ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಪರಿಣಾಮಕಾರಿಗಾಗಿ ಅನುಷ್ಠಾನ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದ್ದು, ಈ ಸಂಬಂಧ ಪ್ರಸಕ್ತ ಸಾಲಿನಿಂದಲೇ ಕೆಲವೊಂದು ಪ್ರಾಯೋಗಿಕ ಕಾರ್ಯಕ್ರಮ ರೂಪಿಸಿದೆ. ಈ ಹಿನ್ನಲೆಯಲ್ಲಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಕಡ್ಡಾಯ ಪದ್ಧತಿ ಪರಿಣಾಮಕಾರಿಯಾಗಲಿದೆಯೇ ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ.
ನವಿ ದಾಸ್: ಗಣಕಯಂತ್ರ ಶಿಕ್ಷಣ ಹಳ್ಳಿಯ ಮಕ್ಕಳಿಗೆ ಉತ್ತಮವಾದದ್ದು, ಇವತ್ತಿನ ದಿನಗಳಲ್ಲಿ ಒಂದು ಕೆಲಸವನ್ನು ಪಡೆಯಬೇಕು ಎಂದಾದರೆ ಅದಕ್ಕೆ ಗಣಕಯಂತ್ರದ ಜ್ಞಾನ ಅವಶ್ಯಕತೆ ಇದೆ. ಹಾಗಾಗಿ ಇದು ಜಾರಿಯಾದರೆ ಒಳ್ಳೆಯದೇ. ಆದರೆ ಅದು ಪ್ರಾಥಮಿಕ ಶಾಲಾ ಹಂತದಲ್ಲಿ ಜಾರಿಯಾಗಬೇಕು.
ಪುರುಷೋತ್ತಮ್ ಸಿ.ಪಿ: ಒಳ್ಳೆಯ ನಿರ್ಣಯ. ಯಾಕೆಂದರೆ 2004 ರಲ್ಲಿ ನಾನು ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಈ ತರಭೇತಿ ಇತ್ತು. ಈಗ ವೃತ್ತಿ ಜೀವನದಲ್ಲಿ ತುಂಬಾ ಉಪಯೋಗವಾಗಿದೆ.
ಮಹಾದೇವ್: ಕಂಪ್ಯೂಟರ್ ಶಿಕ್ಷಣ ಪ್ರಾಥಮಿಕ ಹಂತದಿಂದಲೇ ಅಗತ್ಯವಾಗಿ ಬೇಕಾಗಿದೆ. ಪ್ರೌಢಶಾಲಾ ಹಂತದಲ್ಲಂತೂ ತುಂಬಾ ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದ ತುರ್ತು ಅಗತ್ಯತೆ ಇದೆ.
ದಯಾನಂದ: ಖಂಡಿತಾ..! ಮುಂದಿನ ಪೀಳಿಗೆಗೆ ಕಂಪ್ಯೂಟರ್ ಸಾಕ್ಷರತೆ ಅಭಿಯಾನ ಅವಶ್ಯಕತೆಯಿದೆ. ಫ್ರೌಢಶಾಲಾ ಮಟ್ಟದಲ್ಲಿ ಕಂಪ್ಯೂಟರ್ ಶಿಕ್ಷಣ ದೊರೆತಾಗ ಮುಂದಿನ ಡಿಜಿಟಲ್ ಯುಗಕ್ಕೆ ಬಹಳ ಸಹಕಾರಿ ಯಾಗಬಲ್ಲುದು .
ಬದ್ರಿನಾಥ್ ಶೆಣೈ: ಅಗತ್ಯವಾಗಿ..! ತಂತ್ರಜ್ಞಾನದ ಯುಗದಲ್ಲಿ ಕಂಪ್ಯೂಟರ್ ನ ವಿವಿಧ ಸಾಫ್ಟ್‌ವೇರ್ ಗಳನ್ನು ಬಳಸುವ ಜ್ಞಾನ, ಕೌಶಲ್ಯ, ಪರಿಣತಿ ಇದ್ದವರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಉನ್ನತ ಪದವಿಗಳು ಇದ್ದರೆ ಮಾತ್ರ ಸಾಲದು ವಿವಿಧ ಕೌಶಲ್ಯ ಜ್ಞಾನದ ಅರಿವು ಇರಬೇಕು.