಿ ಪ್ರಧಾನಿ ಆಯ್ಕೆ: ನಿಕಟಪೂರ್ವ ಸರಕಾರದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ಶಹೀದ್ ಖಾನ್ ಅಬ್ಟಾಸಿ ಅವರು ಹಂಗಾಮಿ ಪ್ರಧಾನಿಯಾಗಲಿದ್ದಾರೆ. ಈ ಬಗ್ಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಪಾಕಿಸ್ಥಾನ ಮುಸ್ಲಿಂ ಲೀಗ್ – ನವಾಜ್ (ಪಿಎಂಎಲ್-ಎನ್)ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿದೆ. ಶೆಭಾಜ್ ಖಾನ್ ನ್ಯಾಶನಲ್ ಅಸೆಂಬ್ಲಿಯ ಸದಸ್ಯರಾಗುವವರೆಗೆ ಖಾನ್ ಪ್ರಧಾನಿ ಹುದ್ದೆಯಲ್ಲಿರುತ್ತಾರೆ. ನೇಮಕದ ಬಗ್ಗೆ ನವಾಜ್ ಷರೀಫ್ರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಜ| ಪರ್ವೇಜ್ ಮುಷರ್ರಫ್ ಆ ರಾಷ್ಟ್ರದ ನೇತೃತ್ವ ವಹಿಸಿದ್ದ ವೇಳೆ ಚೌಧರಿ ಶುಜಾತ್ ಹುಸೇನ್‌ರನ್ನು ಹಂಗಾಮಿ ಪ್ರಧಾನಿಯನ್ನಾಗಿ ನೇಮಿಸಲಾಗಿತ್ತು.
ಆರ್ಥಿಕ ಕಾರಿಡಾರ್‌ಗೆ ತೊಂದರೆಯಿಲ್ಲ ಷರೀಫ್ ರಾಜೀನಾಮೆಯಿಂದಾಗಿ ಪಾಕ್-ಚೀನ ಆರ್ಥಿಕ ಕಾರಿಡಾರ್ ಅನುಷ್ಠಾನಕ್ಕೆ ಹಿನ್ನಡೆಯಾಗಲಾರದು ಎಂದಿದೆ ಚೀನ. ಸುಪ್ರೀಂ ತೀರ್ಪು ಆ ದೇಶದ ಆಂತರಿಕ ವಿಚಾರ. ಪಾಕ್ ಜತೆಗಿನ ಬಾಂಧವ್ಯ ಮುಂದುವರಿಯಲಿದೆ ಎಂದು ಚೀನ ಹೇಳಿದೆ. ಪಾಕ್‌ಗೆ ದಿಗ್ಬಂಧನ ವಿಧಿಸಿ
ವಾಷಿಂಗ್ಟನ್: ಭಯೋತ್ಪಾದಕರಿಗೆ ಪಾಕಿಸ್ಥಾನ ಬೆಂಬಲ ನೀಡುತ್ತಿದೆ. ಹೀಗಾಗಿ ಅದರ ವಿರುದ್ಧ ಕಠಿನ ಕ್ರಮಕೈಗೊಳ್ಳಬೇಕು. ನಿಧಾನವಾಗಿ ಆ ದೇಶದ ಮೇಲೆ ರಾಜತಾಂತ್ರಿಕ, ಆರ್ಥಿಕ, ಮಿಲಿಟರಿ ದಿಗ್ಬಂಧನ ವಿಧಿಸಬೇಕು. ಅಫ್ಘಾನಿಸ್ಥಾನದಲ್ಲಿರುವ ಅಮೆರಿಕದ ಸೇನಾಪಡೆಗಳನ್ನು ಮತ್ತಷ್ಟು ಬಲಪಡಿಸಿ ಹಕ್ಕಾನಿ ನೆಟ್‌ವರ್ಕ್, ತಾಲಿಬಾನ್ ಸೇರಿ ಉಗ್ರ ಸಂಘಟನೆಗಳನ್ನು ನಾಶ ಮಾಡಬೇಕೆಂದು ಅಮೆರಿಕದ ಪ್ರಬಲ ಸೆನೆಟರ್ ಜಾನ್ ಮೆಕಿನ್ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಅಲ್ಲಿನ ಸಂಸತ್‌ನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯೊಂದನ್ನು ಮಂಡಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ 2018 (ನ್ಯಾಶನಲ್ ಡಿಫೆನ್ಸ್ ಅಥೊರೈಸೇಷನ್ ಆ್ಯಕ್ಟ್) ಸೆನೆಟರ್ ಜಾನ್ ಮೆಕಿನ್ ತಿದ್ದುಪಡಿ ಸೂಚಿಸಿ ಗುರುವಾರ ಸಂಸತ್‌ನಲ್ಲಿ ಮಂಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ದೀರ್ಘಕಾಲಕ್ಕೆ ಶಾಂತಿ ಸ್ಥಾಪಿಸಲು ಅನುವಾಗುವಂತೆ ಅದನ್ನು ರೂಪಿಸಲಾಗಿದೆ. ಪ್ರಾದೇಶಿಕ ಸಹಕಾರ ಬಲಪಡಿಸಲೂ ಅದರಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.