Advertisement

ಜನ್ಮಸ್ಥಾನಕ್ಕೆ ಖಟ್ಲೆ ಹೂಡಲು ನ್ಯಾಯಿಕ ಮಾನ್ಯತೆ ಇದೆಯೇ?

01:00 AM Aug 09, 2019 | sudhir |

ಹೊಸದಿಲ್ಲಿ: “ಭೂವಿವಾದದಲ್ಲಿ ಜನ್ಮಸ್ಥಾನವು ಕಾನೂನು ಖಟ್ಲೆ ಹೂಡುವುದು ಹೇಗೆ. ಸ್ಥಳ ಎನ್ನುವುದು ನ್ಯಾಯಿಕ ವ್ಯಕ್ತಿಯಂತೆ ಕಾನೂನು ಹೋರಾಟ ನಡೆಸಲು ಸಾಧ್ಯವಾಗುತ್ತದೆಯೇ?

Advertisement

ಅಯೋಧ್ಯೆಯ ಸ್ಥಳ ಮಾಲಕತ್ವ ತಗಾದೆ ಬಗ್ಗೆ ಮೂರನೇ ದಿನ ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ರಾಮಲಲ್ಲಾ ವಿರಾಜಮಾನ್‌ ಪರ ನ್ಯಾಯವಾದಿ ಕೆ. ಪರಾಶರನ್‌ ಅವರನ್ನು ಹೀಗೆಂದು ಪ್ರಶ್ನಿಸಿದೆ.

ಅದಕ್ಕೆ ಉತ್ತರಿಸಿದ ಕೆ. ಪರಾಶರನ್‌ ಹಿಂದೂ ಧರ್ಮದಲ್ಲಿ, ಪೂಜಿಸುವ ಪವಿತ್ರ ಸ್ಥಳ ಎಂದು ಪರಿಗಣಿಸಲು ಅಲ್ಲಿ ಮೂರ್ತಿಯೇ ಇರಬೇಕೆಂದಿಲ್ಲ. ನದಿಗಳು, ಸೂರ್ಯನನ್ನೂ ಭಕ್ತಿಯಿಂದ ಪೂಜಿಸಲಾಗುತ್ತದೆ. ಹೀಗಾಗಿ ಜನ್ಮಸ್ಥಳವನ್ನೂ ನ್ಯಾಯಿಕ ವ್ಯಕ್ತಿಯನ್ನಾಗಿ ಪರಿಗಣಿಸಬಹುದು’ ಎಂದು ವಿವರಿಸಿದರು.

ಅಯೋಧ್ಯೆ ಜಮೀನು ಮಾಲಕತ್ವದಲ್ಲಿ ರಾಮಲಲ್ಲಾ ವಿರಾಜಮಾನ್‌ ಜನ್ಮಸ್ಥಾನವನ್ನೂ ಅರ್ಜಿದಾರರನ್ನಾಗಿ ಪರಿಗಣಿಸಿ ಅರ್ಜಿಸಲ್ಲಿಸಿದೆ.

ಪರಾಶರನ್‌ವಾದ ಆಲಿಸಿದ ನ್ಯಾಯಪೀಠ, ಪವಿತ್ರ ಗಂಗಾನದಿ ಕೂಡ ನ್ಯಾಯಿಕ ವ್ಯಕ್ತಿಯಾಗಿ ಖಟ್ಲೆ ಹೂಡಬಹುದು ಎಂಬ ಉತ್ತರಾಖಂಡ ಹೈಕೋರ್ಟ್‌ ನೀಡಿದ ತೀರ್ಪನ್ನು ಉಲ್ಲೇಖೀಸಿತು. ಬಳಿಕ ಪರಾಶರನ್‌ಗೆ ವಾದ ಮುಂದುವರಿಸಲು ಸೂಚನೆ ನೀಡಿತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಸಿವಿಲ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆದು ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಜನ್ಮಸ್ಥಾನವನ್ನು ಅರ್ಜಿದಾರರು ಎಂದು ಅಂಗೀಕರಿ ಸಿರಲಿಲ್ಲ ಎಂದು ಪರಾಶರನ್‌ ಆರೋಪಿಸಿದರು.

Advertisement

ಸ್ವರ್ಗಕ್ಕಿಂತ ಹೆಚ್ಚು: ಜನ್ಮಸ್ಥಾನದ ಮಹತ್ವ ವಿವರಿಸುವ ನಿಟ್ಟಿನಲ್ಲಿ “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ (ತಾಯಿನಾಡು ಸ್ವರ್ಗಕ್ಕಿಂತ ಶ್ರೇಷ್ಠ) ಎಂಬ ಶ್ಲೋಕವನ್ನು ಪರಾಶರನ್‌ ಉಲ್ಲೇಖೀಸಿದರು. ಮುಸ್ಲಿಂ ಸಂಘಟನೆಗಳ ಪರ ವಾದಿಸಿದ ರಾಜೀವ್‌ ಧವನ್‌. ರಾಮ ಲಲ್ಲಾ ವಿರಾಜಮಾನ್‌ ಮತ್ತು ನಿರ್ಮೋಹಿ ಅಖಾಡಗಳೇ ಪರಸ್ಪರ ಸಂಘರ್ಷದಲ್ಲಿ ತೊಡಗಿವೆ ಎಂದರು.

ಹೀಗಾಗಿ, ಮುಸ್ಲಿಂ ಸಂಘಟನೆಗಳ ಪರವಾಗಿ ಮಂಡಿಸಬೇಕಾದ ವಾದ ವನ್ನು ಮುಂದೂಡುವುದು ಉತ್ತಮ ಎಂದು ಸಲಹೆ ನೀಡಿದರು. ಈ ನಡುವೆ, ಸಂಪ್ರದಾಯ ಮುರಿದು ಶುಕ್ರವಾರವೂ ಈ ಪ್ರಕರಣದ ವಿಚಾರಣೆ ಮುಂದುವರಿಯಲಿದೆ ಎಂದು ಕೋರ್ಟ್‌ ಹೇಳಿದೆ. ಸಾಮಾನ್ಯವಾಗಿ ಶುಕ್ರವಾರ ಹೊಸ ಕೇಸುಗಳ ವಿಚಾರಣೆ ಮಾತ್ರ ನಡೆಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next