ಲಸಿಕೆ ವಿತರಣೆ ಜಾಲ ಹೇಗಿರುತ್ತದೆ? ಇಲ್ಲಿದೆ ಮಾಹಿತಿ…
Advertisement
30 ಕೋಟಿಗೆ ಜನರಿಗೆ 60 ಕೋಟಿ ಡೋಸ್?ಆಗಸ್ಟ್ 2021ರ ವೇಳೆಗೆ ನಿರ್ದಿಷ್ಟ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಆರೋಗ್ಯ ಇಲಾಖೆಗೆ ಇದೆ. ಲಸಿಕೆಯೇನಾದರೂ ಎರಡು ಡೋಸ್‌ಗಳಲ್ಲಿ ಬಂದರೆ, 60 ಕೋಟಿ ಡೋಸ್‌ಗಳು ಅಷ್ಟರಲ್ಲಿ ಸಿದ್ಧವಿರಬೇಕಾಗುತ್ತದೆ. ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ಭಾರತದ ಹಲವು ಲಸಿಕೆ ಉತ್ಪಾದನ ಸಂಸ್ಥೆಗಳಿಗೆ ಈ ಮಟ್ಟದ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆಯಾದರೂ ಅಷ್ಟನ್ನೆಲ್ಲ ಸಂರಕ್ಷಿಸಿಡುವ ಶೀತಲ ಘಟಕಗಳು ಹಾಗೂ ವ್ಯಾನ್‌ಗಳ ಅಗತ್ಯವಂತೂ ಇದ್ದೇ ಇರುತ್ತದೆ. ಇದರ ಜತೆಗೆ ಅನ್ಯ ರೋಗಗಳ ಲಸಿಕೆಯಲ್ಲೂ ಅಡಚಣೆಯಾಗದಂತೆ ನೋಡಿಕೊಳ್ಳುವ ಸವಾಲೂ ಇರುತ್ತದೆ.
Related Articles
ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ಕೋಲ್ಡ್ ಚೈನ್ ಘಟಕಗಳು ಇವೆಯಾದರೂ, ಇವುಗಳ ವಿತರಣೆ ಸರಿಯಾಗಿಲ್ಲ. ಹೀಗಾಗಿ ಕೇಂದ್ರ ಸರಕಾರವು ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಪಶ್ಚಿಮ ಬಂಗಾಲದಂಥ. ಜನಸಂಖ್ಯೆಗೆ ತಕ್ಕಂತೆ ಕೋಲ್ಡ್ ಚೈನ್ ಘಟಕಗಳ ಅಭಾವ ಎದುರಿಸುತ್ತಿರುವ ರಾಜ್ಯಗಳಿಗೆ ಹೆಚ್ಚುವರಿ ವಾಕಿನ್ ಕೂಲರ್‌ಗಳು, ವಾಕಿನ್ ಫ್ರೀಜರ್‌ಗಳು ಹಾಗೂ ಶೀತಲೀಕರಣ ವ್ಯಾನ್‌ಗಳನ್ನು ಪೂರೈಸಲು ಸಿದ್ಧತೆ ನಡೆಸಿದೆ. ಕರ್ನಾಟಕದ ವಿಚಾರಕ್ಕೇ ಬಂದರೆ, ರಾಜ್ಯ ಕೋವಿಡ್ ಕಾರ್ಯಪಡೆ ಸಭೆ ಸೇರಿ ಈ ಕುರಿತು ಚರ್ಚೆ ನಡೆಸಿದ್ದು, ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಿದ್ದು, ಲಸಿಕೆ ವಿತರಣೆ ಮಾಡಲು 10,008 ವ್ಯಾಕ್ಸಿನೇಟರ್ ಸಿಬಂದಿಯನ್ನು ಗುರುತಿಸಲಾಗಿದೆ. ಇದಷ್ಟೇ ಅಲ್ಲದೇ, ಕೇಂದ್ರ ಸರಕಾರವು ರಾಜ್ಯಕ್ಕೆ ಹೆಚ್ಚುವರಿ ವಾಕ್ ಇನ್ ಕೂಲರ್‌ಗಳು ಮತ್ತು ಫ್ರೀಜರ್‌ಗಳನ್ನು ಕಳುಹಿಸುವ ನಿರ್ಧಾರಕ್ಕೆ ಬಂದಿದೆ.
Advertisement
ಇ-ವಿನ್ ಜಾಲದ ಬಳಕೆಕಳೆದ ಕೆಲವು ವರ್ಷಗಳಿಂದ ಭಾರತದ ಲಸಿಕೆ ನಿರ್ವಹಣ ವ್ಯವಸ್ಥೆಯು ತ್ವರಿತ ಪೂರೈಕೆಗಾಗಿ ಎಲಕ್ಟ್ರಾನಿಕ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್‌ವರ್ಕ್
(ಇ-ವಿನ್) ಎನ್ನುವ ಜಾಲವನ್ನು ಸೃಷ್ಟಿಸಿದೆ. ಆಗಸ್ಟ್ 2020ರ ವೇಳೆಗೆ, ಇ-ವಿನ್ ವ್ಯವಸ್ಥೆಯನ್ನು 32 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, ಈ ವ್ಯವಸ್ಥೆಯು ತ್ವರಿತ ಲಸಿಕೆ ವಿತರಣೆಯಲ್ಲಿ ಬಹಳ ಅನುಕೂಲಕ್ಕೆ ಬರಲಿದೆ. ಖಾಸಗಿ ಕಂಪೆನಿಗಳ ಹೂಡಿಕೆ
2,100 ಕೋಟಿ ರೂ.: ಸೀರಂ ಇನ್‌ಸ್ಟಿ ಟ್ಯೂಟ್ ಆಫ್ ಇಂಡಿಯಾ. ಐದು ಲಸಿಕೆ ಸಂಶೋಧನ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಯೋಗ ನಡೆಸಿದೆ.
500 ಕೋಟಿ ರೂ.: ಜೈಡಸ್ ಕೆಡಿಲಾ.
2 ಲಸಿಕೆಗಳ ಮೇಲೆ ಸಂಶೋಧನೆ ನಡೆಸಿದೆ.
300-400 ಕೋಟಿ ರೂ.: ಭಾರತ್ ಬಯೋಟೆಕ್. 3 ಲಸಿಕೆಗಳ ಪ್ರಯೋಗ, ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಪ್ರಸಕ್ತ 29 ಸಾವಿರ ಕೋಲ್ಡ್ ಚೈನ್ ಪಾಯಿಂಟ್‌ಗಳು, 76000 ಕೋಲ್ಡ್ ಚೈನ್ ಉಪಕರಣಗಳು, 700 ಶೀತಲ ವ್ಯಾನ್‌ಗಳು, 55,000 ಕೋಲ್ಡ್ ಚೈನ್ ನಿರ್ವಾಹಕರು ಹಾಗೂ ಲಸಿಕೆ ಸಾಗಣೆ ಜಾಲದ ಭಾಗವಾಗಿ 25 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಹೊಂದಿವೆ.