Advertisement

ಉಗ್ರರ ನೆಲೆಯಾಯಿತೇ ಚಾಮರಾಜನಗರ?

10:45 PM Jan 12, 2020 | Lakshmi GovindaRaj |

ಚಾಮರಾಜನಗರ: ಈ ಜಿಲ್ಲೆಯಲ್ಲಿ ಯಾವ ಘಳಿಗೆಯಲ್ಲಿ ಬೇಕಾದರೂ ನಕ್ಸಲ್‌ ಚಟುವಟಿಕೆ ಅಥವಾ ಉಗ್ರರ ಚಟುವಟಿಕೆಗಳು ನಡೆಯಬಹುದೆಂಬ ಆತಂಕ ಇತ್ತು. ಅದೀಗ ನಿಜವಾಗಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಂತೆ ಇರುವ ಚಾಮರಾಜನಗರ ಕರ್ನಾಟಕದ ದಕ್ಷಿಣ ಗಡಿ ಜಿಲ್ಲೆ. ದಟ್ಟವಾದ ಅರಣ್ಯದಲ್ಲಿ ಉಗ್ರರು, ನಕ್ಸಲಿಗರು ಇರುವ ಮಾಹಿತಿ ಪೊಲೀಸ್‌ ಗುಪ್ತದಳಕ್ಕೆ ಸಿಕ್ಕಿದ್ದು, ಹೀಗಾಗಿ ನೆರೆ ರಾಜ್ಯದ ಪೊಲೀಸರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ್ದಾರೆ.

Advertisement

ಕಳೆದ ಅಕ್ಟೋಬರ್‌ ತಿಂಗಳಲ್ಲಿ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಮೊಬೈಲ್‌ ಟವರ್‌ನಿಂದ ಅಂತರ್‌ ರಾಷ್ಟ್ರೀಯ ಕರೆಯೊಂದು ಹೋಗಿತ್ತು. ಇದಾದ ಬಳಿಕ ಪೊಲೀಸರು ಹೆಚ್ಚು ಜಾಗರೂಕರಾಗಿದ್ದರು. ಕೇರಳ ಸೇರಿ ಇತರ ರಾಜ್ಯಗಳೊಂದಿಗೆ ನಿರಂತರ ಸಂಪರ್ಕ ಹೊಂದಿದವರ ಮೇಲೆ ನಿಗಾ ಇರಿಸಲಾಗಿತ್ತು. ಇದರ ಫ‌ಲವಾಗಿ ಶನಿವಾರ ರಾತ್ರಿ ಇಬ್ಬರು ಶಂಕಿತ ಉಗ್ರರನ್ನ ಬಂಧಿಸಲಾಗಿದೆ.

ಇಬ್ಬರು ಶಂಕಿತ ಉಗ್ರರ ಬಂಧನದ ನಂತರ ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್‌ ಪೋಸ್ಟ್‌ ನಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next