Advertisement

ಮತಾಂತರ ಧರ್ಮ ಒಡೆಯುವ ಕೆಲಸವೇ?

12:58 AM May 26, 2019 | Team Udayavani |

ಬೆಂಗಳೂರು: ಬುದ್ಧ ಹಾಗೂ ಮಹಾವೀರರು ಕೂಡ ಮೊದಲು ಹಿಂದೂ ಧರ್ಮದಲ್ಲಿದ್ದು, ಆನಂತರ ಪ್ರತ್ಯೇಕ ಧರ್ಮ ರಚಿಸಿಕೊಂಡವರು. ಅಂದ ಮಾತ್ರಕ್ಕೆ ಅದು ಧರ್ಮ ಒಡೆಯುವ ಕೆಲಸವೇ? ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಪ್ರಶ್ನಿಸಿದ್ದಾರೆ.

Advertisement

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ನಡೆದ “ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ವೀರಶೈವ-ಲಿಂಗಾಯತ ಧರ್ಮದ ಪ್ರತ್ಯೇಕತೆಗೆ ನ್ಯಾಯಾಂಗ ಸಹಮತ ನೀಡಿತ್ತು ಎಂಬ ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಕುರಿತು ಮಾತನಾಡಿ ಅವರು, ಶತಮಾನಗಳಿಂದ ಹಲವು ಹಿಂದೂಗಳು ಮುಸಲ್ಮಾನರು, ಪಾರ್ಸಿ, ಕ್ರೈಸ್ತ ಧರ್ಮಗಳಿಗೆ ಮತಾಂತರಗೊಂಡಿದ್ದಾರೆ. ಸಿಖ್ಖರೂ ಕೂಡಾ ಹಿಂದೂಗಳೇ ಆಗಿದ್ದರು ಎಂದು ಹೇಳಿದರು.

ಈ ಹಿಂದೆ ಮತಾಂತರವಾಗುವಾಗ ಏಕೆ ಧರ್ಮ ಒಡೆದ ಮಾತು ಕೇಳಿ ಬರಲಿಲ್ಲ. ಈಗ ವೀರಶೈವ – ಲಿಂಗಾಯತ ಪ್ರತ್ಯೇಕತೆ ಕುರಿತು ಮಾತ್ರ ಪ್ರಶ್ನಿಸುತ್ತಾರೆ. ಪ್ರತ್ಯೇಕ ಧರ್ಮ ಕುರಿತು ಸರ್ಕಾರ ನೀಡಿದ ವರದಿಯನ್ನು ಯಾರೂ ಓದಿಯೇ ಇಲ್ಲ. ಇದಕ್ಕೆ ಕಾರಣ ನ್ಯಾಯಾಲಯ ನೀಡಿದ ವರದಿ ಸರ್ಕಾರದ ಕೈ ಸೇರಿದ ಕೂಡಲೇ ಅದರ ನಕಲು ಯಾರಿಗೂ ಸಿಗಲಿಲ್ಲ. ಹೀಗಾಗಿ, ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧರಿಸಿ ಮಾತನಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.

ವರದಿಯನ್ನು ರಾಜಕಾರಣ ಬಿಟ್ಟು ವಸ್ತು ನಿಷ್ಠತೆಯಿಂದ ನೋಡಬೇಕು. ಯಾರು ಬಸವಣ್ಣನವರನ್ನು ಗುರು ಎಂದು ಒಪ್ಪಿ ಅವರ ವಚನಗಳನ್ನು ಅನುಸರಿಸುತ್ತಾರೋ ಅವರೆಲ್ಲರೂ ಬಸವಾದಿ ಶರಣರೇ ಆಗಿದ್ದಾರೆ. ಲಿಂಗಾಯಿತರು ಧಾರ್ಮಿಕ ಅಲ್ಪಸಂಖ್ಯಾತರು ಎಂದು ವರದಿ ನೀಡಲಾಗಿದೆ.

ಅನ್ಯ ಧರ್ಮವನ್ನು ಗೌರವಿಸುವುದರೊಂದಿಗೆ ಸಹನೆ, ತಾಳ್ಮೆಯಿಂದ ಜೀವಿಸಿದರೆ ಬಹುತ್ವದ ರಕ್ಷಣೆಯಾಗಲಿದೆ. ಯಾವುದೇ ರಾಜಕೀಯ ಪಕ್ಷಗಳು ಅ ಕಾರಕ್ಕೆ ಬಂದರೂ ಸಂವಿಧಾನದ ಪ್ರಕಾರ ನೆಡೆದುಕೊಳ್ಳುತ್ತಿಲ್ಲ. ಹೀಗಾಗಿ, ಜನರ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next