Advertisement
ಕೇಂದ್ರ ಸರಕಾರದ ವರದಿ ಪ್ರಕಾರ 3 ವರ್ಷಗಳಲ್ಲಿ 13 ಲಕ್ಷ ಮಹಿಳೆಯರು ನಾಪತ್ತೆ ಯಾಗಿದ್ದಾರೆ. ಇದರಲ್ಲಿ ಕರ್ನಾಟಕದಲ್ಲೇ 40 ಸಾವಿರ ಮಹಿಳೆಯರಿದ್ದಾರೆ. ಇದು ಆತಂಕದ ಸಂಗತಿ ಎಂದರು.ಇದಕ್ಕೆ ಉತ್ತರ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಮಾನವ ಕಳ್ಳಸಾಗಣೆ ತಡೆಯಲು 34 ಘಟಕ ಸ್ಥಾಪನೆ ಮಾಡಲಾಗಿದೆ, ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಸ್ ಹಾಗೂ ವಿಮಾನ ನಿಲ್ದಾಣದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕೆಮರಾ ಅಳವಡಿಸಿ, ಸ್ಕ್ಯಾನಿಂಗ್ ಮಾಡಿ ಆರ್ಟಿಫಿಶಿಯಲ್ ಇಂಟಲಿ ಜೆನ್ಸ್ ಬಳಸಿ ಮಾನವ ಕಳ್ಳಸಾಗಣೆ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.