Advertisement

ಕಳಪೆ ಫಾರ್ಮ್ನಿಂದ ನೊಂದ ಧೋನಿ ನಿವೃತ್ತಿಗೆ ಚಿಂತನೆ?

06:00 AM Jul 19, 2018 | Team Udayavani |

ಲೀಡ್ಸ್‌: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ತೀವ್ರ ಕಳಪೆ ಫಾರ್ಮ್ನಲ್ಲಿದ್ದಾರೆ. ಇಂಗ್ಲೆಂಡ್‌ ವಿರುದಟಛಿದ 2 ಮತ್ತು 3ನೇ ಪಂದ್ಯದಲ್ಲಿ ಅತಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿ ಟೀಕೆಗೊಳಗಾಗಿದ್ದಾರೆ. ಇದರ ಮಧ್ಯೆಯೇ ಧೋನಿ ನಿವೃತ್ತಿಗೆ ಚಿಂತಿಸಿದ್ದಾರೆಯೇ ಎಂಬ ಅನುಮಾನವೊಂದು ಹುಟ್ಟಿಕೊಂಡಿದೆ. ಈ ಊಹಾಪೋಹಗಳಿಗೆ ಕಾರಣ ಟ್ವೀಟರ್‌. 3ನೇ ಪಂದ್ಯ ಮುಗಿದ ನಂತರ ಧೋನಿ ಅಂಪೈರ್‌ಗಳ ಚೆಂಡನ್ನು ಕೇಳಿ ಪಡೆದುಕೊಂಡಿದ್ದಾರೆ. ಅವರ ನಡೆಯನ್ನು ವಿಪರೀತವಾಗಿ ಅರ್ಥ ಮಾಡಿಕೊಂಡಿರುವ ಅಭಿಮಾನಿಗಳು ಧೋನಿ ತಮ್ಮ ಕಳಫೆ ಫಾರ್ಮ್ನಿಂದ
ನೊಂದಿದ್ದಾರೆ. ಆದ್ದರಿಂದ ನಿವೃತ್ತಿ ಹೇಳಲು ಚಿಂತಿಸಿರಬಹುದು. ಅದೇ ಕಾರಣದಿಂದ ನೆನಪಿಗಾಗಿ ಚೆಂಡನ್ನು ಅಂಪೈರ್‌ಗಳಿಂದ ಕೇಳಿ ಪಡೆದು 
ಕೊಂಡಿದ್ದಾರೆ ಎಂದು ಲೆಕ್ಕಾಚಾರ ಮಾಡಿದ್ದಾರೆ. ಧೋನಿ 2014ರಲ್ಲಿ ದಿಢೀರನೆ ಟೆಸ್ಟ್‌ ಕ್ರಿಕೆಟ್‌ಗೆ ರಾಜೀನಾಮೆ ಎಲ್ಲರನ್ನೂ ಆಘಾತಕ್ಕೆ ದೂಡಿದ್ದರು. ಅದೇ ರೀತಿ ಇಲ್ಲೂ ಆಗಬಹುದು ಎಂಬ ಊಹೆ ಅಭಿಮಾನಿಗಳದ್ದು.

Advertisement

ಆದರೆ ಧೋನಿ ಟೀಕೆಗಳಿಗೆ ಹೆದರಿ ರಾಜೀನಾಮೆ ಕೊಡುವ ವ್ಯಕ್ತಿಯಲ್ಲ. ಭಾರತದಲ್ಲಿ 2016ರಲ್ಲಿ ನಡೆದ ಟಿ20 ವಿಶ್ವಕಪ್‌ ಸೋತಾಗಲೂ ಅವರು ತಾನು 2019ರ ವಿಶ್ವಕಪ್‌ವರೆಗೆ ಆಡುತ್ತೆನೆಂದು ಸ್ಪಷ್ಟವಾಗಿ ಹೇಳಿದ್ದರು. ಅದೇ ಕಾರಣಕ್ಕೆ ಅವರು ಭಾರತ ತಂಡಕ್ಕೆ ಸತತವಾಗಿ ಆಯ್ಕೆ
ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಪರಿಗಣಿಸಿದರೆ ಟ್ವೀಟರ್‌ನಲ್ಲಿ ಅತಿರೇಕದ ಪ್ರತಿಕ್ರಿಯೆ ಬಂದಿದೆ ಎಂದು ಕೆಲವರು ವಿಶ್ಲೇಷಿಸುತ್ತಾರೆ.
 

Advertisement

Udayavani is now on Telegram. Click here to join our channel and stay updated with the latest news.

Next