Advertisement

ಮೂಲಾ ನಕ್ಷತ್ರದ ಸ್ತ್ರೀಯರಿಗೆ ತೊಂದರೆ ಆಗುತ್ತದೆ ಅನ್ನೋದು ಸತ್ಯವೇ? 

05:10 PM Jun 24, 2017 | |

ವಾಸ್ತವಗಳು ಏನೋ ಇರುತ್ತವೆ. ನಂಬಿಕೆಗಳು ನಮ್ಮನ್ನು ಹಣ್ಣು ಮಾಡುತ್ತವೆ. ವಿಜಾnನಿಗಳು ಭೂಕಂಪ ನಡೆದಾಗ ಸುನಾಮಿ ಅಲೆಗಳು ಅಪ್ಪಳಿಸಬಹುದೆಂಬ ಸೂಚನೆ ಕೊಡುತ್ತಲೇ ಇರುತ್ತಾರೆ. ಕೊಟ್ಟ ಸೂಚನೆಗಳೆಲ್ಲ ನೂರಾರು ಸಲ ಸುಳ್ಳೇ ಆದ ಉದಾಹರಣೆಗಳು ಇವೆ. ಇದರ ಅರ್ಥ ವಿಜಾnನವನ್ನು ಮೂರ್ಖತನದಿಂದ,  ಅಜಾnನದ ಪರಮಾವಧಿ ಮೊತ್ತವನ್ನು ನಮ್ಮ ಮೇಲೆ ಹೇರಿದ ಅನರ್ಥಕಾರಕ ವಿಚಾರ ಎಂದು ಮೂದಲಿಸಲಾಗದು. ಯಾಕೆಂದರೆ ಸಮುದ್ರದ ಆಳದಿಂದ ಎದ್ದೇಳುವ ನೀರಿನ ಅಲೆಗಳನ್ನ ತಡೆಯುವ ದೈತ್ಯ ಶಕ್ತಿಯ ವಿಚಾರವನ್ನು ವಿಜಾnನ ತಿಳಿದಿರುವುದಿಲ್ಲ. ಅದನ್ನು ತಿಳಿಯಲು ಅದು ಇನ್ನೂ ಸ್ವಲ್ಪ ಕಾಲವನ್ನು ತೆಗೆದುಕೊಳ್ಳಬಹುದು. ಜೋತಿಷ್ಯ-ವಿಜಾnನವೂ ಹಲವಾರು ವಿಚಾರಗಳನ್ನು ಪ್ರತಿಪಾದಿಸಿದೆ. ನಷ್ಟ, ಕಷ್ಟ, ವ್ಯಕ್ತಿತ್ವಕ್ಕೆ ಧಕ್ಕೆ, ಸಾಲ ಶೂಲ ಅವಘಡ, ರೋಗ ರುಜಿನ, ಬಂಧನ ಭಯ, ಧನನಷ್ಟ, ಏಳ್ಗೆಯೇ ಇರದ ಶುಷ್ಕ ಕಾಲಾವಧಿ ಎಲ್ಲಾ ಇದ್ದು ಏನೂ ಇಲ್ಲ ಎಂದು ಸಂಚು ಹೂಡುವ ಏನೋ ಒಂದು ಪ್ರಾರಬ್ಧಕ್ಕೆ ಹಲವು ತೀವ್ರವಾದ ದೋಷ, ಯಾರದೋ ಶಾಪ, ಆತ್ಮೀಯರ ಅಗಲಿಕೆ ಕಟ್ಟಕಡೆಗೆ ವ್ಯಕ್ತಿಯ ಸಾವು ಸಂಭವಿಸಲಿದೆ ಎಂಬುದನ್ನೆಲ್ಲ ಮುಂಚೆಯೇ ತಿಳಿದು ವಿಶ್ಲೇಷಿಸಿ ಭಾರತೀಯ ಜೋತಿಷ್ಯ ಜಾnನ ತಿಳಿಸುತ್ತದೆ. ಇವು ಇನ್ನೂ ಕೆಲವು ಅನ್ಯ ಕಾರಣದಿಂದ ಊಹಿಸಿದಂತೆ ಸಂಭವಿಸದೆ ಉಳಿದ ಉದಾಹರಣೆಗಳು ಇವೆ. ಹೀಗಂತ ಮಾತ್ರಕ್ಕೆ ಜೋತಿಷ್ಯ ವಿಜಾnನವನ್ನು ನಿರಾಕರಿಸುವುದು ಸೂಕ್ತವಲ್ಲ.
ಮೂಲಾ ನಕ್ಷತ್ರದ ಕೇತು ಮತ್ತು ನಕ್ಷತ್ರ ದೇವತೆ 

