Advertisement
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರ ಜತೆಗೆ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಮುಂಚೂಣಿಗೆ ಬಂದ ಅರವಿಂದ ಕೇಜ್ರಿವಾಲ್ 2012ರ ಅಕ್ಟೋಬರ್‌ನಲ್ಲಿ ಆಮ್ ಆದ್ಮಿ ಪಕ್ಷ ಸ್ಥಾಪನೆ ಮಾಡಿದ್ದರು. ದೆಹಲಿಯಿಂದ ಆರಂಭವಾಗಿ ಇದೀಗ ಪಕ್ಕದ ಪಂಜಾಬ್ ನಲ್ಲಿನ ಜಯದಿಂದಾಗಿ ಪ್ರಾದೇಶಿಕ ಪಕ್ಷವಾಗಿರುವ ಆಪ್ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಾಗುತ್ತಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು.
Related Articles
Advertisement
ಲೋಕಸಭೆ ಸ್ಥಾನಗಳ ಜೊತೆಗೆ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಸ್ಪರ್ಧಿಸಿ ಶೇ.6ಕ್ಕಿಂತ ಹೆಚ್ಚು ಮತಗಳನ್ನು ಪಡೆಯಬೇಕು. ಹಿಂದಿನ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ಗೆ ಶೇ.54, ಗೋವಾದಲ್ಲಿ ಶೇ. 6.77, ಪಂಜಾಬ್‌ನಲ್ಲಿ ಶೇ.42, ಉತ್ತರಾಖಂಡದಲ್ಲಿ ಶೇ.3.4, ಉತ್ತರ ಪ್ರದೇಶದಲ್ಲಿ ಶೇ.0.3 ಮತಗಳನ್ನು ಪಡೆದು ಕೊಂಡಿದೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ”ಅಪ್ಪನ ಆಣೆ..” ಹೇಳಿಕೆ ನೆನಪಿಸಿ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ
ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ‘ರಾಜ್ಯ ಪಕ್ಷ’ ಎಂದು ಗುರುತಿಸಿಕೊಳ್ಳಬೇಕು. ಗೋವಾ, ದೆಹಲಿ ಮತ್ತು ಪಂಜಾಬ್ ನಲ್ಲಿ ಮಾತ್ರ ಪಕ್ಷಕ್ಕೆ ಮನ್ನಣೆಯಿದೆ. ಯಾವುದೇ ಪಕ್ಷವು ರಾಜ್ಯ ಪಕ್ಷವೆಂದು ಗುರುತಿಸಲ್ಪಡಬೇಕಾದರೆ, ಅದು ವಿಧಾನಸಭಾ ಚುನಾವಣೆಗಳಲ್ಲಿ ಮತ್ತು ಎರಡು ವಿಧಾನಸಭಾ ಸ್ಥಾನಗಳ ಸಮಯದಲ್ಲಿ ಶೇಕಡಾ ಆರರಷ್ಟು ಮತಗಳನ್ನು ಗಳಿಸಬೇಕು; ಅಥವಾ ರಾಜ್ಯದಿಂದ ಲೋಕಸಭೆಯಲ್ಲಿ ಶೇಕಡಾ ಆರರಷ್ಟು ಮತಗಳು ಮತ್ತು ರಾಜ್ಯದಿಂದ ಸಂಸದ; ಅಥವಾ ಒಟ್ಟು ಅಸೆಂಬ್ಲಿ ಸ್ಥಾನಗಳ ಶೇಕಡಾ ಮೂರು ಅಥವಾ ಮೂರು ಸ್ಥಾನಗಳು (ಯಾವುದು ಹೆಚ್ಚು); ಅಥವಾ ಪ್ರತಿ 25 ಲೋಕಸಭಾ ಸ್ಥಾನಗಳಲ್ಲಿ ಒಬ್ಬ ಸಂಸದ ಅಥವಾ ರಾಜ್ಯದಿಂದ ಲೋಕಸಭೆ ಚುನಾವಣೆಯ ಸಮಯದಲ್ಲಿ ಅಥವಾ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಒಟ್ಟು ಮತಗಳ ಶೇಕಡಾ ಎಂಟುರಷ್ಟನ್ನು ಅದು ಪಡೆದಿರಬೇಕು.
ಆಪ್ ಸಾಧನೆ ಏನು?
ಮೊತ್ತಮೊದಲ ಪ್ರಯತ್ನವೆಂಬಂತೆ 2013ರಲ್ಲಿ ದೆಹಲಿ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳಲ್ಲಿ ಗೆದ್ದಿದ್ದರು ಮತ್ತು ಅಲ್ಪಮತದ ಸರ್ಕಾರ ಸ್ಥಾಪಿಸಿದ್ದರು. 2014ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆಯಲ್ಲಿ ಜನಲೋಕಪಾಲ ವಿಧೇಯಕ ಅಂಗೀಕರಿಸಲು ಸಾಧ್ಯವಾಗದ್ದಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಆಪ್ ಅಭೂತ ಪೂರ್ವವಾಗಿ ಜಯ ಸಾಧಿಸಿತ್ತು ಮತ್ತು 2019ರ ವಿಧಾನಸಭೆ ಚುನಾವಣೆಯಲ್ಲಿಯೂ ಗೆದ್ದು ಅಧಿಕಾರ ಉಳಿಸಿಕೊಂಡಿದ್ದರು.
ಇದನ್ನೂ ಓದಿ:ಸೋನಿಯಾ ಕೋಟೆಯಲ್ಲಿ ಕಮಲ ಬಾವುಟ; ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಅದಿತಿ ಸಿಂಗ್ ಗೆ ಜಯ!
2017ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 20 ಕ್ಷೇತ್ರಗಳಲ್ಲಿ ಗೆದ್ದು ಪ್ರಧಾನ ಪ್ರತಿಪಕ್ಷವಾಯಿತು. ಇದೀಗ ಪಂಜಾಬ್ ಚುನಾವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಂಡಿದೆ. ಸೂರತ್ ಪಾಲಿಕೆ ಚುನಾವಣೆ ಮತ್ತು ಚಂಡೀಗಡ ಪಾಲಿಕೆ ಚುನಾವಣೆಯಲ್ಲೂ ಕೇಜ್ರಿವಾಲ್ ಪಕ್ಷ ಗಣನೀಯ ಸಾಧನೆ ಮಾಡಿದೆ.
2017ರಿಂದ 2022ರ ವರೆಗೆ ಕರ್ನಾಟಕ ಸೇರಿ ದಂತೆ ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಪ್ ಸ್ಪರ್ಧಿಸಿ ಸೋತಿದೆ. ಪ್ರಸಕ್ತ ಸಾಲಿನ ಗೋವಾ ವಿಧಾನಸಭೆ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಗೆದ್ದಿದೆ. ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆಯಲ್ಲೂ ಆಪ್ ಅದೃಷ್ಟ ಪರೀಕ್ಷಿಸಿಕೊಳ್ಳಲಿದೆ.