Advertisement
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮ ನಡುವೆಯೇ ಒಳಜಗಳ ಶುರುವಾಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬರಲಾರಂಭಿಸಿವೆ. ಸೋಲಿನ ಕಾರಣವೊಡ್ಡಿ ಸೀಮಿತ ಓವರ್‌ಗಳ ನಾಯಕತ್ವವನ್ನು ಕೊಹ್ಲಿಯ ಬದಲು ರೋಹಿತ್‌ಗೆ ನೀಡಬೇಕು ಎಂದು ಸ್ವತಃ ಬಿಸಿಸಿಐ ಒಳಗೆಯೇ ಒತ್ತಾಯ ಕೇಳಿಬಂದಿದೆ ಎಂದು ಮೂಲಗಳು ಹೇಳಿವೆ.
ಬಿಸಿಸಿಐ ಆಡಳಿತಾಧಿಕಾರಿಗಳ ಜತೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮ ಹಾಗೂ ತಂಡದ ಕೋಚ್ ರವಿಶಾಸಿŒ ಕಳೆದ ವರ್ಷ ಸಭೆ ಮಾಡಿದ್ದರು. ಈ ವೇಳೆ ವಿಶ್ವಕಪ್ ಮತ್ತು ಐಪಿಎಲ್‌ನ ಪೂರ್ವಸಿದ್ಧತೆ ಹಾಗೂ ಆಟಗಾರರಿಗೆ ನೀಡಬೇಕಾದ ವಿಶ್ರಾಂತಿ ಬಗ್ಗೆ ಚರ್ಚೆಯೂ ನಡೆದಿತ್ತು. ಈ ವೇಳೆ ಇಬ್ಬರೂ ಕ್ರಿಕೆಟಿಗರ ನಡುವಿನ ಮಾತಿನಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು ಎನ್ನಲಾಗಿದೆ. ಆಗಲೇ ಟೀಮ್ ಇಂಡಿಯಾದಲ್ಲಿ ಎಲ್ಲ ಸರಿ ಇರಲಿಲ್ಲ ಎನ್ನುವುದು ಸ್ವಲ್ಪ ಮಟ್ಟಿಗೆ ಬಹಿರಂಗವಾಗಿತ್ತು. ಇದೀಗ ವಿಶ್ವಕಪ್ ಸೆಮೀಸ್ ಸೋಲು ಕೊಹ್ಲಿಯ ಸೀಮಿತ ಓವರ್‌ಗಳ ನಾಯಕತ್ವದ ಕುರ್ಚಿಯನ್ನೇ ಅಲುಗಾಡಿಸಿದೆ. ಹೀಗಾಗಿ ಬಿಸಿಸಿಐ ವತಿಯಿಂದ ನಡೆಯಲಿರುವ ಅವಲೋಕನ ಸಭೆಯತ್ತಲೇ ಎಲ್ಲರ ಚಿತ್ತ ಹರಿದಿದೆ. ಶೀಘ್ರವೇ ಈ ಸಭೆ ನಡೆಯಲಿದೆ. ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಕೋಚ್ ರವಿಶಾಸಿŒ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಎಲ್ಲಿ ತಪ್ಪು ಆಗಿದೆ, ಮುಂದೆ ಅದನ್ನು ಸರಿ ಪಡಿಸುವುದು, ನಾಯಕರ ನಡುವೆ ಪರಸ್ಪರ ಅಸಮಾಧಾನವಿದ್ದರೆ ಅದನ್ನು ಹೇಗೆ ಸರಿಪಡಿಸುವುದು ಎನ್ನುವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
Related Articles
ಬಿಸಿಸಿಐ ಮೂಲಗಳ ಪ್ರಕಾರ ಕೊಹ್ಲಿ ಏಕದಿನ, ಟಿ20 ನಾಯಕತ್ವವನ್ನು ಕಳೆದುಕೊಳ್ಳಲಿದ್ದಾರೆ. ಭವಿಷ್ಯದ ಮಹತ್ವದ ಕೂಟಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಇಂತಹ ನಿರ್ಣಯ ತೆಗೆದುಕೊಳ್ಳಬಹುದು. ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರಿಯುವ ಸಾಧ್ಯತೆ ಇದೆ.
Advertisement