Advertisement

ಮೂಲಾ ನಕ್ಷತ್ರದ ವ್ಯಾಪ್ತಿ ಧನುಸ್ಸು ರಾಶಿಯಲ್ಲಿ ಸಮಾವೇಶಗೊಳ್ಳುತ್ತದೆ. ಧನುಸ್ಸು ಯುದ್ಧಗಳಿಂದಾಗಿ, ಭಯವನ್ನೂ ಆಯುಧವಾಗಿ ರಕ್ಷೆಯನೂ,° ಯುದ್ಧ ಅಥವಾ ರಕ್ಷಣೆಯ ಸಂದರ್ಭದಲ್ಲಿ ಜೀವನಾಶವನ್ನಾಗಲೀ, ರಕ್ತಪಾತ ನೋವು ಇತ್ಯಾದಿಗಳನ್ನು ಉಂಟು ಮಾಡುವುದರಿಂದ ಇದು ಅಗ್ನಿರಾಶಿ. ಆದರೆ ಈ ರಾಶಿಯ ಯಜಮಾನ ಜಾnನಕ್ಕೆ ಕಾರಣನಾಗಿರುವ, ಸಂತಾನಕ್ಕೆ ಕೊಂಡಿ ಕೂಡಿಸುವ ಧನಾಗಮನಕ್ಕೆ ಸಿದ್ಧಿ ಕೊಡುವ  ಕೃತಿಗಳನ್ನು ಆಕೃತಿಗೆ ತಂದು ನಿಲ್ಲಿಸುವ ಗುರು. ಗುರುವು ಒಡೆಯನಾದ ಈ ರಾಶಿ ಒಟ್ಟೂ ಕ್ಷೇತ್ರವ್ಯಾಪ್ತಿ 30 

ಡಿಗ್ರಿಗಳಲ್ಲಿ ಮೊದಲ 13 ಅಂಶ 20
ಕಲೆಗಳನ್ನು ಮೂಲಾ ನಕ್ಷತ್ರ ಹೊಂದಿರುತ್ತದೆ. ಮೂಲಾ ನಕ್ಷತ್ರವು ಸ್ತ್ರೀಯರ ಪಾಳಿಗೆ ಒಳಿತಿನ ನಕ್ಷತ್ರವಲ್ಲ ಎಂಬುದಾಗಿ ನಮ್ಮ ಜೋತಿಷ್ಯ ಶಾಸ್ತ್ರ ಪ್ರತಿಪಾದಿಸುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಹೀಗೆ ಹೇಳಿದ ಶಾಸ್ತ್ರವೇ ಕೆಲವು ಅಪವಾದಗಳನ್ನು ಒತ್ತಿ ಹೇಳುತ್ತದೆ. ಮೂಲಾ ನಕ್ಷತ್ರದ ಸ್ತ್ರೀಯೋರ್ವಳು ಅತ್ತೆ-ಮಾವನ ಮದುವೆಯಾಗಿ ಬಂದರೆ ಜೀವಕ್ಕೆ ಕೇಡು ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ ಎಂಬುದು ಸತ್ಯ. ಆದರೂ ವಾಸ್ತವವಾಗಿ ಇನ್ನಿತರ ಎಷ್ಟೋ ಕಾರಣಗಳಿಂದ ದೋಷಗಳು ನಿವಾರಣೆ ಆಗುತ್ತದೆ ಎಂಬುದೂ ಅಷ್ಟೇ ಸತ್ಯ. 

