Advertisement

Modi-Shah ಮುಂದೆ ರಾಹುಲ್ ಗಾಂಧಿ ಹೋಲಿಕೆ ಸಾಧ್ಯವೇ? :ಯಡಿಯೂರಪ್ಪ

04:58 PM Apr 27, 2023 | Team Udayavani |

ಬೆಳಗಾವಿ: ”ದೇಶದಲ್ಲಿ ದಯನೀಯ ಸೋಲು ಅನುಭವಿಸಿ ಕಾಂಗ್ರೆಸ್ ಪಕ್ಷ ಬೀದಿಪಾಲಾಗಿದೆ.ಮೋದಿ-ಶಾ ಮುಂದೆ ರಾಹುಲ್ ಗಾಂಧಿ ಹೋಲಿಕೆ ಸಾಧ್ಯವೇ?” ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಗುರುವಾರ ಕಿಡಿ ಕಾರಿದ್ದಾರೆ.

Advertisement

ಧರ್ಮನಾಥ ಭವನದಲ್ಲಿ ನಡೆದ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಅವರು, ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ್ ಪರ ಮತಯಾಚನೆ ಮಾಡಿದರು.

”ಪ್ರಧಾನಿ ಮೋದಿಯವರು ದೇಶದ ಪ್ರಚಲಿತ ರಾಜಕೀಯದ ಬಗ್ಗೆ ಮಾತಾಡಿದ್ದಾರೆ, ಕರ್ನಾಟಕ ರಾಜ್ಯವನ್ನು ಮಾದರಿ ಮಾಡುವ ಸಾಕಷ್ಟು ಸಲಹೆ ಕೊಟ್ಟಿದ್ದಾರೆ . ಮೋದಿ ಮತ್ತು ಅಮಿತ್ ಶಾ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ ಸಂಕಲ್ಪ ತೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು,‌ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ 400 ಸೀಟ್ ಗಳ ಪೈಕಿ 4 ಮಾತ್ರ ಕಾಂಗ್ರೆಸ್ ಗೆದ್ದಿದೆ, ರಾಜ್ಯದಲ್ಲಿ130 ರಿಂದ 135 ಸೀಟು ಗೆದ್ದು ಸರ್ಕಾರ ರಚನೆ ಮಾಡುತ್ತೇವೆ ಎಂದರು.

ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ನಾವು ಅಧಿಕಾರಕ್ಕೆ ಬರುತ್ತೇವೆ. ಒಂದು ಕಾಲದಲ್ಲಿ ಹಣ ಹೆಂಡ ತೋಳ್ಬಲದ ಮೇಲೆ ರಾಜಕೀಯ ನಡೆಯುತ್ತಿತ್ತು, ಆದರೆ ಈಗ ಜನ ಜಾಗೃತರಾಗಿದ್ದಾರೆ ಎಂದರು.

ದೇಶ ವಿದೇಶಗಳಿಗೆ ಹೋಗಿ ಬಂದ ಮೇಲೂ ಸಹ ವಿಶ್ರಾಂತಿ ಪಡೆಯದ ನಾಯಕ ನಮ್ಮ ಮೋದಿ,ಅಂತಹ ನಾಯಕ ನಮ್ಮೊಟ್ಟಿಗಿದ್ದಾರೆ. ದೇಶದ ಪ್ರಗತಿ ರಾಜ್ಯದ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸುಂತೆ ಕರೆ ನೀಡಿದರು.

Advertisement

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಡಾ. ರವಿ ಪಾಟೀಲ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ರವಿ 15 ರಿಂದ 20 ಸಾವಿರ ಮತಗಳ ಅಂತರದಿಂದ ರವಿ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ, ಅವರನ್ನು ಗೆಲ್ಲಿಸುವ ಜವಾಬ್ದಾರಿ ಅನಿಲ್ ಬೆನಕೆ ಮೇಲಿದೆ,ನಿಮ್ಮಲ್ಲಿ ಒಂದೇ ವಿನಂತಿ ಇನ್ನು ಕೇವಲ 13 ದಿನ ಚುನಾವಣೆಗೆ ಇದೆ, ನಮ್ಮ ಅಭ್ಯರ್ಥಿಯ ಆಯ್ಕೆಗೆ ಸಹಕರಿಸಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next