Advertisement

ಡೇಟಿಂಗ್‌ ನಲ್ಲಿ ಮಲೈಕಾ – ಅರ್ಜುನ್‌: ಮೊದಲ ಮಗುವಿನ ನಿರೀಕ್ಷೆಯಲ್ಲಿ? ಬಿಟೌನ್‌ ನಲ್ಲಿ ಹಾಟ್‌ ಟಾಪಿಕ್

04:34 PM Nov 30, 2022 | Team Udayavani |

ಮುಂಬಯಿ: ಸಲೆಬ್ರಿಟಿಗಳ ಕುರಿತಾಗಿ ದಿನನಿತ್ಯ ಹತ್ತಾರು ಗಾಸಿಪ್‌ ಗಳು ಹರಿದಾಡುತ್ತಿರುತ್ತದೆ. ಸದ್ಯ ಬಾಲಿವುಡ್‌ ನ ಬೋಲ್ಡ್‌ ನಟಿ ಮಲೈಕಾ ಆರೋರಾ ಕುರಿತಾದ ಗಾಸಿಪ್‌ ಸುದ್ದಿಯೊಂದು ಬಿಟೌನ್‌ ನಲ್ಲಿ ಸದ್ದು ಮಾಡುತ್ತಿದೆ.

Advertisement

ನಟ ಅರ್ಬಜ್‌ ಖಾನ್‌ ಅವರಿಂದ ದೂರವಾದ ಬಳಿಕ ಮಲೈಕಾ ಆರೋರಾ ನಟ ಅರ್ಜುನ್‌ ಕಪೂರ್‌ ನೊಂದಿಗೆ ಡೇಟಿಂಗ್‌ ನಲ್ಲಿದ್ದಾರೆ. ಇವರಿಬ್ಬರ ಡೇಟಿಂಗ್‌ ಆರಂಭದಲ್ಲಿ ದೊಡ್ಡ ಸುದ್ದಿಯಾಗಿತ್ತು. ತಮಗಿಂತ ಕಿರಿಯವನನ್ನು ಡೇಟ್‌ ಮಾಡುತ್ತಿರುವ ಮಲೈಕಾ ಅವರನ್ನು ಟ್ರೋಲ್‌ ಕೂಡ ಮಾಡಲಾಗಿತ್ತು. ಆದರೆ  ಎಲ್ಲವನ್ನೂ ಮೀರಿ ಅರ್ಜುನ್‌ ಹಾಗೂ ಮಲೈಕಾ ಎಷ್ಟೋ ಬಾರಿ ಸಾರ್ವಜನಿಕವಾಗಿಯೇ ಕಾಣಿಸಿಕೊಂಡು, ಪ್ರವಾಸಿ ತಾಣಗಳಲ್ಲಿ ತಿರುಗಾಡಿದ್ದಾರೆ.

ಇದೇ ವರ್ಷದ ಅಕ್ಟೋಬರ್‌‌ ನಲ್ಲಿ ಮಲೈಕಾ -ಅರ್ಜುನ್ ಲಂಡನ್‌ ಗೆ ಭೇಟಿ ನೀಡಿದ್ದರು. ಅಲ್ಲಿ ಮಲೈಕಾ ತಾನು ತಾಯಿಯಾಗಲಿದ್ದೇನೆ ಎನ್ನುವುದನ್ನು ಕುಟುಂಬದ ಕೆಲ ಆಪ್ತರಿಗೆ ಹೇಳಿದ್ದಾರೆ ಎಂದು ಪಿಂಕ್‌ ವಿಲ್ಲಾ ವರದಿ ತಿಳಿಸಿದೆ.

ಅರ್ಜುನ್‌ – ಮಲೈಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಬಿಟೌನ್‌ ನಲ್ಲಿ ವೈರಲ್‌ ಆಗಿದೆ. ಆದರೆ ಈ ಸುದ್ದಿಯನ್ನು ಕುಟುಂಬದ ವ್ಯಕ್ತಿಯೊಬ್ಬರು ಇಟಿ ಟೈಮ್ಸ್‌ ಗೆ ಮಲೈಕಾ ಆರೋರಾ ಅವರು ಗರ್ಭಿಣಿಯಲ್ಲ. ಈ ಸುದ್ದಿ ವದಂತಿಯಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಮಲೈಕಾ ಆರೋರಾ ಓಟಿಟಿಗೆ ಮೊದಲ ಬಾರಿ ಪ್ರವೇಶ ಮಾಡಲಿದ್ದು, ʼಮೂವಿಂಗ್‌ ವಿಥ್‌ ಮಲೈಕಾʼ ಎನ್ನುವ ಶೋವನ್ನು ಆರಂಭಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next