ಮೊತ್ತ ಮೊದಲಾಗಿ ಮೂಲಾ ನಕ್ಷತ್ರದ ಸೊಸೆಯಂದಿರು ತಾವು ಮದುವೆಯಾಗಿ ಬಂದ ಮನೆಯ ಆರ್ಥಿಕ ಬಲಾಡ್ಯತೆಯನ್ನು ಸಂಸಾರದೊಳಗಿನ ಸಂತೋಷವನ್ನು ಜಾಸ್ತಿ ಮಾಡಿದ ಉದಾಹರಣೆಗಳೆ ಹೇರಳವಾಗಿದೆ. ಕಾರಣ ಇಷ್ಟೇ ಮೂಲಾ ನಕ್ಷತ್ರವನ್ನು ಒಳಗೊಳ್ಳುವ ಮನೆಯ ಧನುಸ್ಸು ರಾಶಿಯ ಅಧಿಪತಿ, ಗುರು ಇಡೀ ಜಾತಕವನ್ನು ತನ್ನ ಶಕ್ತಿ ಪ್ರಭಾವಗಳಿಂದ ಮೂಲಾ ನಕ್ಷತ್ರದ ದೋಷಗಳನ್ನು ನಿಯಂತ್ರಿಸಿ ಬಿಡುವುದಲ್ಲದೆ, ತನ ದೃಷ್ಟಿಯ ಫ‌ಲವಾದ ಸಾಮರ್ಥ್ಯದ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಒದಗಿಸುತ್ತಾನೆ. ಗುರು ಹಾಗೂ ಕೇತುವಿನ ಶಾಂತಿಯನ್ನು ಮಾಡಿಸುವುದರ ಮೂಲಕ ಮೂಲಾ ನಕ್ಷತ್ರ ದೋಷ ಪರಿಹಾರವಾಗುತ್ತದೆ. ಗುರು ಹಾಗೂ ಕೇತು ಪೀಡಾ ಪರಿಹಾರ ಸ್ತೋತ್ರ ಪಠಣಗಳ ಮೂಲಕ ಮೂಲಾ ನಕ್ಷತ್ರ ದೋಷ ಪರಿಹಾರವಾಗುತ್ತದೆ. ಜಾತಕದಲ್ಲಿ ಗುರುವೂ, ಕೇತು ಬಲವಾಗಿ ಇದ್ದಾಗ ಗುರು ಶಾಂತಿ, ಕೇತು ಶಾಂತಿಯೂ ಆದಾಗ ನಕ್ಷತ್ರ ದೇವತೆ ನಿಯತಿಯ ದೋಷಗಳೂ ಕರಗಿ ಹೊಸದೇ ಬದಲಾವಣೆಗೆ ತೆರೆದುಕೊಳ್ಳಲು ಸಹಾಯವಾಗುತ್ತದೆ. 

