Advertisement

ಫ‌ಲಾನುಭವಿಗಳ ಮಾಹಿತಿ ತಿಳಿವ ಹಕ್ಕು ಸರ್ಕಾರಕ್ಕಿಲ್ಲವೇ?

07:00 AM Jan 31, 2018 | Team Udayavani |

ನವದೆಹಲಿ: “ವಿವಿಧ ರೀತಿಯ ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವ ಸರ್ಕಾರಗಳಿಗೆ ಅದು ನಿಜವಾದ ಫ‌ಲಾನುಭವಿಗಳನ್ನು ತಲುಪುತ್ತದೆಯೋ ಇಲ್ಲವೋ ಎನ್ನುವುದನ್ನು ತಿಳಿಯುವ ಹಕ್ಕೂ ಇಲ್ಲವೇ?’

Advertisement

ಹೀಗೆಂದು ಪ್ರಶ್ನಿಸಿದ್ದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ. ಆಧಾರ್‌ ಕಾರ್ಡ್‌ಗಾಗಿ ದೇಶದ ಜನರ ಬಯೋಮೆಟ್ರಿಕ್‌ ಮತ್ತು ಇತರ ಮಾಹಿತಿಗಳನ್ನು ಸಂಗ್ರಹಿಸಿದ್ದರಿಂದ ಅನಾಹುತ ಸಂಭವಿಸುತ್ತದೆ ಎಂದು ಆಧಾರ್‌ ವಿರೋಧಿಸಿ ಅರ್ಜಿ ಸಲ್ಲಿಸಿದವರ ಪರ ವಾದಿಸಿದ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌ ಕಳವಳ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಸರ್ಕಾರಕ್ಕೆ ಯೋಜನೆಯ ಫ‌ಲಾನುಭವಿಗಳ ಬಗ್ಗೆ ತಿಳಿಯುವ ಹಕ್ಕೂ ಇಲ್ಲವೇ ಎಂದು ಪ್ರಶ್ನೆ ಮಾಡಿದರು. 

“ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಯೋಜನೆಗಳ ಫ‌ಲಾನುಭವಿಗಳು ಯಾರು ಎಂದು ತಿಳಿಯಲು ಆಧಾರ್‌ ಮಾಹಿತಿ ಬಳಸಿಕೊಂಡಿರಬಹುದು. ಅದನ್ನು ನೀವು (ವಕೀಲರು) ಸಾರ್ವಜನಿಕರ ಮೇಲೆ ನಿಗಾ ಇರಿಸಲು ಬಳಸಿಕೊಳ್ಳಲಾಗುತ್ತದೆ ಎಂಬ ದೃಷ್ಟಿಯಿಂದ ನೋಡಿರುವ ಸಾಧ್ಯತೆ ಇದೆ’ ಎಂದರು. 

ಅದಕ್ಕೆ ಪೂರಕವಾಗಿ ಆಧಾರ್‌ ಜಾರಿ ಯಿಂದಾಗಿ ಸೀಮೆ ಎಣ್ಣೆ, ಎಲ್‌ಪಿಜಿ ಬಳಕೆ ದಾರರ ಖಾತೆಗೆ ನೇರವಾಗಿ ಸಬ್ಸಿಡಿ ಹಣ ವರ್ಗಾವಣೆಯಾದ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಮಾಹಿತಿಯನ್ನು ನ್ಯಾಯಪೀಠ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next