Advertisement

Kerala: ಮದ್ಯ ಜಾಹೀರಾತು ಪ್ರಸಾರಕ್ಕೆ ಕೇರಳ ಅನುಮತಿ?

10:31 PM Aug 10, 2023 | Team Udayavani |

ತಿರುನಂತಪುರ: ಕೇರಳದಲ್ಲಿ ಇನ್ನೂ ಮುಂದೆ ಸಿನಿಮಾ ಪ್ರಸಾರದ ವೇಳೆ ಮದ್ಯ ಜಾಹೀರಾತುಗಳನ್ನು ಪ್ರಸಾರ ಮಾಡಬಹುದು. ಮಾತ್ರವಲ್ಲ ಮದ್ಯ, ತಂಬಾಕಿನ ದೃಶ್ಯ ಪ್ರಸಾರವಾಗುವ ಸಮಯದಲ್ಲಿ ಜಾಗೃತಿ ಸಂದೇಶ ಪ್ರಸಾರ ಮಾಡುವುದು ಕಡ್ಡಾಯವಲ್ಲ ಎಂಬ ನಿಯಮವೂ ಜಾರಿಯಾಗಬಹುದು! ಕೇರಳ ವಿಧಾನಸಭೆಯಲ್ಲಿ ಅಬಕಾರಿ (ತಿದ್ದುಪಡಿ) ವಿಧೇಯಕ, 2023 ಅನ್ನು ಧ್ವನಿಮತದ ಮೂಲಕ ಆಯ್ಕೆಸಮಿತಿಗೆ ಕಳುಹಿಸಲಾಗಿದೆ. ರಾಜ್ಯದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

Advertisement

ಮುಂಗಡವಾಗಿ ಜಾಹೀರಾತುದಾರ 50,000 ರೂ. ಠೇವಣಿ ಇಟ್ಟರೆ, ಮದ್ಯ ಜಾಹೀರಾತಿಗೆ ಸರ್ಕಾರ ಅನುಮತಿ ನೀಡಲಿದೆ. ಇನ್ನೊಂದೆಡೆ, ಸಿನಿಮಾದ ನಿರ್ಮಾಪಕ ಮೊದಲೇ 50,000 ರೂ. ಠೇವಣಿ ಇಟ್ಟರೆ, ಆರೋಗ್ಯದ ಎಚ್ಚರಿಕೆಯ ಸಂದೇಶ ಇಲ್ಲದೇ ದೃಶ್ಯಗಳ ಪ್ರಸಾರಕ್ಕೆ ಅವಕಾಶ ನೀಡಲಿದೆ.

ಪ್ರಸ್ತುತ, ಸಿನಿಮಾದಲ್ಲಿ ಮದ್ಯ ಮತ್ತು ತಂಬಾಕಿನ ದೃಶ್ಯ ಪ್ರಸಾರ ಸಮಯದಲ್ಲಿ ಆರೋಗ್ಯದ ಎಚ್ಚರಿಕೆಯ ಸಂದೇಶ ಪ್ರಸಾರ ಮಾಡದಿದ್ದರೆ, ಕಾನೂನು ಉಲ್ಲಂಘನೆ ಅಡಿಯಲ್ಲಿ 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಬಹುದಾಗಿದೆ. ಕೇರಳ ಸರ್ಕಾರ ತಿದ್ದುಪಡಿ ಮೂಲಕ ಈ ಶಿಕ್ಷೆಯನ್ನು ರದ್ದು ಮಾಡಲು ಮುಂದಾಗಿದೆ. ಕೇರಳ ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್‌ ಶಾಸಕ ಮಾಥ್ಯೂ ಕುಜಲನಾಡನ್‌ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next