ಅಲಕ್ಷಿ$¾ ಮತ್ತು ಮೂಲಾ ನಕ್ಷತ್ರ:
ನಮ್ಮಲ್ಲಿ ಅಲಕ್ಷಿ$¾ ಎಂಬ ಶಬ್ದವೊಂದು ಭಾರಿ ಸದ್ದು ಮಾಡುತ್ತಿರುತ್ತದೆ. ಲಕ್ಷಿ$¾ ಎಂಬುದು ಇದೆ. ಅವಳೇ ಮಹಾಮಾಯೆ. ಜಗತ್ತಿನ ಜನನಕ್ಕೆ ಕಾರಣಳಾಗಿ ಇಂಥ ಒಂದು ಬೃಹತ್‌ ವಿಶ್ವವನ್ನು ತನ್ನ ಮಾಯೆಯಿಂದ ಸ್ಪಷ್ಟಗೊಳಿಸಿದ ಮಹಾನ್‌ ತಾಯಿ. ಇವಳೇ (ನಮ್ಮ ಆಧುನಿಕ ಜಾnನ ಪ್ರತಿಪಾದಿಸುತ್ತಿರುವ, ಕಾಳ ವ್ಯಾಪ್ತಿ ಹಾಗೂ ಸಂಘರ್ಷ ಹಾಗೂ ಶಕ್ತಿಯುತವಾದ ಸ್ಫೋಟವೊಂದರಿಂದಾಗಿ ಮೈತಳೆದ, ಊಹಿಸಲು ಸಾಧ್ಯವಾಗದ ಆಕಾಶದೊಳಗಿನ ಅತಿಸೂಕ್ಷ್ಮಗಳನ್ನು) ಪ್ರಪಂಚಕ್ಕೆ ಎಲ್ಲವನ್ನೂ ಒದಗಿಸುವ ಪ್ರಚಂಡ ಶಕ್ತಿಯಾಗಿ, ಮಾತೆಯಾಗಿ ಹರಿಹರಬ್ರಹ್ಮಾದಿಗಳು ಅಣುವಿನ ರೂಪದಲ್ಲಿದ್ದವರನ್ನು ವಿರಾಟ ರೂಪಕ್ಕೆ ಹಿಗ್ಗಿಸಿದವಳು ಎಂಬ ವಿಸ್ತಾರವಾದ ವಿವರಣೆ ನಮ್ಮ ಪುರಾಣಗಳಲ್ಲಿ ಬರುತ್ತದೆ. ಇವಳು ಶಂಖ, ಚಕ್ರ, ಗದಾ, ಹಸ್ತಳಾಗಿದ್ದಾಳೆ. ಎಂಬುದು ನಮ್ಮ ಭಾರತೀಯ ನಂಬಿಕೆ. ಜಗತ್ತಿನಲ್ಲಿ ಸಕಲ ಗ್ರಹ ನಕ್ಷತ್ರಾದಿಗಳ ಚಲನಶೀಲತೆಯ ವೇಗದಿಂದಾಗಿ ಒಂದು ರೀತಿಯ ಶಂಖನಾದ ಕೇಳಿ ಬರುತ್ತದೆ. ಸೂರ್ಯನ ಪರಿಭ್ರಮಣದ ಸುತ್ತಲಿನ ಬಿರುಸುತನದ ಕಾರಣವಾಗಿ ಸೂರ್ಯನ ಮೂಲಕವೇ ಓಂ ಎನ್ನುವ ಶಬ್ಧಚೈತನ್ಯದ ಮೂಲಕ ಚಿಮ್ಮಿಕೊಳ್ಳುತ್ತದೆ ಎಂಬುದನ್ನು ಇತ್ತೀಚೆಗೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ವರದಿಯಲ್ಲಿ ತಿಳಿಸಿದೆ. ವಿಜಾnನದ ಸಂಶೋಧನೆಗಳು ಆಶ್ಚರ್ಯಕಾರಕ  ರೀತಿಯಲ್ಲಿ ಭಾರತೀಯರು ನಂಬಿರುವ ವಿಚಾರಗಳನ್ನೇ ವಿಶ್ವದ ವಿಚಾರವಾಗಿ ಹೌದು ಇದು ಸತ್ಯ ಎಂಬಂತೆ ಆಗಾಗ ಹೊರಹಾಕುತ್ತಿರುತ್ತದೆ. ಹೀಗಾಗಿ ಭಾರತೀಯರ ನಂಬಿಕೆ ಕಥೆಗಳ ಮೂಲಕವಾಗಲಿ, ಪುರಾಣಗಳ ಮೂಲಕವಾಗಲಿ ಒಂದು ಮಂತ್ರದೃಷ್ಟಾರ ವಿಶೇಷತೆಯಿಂದಾಗಿ ಗ್ರಹಿಸಿದ ವಿಚಾರಗಳು ಅಂದರೆ ನಮ್ಮ ಕಲ್ಪನೆಯಾ ತಪಸ್ಸು, ಧ್ಯಾನ ಇತ್ಯಾದಿಗಳು ಕೇವಲ ಮಂತ್ರಗಳ ಸಹಾಯದಿಂದಲೇ ಜಾnನವನ್ನು ಅತಿ ಪೂರ್ವದಲ್ಲೇ ಹೊರಹೊಮ್ಮಿಸಿದೆ.

