ಬರ್ಮಿಂಗ್‌ಹ್ಯಾಮ್: ಪ್ರತಿದಿನ ಬೆಳಗ್ಗೆ ನಮ್ಮ ಹಲ್ಲುಗಳನ್ನು ಟೂತ್‌ಬ್ರಷ್‌ನಿಂದ ಸುಮಾರು 2 ನಿಮಿಷಗಳ ಕಾಲ ಉಜ್ಜಿ ಶುಚಿಗೊಳಿಸಬೇಕು ಎಂಬ ಸಲಹೆಯನ್ನು ಚಿಕ್ಕವರಿದ್ದಾಗಿನಿಂದ ಕೇಳಿರುತ್ತೇವೆ. ಆದರೆ, ಇತ್ತೀಚಿನ ಅಧ್ಯಯನದ ಪ್ರಕಾರ, ಎರಡು ನಿಮಿಷಗಳ ಬ್ರಷಿಂಗ್ ಸಾಕಾಗಿದೆ ಯಾದರೂ ಹಲ್ಲುಗಳು ಪೂರ್ತಿ ಸ್ವಚ್ಛವಾಗಲು, ದೀರ್ಘವಾಗಿ ಬಾಳಿಕೆ ಬರಲು ನಾಲ್ಕು ನಿಮಿಷಗಳವರೆಗೆ ಸ್ವಚ್ಛಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಉಪಯೋಗ:
ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾ, ಫಂಗೈ ಹಾಗೂ ವೈರಾಣುಗಳು ತಮ್ಮದೇ ಆದ ಪ್ರತ್ಯೇಕ ಸ್ತರಗಳಲ್ಲಿ ಒಟ್ಟಿಗೆ ಸಹಜೀವನ ನಡೆಸುತ್ತಿರುತ್ತವೆ. ಈ ಬಡಾವಣೆ ಸ್ವರೂಪದ ಸಹಜೀವನವನ್ನು ಬಯೋಫಿಲ್ಮ್ಸ್ ಎಂದು ಕರೆಯಲಾಗುತ್ತದೆ. ಈ ಬಯೋಫಿಲ್ಮ್ ಹೆಚ್ಚು ಅಂಟುವಿಕೆಯ ಗುಣವನ್ನು ಹೊಂದಿದೆ.
ಹಾಗಾಗಿ, ಕೇವಲ 2 ನಿಮಿಷಗಳ ಬ್ರಷಿಂಗ್‌ನಿಂದ ಇದು ಸುಲಭವಾಗಿ ತೊಲಗಿಹೋಗುವುದಿಲ್ಲ. ಇನ್ನು, ಬ್ರಷ್ ತಾಗದ ಕಡೆಗಳಲ್ಲಿ ಇದು ಹಲ್ಲುಗಳಿಗೆ ತೆಳುಪರದೆಯ ರೂಪದಲ್ಲಿ ಅಂಟಿಕೊಂಡೇ ಇರುತ್ತದೆ. ನಾಲ್ಕು ನಿಮಿಷಗಳ ಬ್ರಷಿಂಗ್ ಮಾಡಿದರಷ್ಟೇ ಇದು ಸಂಪೂರ್ಣವಾಗಿ ತೊಲಗಿಹೋಗುತ್ತದೆ. ಹಲ್ಲುಗಳ ಎಲ್ಲಾ ಭಾಗಗಳಿಗೂ ಬ್ರಷ್ ತಲುಪುವುದನ್ನು ಖಾತ್ರಿ ಪಡಿಸಿಕೊಂಡು ಉಜ್ಜಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ನಾನು ಕಂಬಳಿ ನೇಯ್ದಿಲ್ಲ, ಆದ್ರೆ ಕುರಿ ಉಣ್ಣೆ ಮಾರಿದ್ದೇನೆ: ಸಿದ್ಧರಾಮಯ್ಯ
ಈ ಬಯೋಫಿಲ್ಮ್ ತೊಲಗದೇ ಉಳಿದರೆ ಅದರಿಂದ ಮುಂದೆ ಹುಳುಕು ಹಲ್ಲು ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಲಾಗಿದೆ.