Advertisement
ದಾವೂದ್ ಕೂರ್ಗ್; ಖಂಡಿತ ಸಾಧ್ಯ. ಜನರಿಗೆ ಇದರ ಬಗ್ಗೆ ಪರಿಣಾಮಕಾರಿಯಾಗಿ ತಿಳುವಳಿಕೆ ನೀಡಿದ್ರೆ ಜನರ ಬೆಂಬಲದೊಂದಿಗೆ ಯಶಸ್ಸು ಸಾಧಿಸಬಹುದು. ಇದು ನಾವು ಮುಂದಿನ ಪೀಳಿಗೆಗೆ ನೀಡಲಿರುವ ಬಹುದೊಡ್ಡ ಕೊಡುಗೆಯೂ ಆಗಬಹುದು.
Related Articles
Advertisement
ಮೊಹಮ್ಮದ್ ಹನೀಫ್ : ಸಾಧ್ಯ ಇದೆ ಫ್ಯಾಕ್ಟರಿ ಮಾಲೀಕರು ಈಗ ಇರುವ ಪ್ಲಾಸ್ಟಿಕ್ ದರವನ್ನು ಕೆಜಿ ಒಂದಕ್ಕೆ 50 ರೂಪಾಯಿ ಹೆಚ್ಚಿಸಬೇಕು ಈ ಹೆಚ್ಚುವರಿ 50 ಯಲ್ಲಿ ಕೆಜಿ ಒಂದರಂತೆ ಹಳೆ ಪ್ಲಾಸ್ಟಿಕ್ ವಾಪಸು ಜನರಿಂದ ಪಡೆಯಬೇಕು ಆಗ ನಮ್ಮ ಸುತ್ತು ಮುತ್ತ ಇರುವ ಎಲ್ಲಾ ಹಳೆ ಪ್ಲಾಸ್ಟಿಕ್ ಜನರು ಹೆಕ್ಕುತ್ತಾರೆ ಫ್ಯಾಕ್ಟರಿಯವರು ಹಳೆ ಪ್ಲಾಸ್ಟಿಕ್ ಆಧುನಿಕ ರೀತಿಯಲ್ಲಿ ಸಂಸ್ಕರಣೆ ಮಾಡಬೇಕು ಸರಕಾರ ಇದಕ್ಕೆ ಸಹಾಯ ಮಾಡಬೇಕು.
ಯಶ್ವಥ್ ಕುಮಾರ್ : ನಮ್ಮ ದೇಶದಲ್ಲಿ ಜನರಿಗೆ ಬುದ್ಧಿ ಹೇಳಿ ಕೈ ಜೋಡಿಸಿ ಜನರು ಬೆಂಬಲ ಕೊಟ್ಟರೆ 100% ಖಂಡಿತ ಸಾದ್ಯ ಆಗುತ್ತದೆ. ಈಗಲೆ ಪ್ಲಾಸ್ಟಿಕ್ ಮುಕ್ತ ಮಾಡಿದರೆ ಮುಂದಿನ ಪೀಳಿಗೆಗೆ ಒಳ್ಳೆಯದಾಗುತ್ತದೆ.
ನಾಗು ವಿ ಬಿ: ಪ್ಲಾಸ್ಟಿಕ್ ನಿಷೇಧ, ಪ್ಲಾಸ್ಟಿಕ್ ನಿಷೇಧ ಅಂತ ಜನಗಳಿಗೆ ಹೇಳೋ ಬದಲು ಆ ಪ್ಲಾಸ್ಟಿಕ್ ಚೀಲ ತಯಾರಿಸುವ ಕಂಪನಿಗೆ ಬೀಗ ಹಾಕಿದ್ರೆ ಆಯಿತು. ಮೈನ್ ಸ್ವಿಚ್ ಬಿಟ್ಟು ಇಲ್ಲಿ ಬರೀ ಸಬ್ ಸ್ವಿಚ್ ಆನ್ ಮಾಡಿದ್ರೆ ಆಗುತ್ತಾ ಕೆಲ್ಸ. ಎನ್ ಸಿಸ್ಟಮ್ ರೀ ನಮ್ ಗವರ್ನಮೆಂಟ್ ದ್ದು.
ಸೈಮನ್ ಫೆರ್ನಾಂಡಿಸ್: ಯಾಕೆ ಸಾಧ್ಯವಿಲ್ಲ? ಸಾಧ್ಯವಾಗಿಸಬೇಕು. ಅದರಿಂದಾಗುವ ಅನಾಹುತಗಳನ್ನು ಕಂಡ ಮೇಲೂ ಆಗುವುದಿಲ್ಲ ಎಂದು ಹೇಳುವುದು ಎಷ್ಟು ಸಮಂಜಸ..? ಸಾಧ್ಯವಾಗಿಸುವ ಮನಸ್ಥಿತಿ ನಮ್ಮದಾಗಬೇಕು. ಅಷ್ಟೇ.