Advertisement

ಅಲಕ್ಷಿ$¾ ಎಂಬ ಕಲ್ಪನೆಯನ್ನು ಕೂಡಾ ಕ್ರಿಯಾಶೀಲತೆಯಿಂದ ಇರದಿದ್ದರೆ ಲಕ್ಷಿ$¾ಯೇ ಅಲಕ್ಷಿ$¾ಯಾಗಿ ದರಿದ್ರವು ಆವರಿಸಿಕೊಳ್ಳುತ್ತದೆ ಎಂಬುದನ್ನೂ ವ್ಯಾಖ್ಯಾನಿಸಿದೆ ಹೊರತು, ಅಲಕ್ಷಿ$¾ ಎಂಬುದು ವಾಸ್ತವದಲ್ಲಿ ಇಲ್ಲ. ನಮ್ಮ ದುರಾದೃಷ್ಟಗಳೆಲ್ಲ ಅಲಕ್ಷಿ$¾ ಎಂಬ ಶಬ್ದದಿಂದ ಗುರುತಿಸಲ್ಪಟ್ಟಿದೆ. ಮೂಲಾ ನಕ್ಷತ್ರದ ಅಧಿಪತಿ ನಿಯತಿ ಎಂಬ ದೇವತೆ. ಆದರೆ ಅದು ಅಲಕ್ಷಿ$¾ಯಲ್ಲ. ದುರದೃಷ್ಟದ ನಕ್ಷತ್ರವಲ್ಲ. ಮೂಲಾ ಎಂದರೆ ಎಲ್ಲಕ್ಕಿಂತ ಮೊದಲು ಎಂದರ್ಥ. ಎಲ್ಲಕ್ಕಿಂತ ಮೊದಲಲ್ಲಿ ಕೆಲವು ಅಡಚಣೆಗಳು ಎಲ್ಲಾ ಕೆಲಸದಲ್ಲೂ ಇರುತ್ತದೆ. ಅದನ್ನು ತೊಡೆದು ಒಳಿತಿಗೆ ದಾರಿ ಮಾಡಿಕೊಳ್ಳುವ ಕ್ರಿಯಾಶೀಲತೆ ಜೀವನ ಶೈಲಿಯಲ್ಲಿ ಸಮ್ಮಿಳಿತವಾದಾಗ, ಹೆಣ್ಣು ಮೂಲಾ ನಕ್ಷತ್ರದಲ್ಲಿ ಜನಿಸಿದ ಮಾತ್ರಕ್ಕೆ ಕೆಟ್ಟದ್ದನ್ನು ಅತ್ತೆ ಮಾವಂದಿರ ಸಾವನ್ನು, ಗಂಡನ ಸಹೋದರರಿಗೆ ಕೇಡನ್ನು ತರುವುದಿಲ್ಲ. ಗುರು ಹಾಗೂ ಇತರ ಉತ್ತಮ ಯೋಗಕಾರಕ ಗ್ರಹಗಳು ಅಕಸ್ಮಾತಾಗಿ ದೋಷ ಒದಗಿದರೂ ತೊಡೆದು ಹಾಕು ಶಕ್ತಿ ಪಡೆದಿರುತ್ತಾರೆ.

ಸುನಾಮಿ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತದೆ ಎಂಬ ಎಚ್ಚರಿಕೆಯಂತೆ ಆದರೆ ಸುನಾಮಿಯನ್ನು ತಡೆಯುವ ಶಕ್ತಿಗಳು ಇನ್ನೆಷ್ಟೋ ಕಾರ್ಯಕಾರಣ ಸಂಬಂಧಗಳಿಂದ ನಿಷ್ಕ್ರಿಯವಾಗುತ್ತದೆ. ಮೂಲಾ ನಕ್ಷತ್ರದ ದೋಷಗಳು ಕೂಡಾ ಇದೇ ರೀತಿ ಅನ್ಯ ಅನೇಕ ಅಧಿಕ ಸಂಯೋಜನೆಗಳ ಫ‌ಲವಾಗಿ ಜಾತಕದಲ್ಲಿ ನಿವಾರಣೆಯಾಗಿರುತ್ತದೆ. ಸೂಕ್ತವಾದುದನ್ನು ಗ್ರಹಿಸಿ ಹೇಳುವ ಜ್ಯೋತಿಷ ದೋಷಗಳು ಪರಿಹಾರವಾಗಿದೆ ಎಂಬುದನ್ನು ಗುರುತಿಸಿ ಹೇಳಬಲ್ಲ. ಸೂಕ್ತ ಸರಳ ಪರಿಹಾರಗಳನ್ನು ಸೂಚಿಸಬಲ್ಲ. 

ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next