Advertisement
ಜೀರ್ಣ ಕ್ರಿಯೆಗೆ ಮಾತ್ರವಲ್ಲದೇ ಮೊಸರಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ಇದು ಮೂಳೆ ಹಾಗೂ ಹಲ್ಲುಗಳಿಗೆ ಅಗತ್ಯವಾಗಿ ಬೇಕು. ಮೊಸರು ಒತ್ತಡ ಕಡಿಮೆ ಮಾಡುವುದಕ್ಕೂ ಸಹಾಯ ಮಾಡುತ್ತದೆ.
Related Articles
Advertisement
ಮೊಸರು ಲೋಳೆಯ ರಚನೆಗೆ ಕಾರಣವಾಗುತ್ತದೆ. ಮೊಸರು ಸಿಹಿ ಮತ್ತು ಹುಳಿ ಎರಡನ್ನೂ ಹೊಂದಿರುವುದರಿಂದ ರಾತ್ರಿ ಸಮಯ ಇದನ್ನು ತಿನ್ನುವುದರಿಂದ ಮೂಗಿನಲ್ಲಿ ಲೋಳೆಯ ರಚನೆಗೆ ಕಾರಣವಾಗುತ್ತದೆ.
ಸಂಧಿವಾತದಿಂದ ಬಳಲುತ್ತಿರುವವರು ಮೊಸರನ್ನು ಪ್ರತಿನಿತ್ಯ ಸೇವಿಸಬಾರದು. ಮೊಸರು ಒಂದು ಹುಳಿ ಆಹಾರವಾಗಿರುವುದರಿಂದ ಹುಳಿ ಆಹಾರಗಳು ಕೀಲು ನೋವಿನ ಹೆಚ್ಚಳಕ್ಕೆ ಕಾರಣವಾಗಬಹುದು. ದುರ್ಬಲ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವವರು ರಾತ್ರಿಯಲ್ಲಿ ಮೊಸರು ತಿನ್ನದಿರುವುದು ಒಳಿತು.
ಕೆಲವರಿಗೆ ಮೊಸರು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಯಾಗುತ್ತದೆ. ಮಲಬದ್ಧತೆ ಕೂಡಾ ಉಂಟಾಗಬಹುದು. ಮಿತಿಮೀರಿದ ಮೊಸರು ಸೇವನೆಯಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ರಾತ್ರಿ ವೇಳೆ ಮೊಸರು ಸೇವನೆ ಬೇಡ ಎನ್ನಬಹುದು.
ಆದರೆ ರಾತ್ರಿ ವೇಳೆ ಮಜ್ಜಿಗೆ ಸೇವಿಸಬಹುದು. ತಿಳಿ ಮಜ್ಜಿಗೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಹಿಂಗು, ಜೀರಿಗೆ ಸೇರಿಸಿ ಕುಡಿದರೆ ರಾತ್ರಿ ಸೇವಿಸಿದ ಆಹಾರ ಬೇಗನೆ ಜೀರ್ಣವಾಗುತ್ತದೆ.
ರಾತ್ರ ಸಮಯ ಮೊಸರಿನ ಜೀರ್ಣಕ್ರಿಯೆಯು ಹೆಚ್ಚು ಹೊತ್ತು ತೆಗೆದುಕೊಳ್ಳಲಿದ್ದು, ಜೀರ್ಣ ಕ್ರಿಯೆಯು ಇತರೆ ಆಹಾರಗಳ ಜೀರ್ಣ ಕ್ರಿಯೆಗಿಂತ ಸ್ವಲ್ಪ ಕಷ್ಟ. ಇದರಿಂದ ಬೊಜ್ಜು, ಕಫ, ಪಿತ್ತ ಹೆಚ್ಚಾಗಿ ಜೀರ್ಣದ ಸಾಮರ್ಥ್ಯವನ್ನೂ ಸಹ ಹೆಚ್ಚಿಸುತ್ತದೆ. ನಿಮಗೆ ಹೊಟ್ಟೆಯ ಊತ ಅಥವಾ ಹೊಟ್ಟೆ ಉರಿ ಬಂದ ಸಂದರ್ಭಗಳಲ್ಲಿ ಮೊಸರನ್ನು ಸೇವಿಸಿದರೆ ಸಮಸ್ಯೆ ಇನ್ನೂ ಬಿಗಡಾಯಿಸಲಿದೆ. ಈ ಗುಣಲಕ್ಷಣವು ಹುಳಿಯಾದ ಮೊಸರಿನಲ್ಲಿ ಅಧಿಕವಿರುತ್ತದೆ.
ಮೊಸರನ್ನು ಅಧಿಕವಾಗಿ ಸೇವಿಸದೆ ಪ್ರತಿದಿನವು ಒಂದು ಟೇಬಲ್ ಚಮಚದಷ್ಟು ಮಾತ್ರ ಸೇವಿಸುವುದು ಉತ್ತಮ. ಮೊಸರಿನಲ್ಲಿ ದೇಹಕ್ಕೆ ಮಾರಕವಾದ ಯಾವುದೇ ಅಂಶವಿಲ್ಲ. ಇದರಲ್ಲಿರುವ ಸಕಲ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ.
ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಈ ಕಣಗಳು ರೋಗಕಾರಕ ಕಣಗಳನ್ನು ಸದೆಬಡಿದು ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ಅಧ್ಯಾಯನದ ಪ್ರಕಾರ ಪ್ರತಿದಿನ ಒಂದು ಟೇಬಲ್ ಚಮಚದಷ್ಟು ಮೊಸರನ್ನು ಸೇವಿಸುತ್ತಿದ್ದಲ್ಲಿ, ಅದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ. ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ದೇಹದಲ್ಲಿರುವ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳ ಮೇಲೆ ಹೋರಾಡುತ್ತ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಯಾವುದೇ ಕಾರಣಕ್ಕೂ ಹುಳಿ ಮೊಸರನ್ನು ಬಿಸಿ ಮಾಡಿ ಸೇವಿಸಬಾರದು. ಇದನ್ನು ರಾತ್ರಿ ಸಮಯದಲ್ಲಿ, ವಸಂತ ಋತುವಿನಲ್ಲಿ ಮತ್ತು ಬೇಸಿಗೆಯಲ್ಲಿ ಸೇವಿಸುವುದು ನಿಷಿದ್ಧ. ಆದರೆ ಹುಳಿ ಮೊಸರಿಗೆ ಹೆಸರಿನ ಕಾಳಿನ ಸೂಪ್, ಜೇನು, ತುಪ್ಪ, ಸಕ್ಕರೆ ಮತ್ತು ಆಮ್ಲ ಬೆರೆಸಿಕೊಂಡು ಸೇವಿಸಿದರೆ ಉರಿಮೂತ್ರ ನಿವಾರಣೆ ಮತ್ತು ಅಜೀರ್ಣದ ಕಡಿಮೆಯಾಗುತ್ತದೆ.
-ಕಾವ್ಯಶ್ರೀ